ಎಲ್ಲಾ ಇಲಾಖೆಗಳಲ್ಲೂ ಇ-ಆಫೀಸ್ ತಂತ್ರಾAಶವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ : ಎಂ.ಪಿ.ಮಾರುತಿ

ಕೊಪ್ಪಳ ಜ. 04  : ಸರ್ಕಾರದ ನಿರ್ದೇಶನದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಕಚೇರಿ ಹಾಗೂ ಇನ್ನಿತರೆ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾAಶವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಇನ್ನು 15 ದಿನಗಳಲ್ಲಿ ಅನುಷ್ಠಾನದ ಪ್ರಗತಿ ಕುರಿತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೆಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ(ಜ. 03) ರಂದು ಇ-ಆಫೀಸ್ ತಂತ್ರಾAಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತು ನಡೆದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದನ್ವಯ ಈಗಾಗಲೇ ಕೆಲವು ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾAಶವನ್ನು ಬಳಕೆ ಮಾಡಲಾಗುತ್ತಿದೆ. ಅದರಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಹಂತ ಹಂತವಾಗಿ ಇ-ಕಚೇರಿ ತಂತ್ರಾAಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯನ್ವಯ ಜಿಲ್ಲಾ ಮಟ್ಟದಲ್ಲಿ ಇ-ಆಫೀಸ್‌ನ ತಂತ್ರಾAಶದ ಪ್ರಗತಿಯ ಮೇಲ್ವಿಚಾರಣೆ ಮಾಡಲು ಆಯಾ ಜಿಲ್ಲಾ ಉಪ ವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಹಾಗೂ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ(ಆಡಳಿತ) ರವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅದರಂತೆ ಇ-ಆಫೀಸ್ ತಂತ್ರಾAಶದ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಡಿಓಗಳನ್ನು ಹಾಗೂ ಆಯಾ ಕಚೇರಿ ಮುಖ್ಯಸ್ಥರು, ಆಡಳಿತಾಧಿಕಾರಿ, ಮ್ಯಾನೇಜರ್‌ಗಳನ್ನು ಇ-ಆಫೀಸ್ ಅನುಷ್ಠಾನಕ್ಕೆ ಸ್ಥಳೀಯ ನಿರ್ವಹಣಾ ಅಧಿಕಾರಿ(ಲೋಕಲ್ ಅಡ್ಮಿನ್)ಗಳನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸ್ಥಳೀಯ ನಿರ್ವಹಣಾ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಎಲ್ಲಾ ಸಿಬ್ಬಂದಿಗಳ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಬೇಕು. ಹಾಗೂ ಎಲ್ಲರ ಇ-ಮೇಲ್ ಐಡಿ ಸೃಜಿಸಲು ಆನ್‌ಲೈನ್ ಮೂಲಕ hಣಣಠಿs://eಜಿoಡಿms.ಟಿi.iಟಿ ನಲ್ಲಿ ಅಪ್‌ಲೋಡ್ ಮಾಡಬೇಕು. ಇ- ಆಡಳಿತ ಕೇಂದ್ರದ ಜೊತೆ ಸಂವಹಿಸಿ ಎಲ್ಲಾ ಉದ್ಯೋಗಿಗಳ ಯುಸರ್ ಐಡಿ ಮತ್ತು ಪಾಸ್‌ವರ್ಡ್ ಪಡೆದುಕೊಂಡು ಸಂಬAಧಪಟ್ಟ ಸಿಬ್ಬಂದಿಗೆ ನೀಡಬೇಕು ಹಾಗೂ ಪಾಸ್‌ವರ್ಡ್ನ್ನು ಬದಲಿಸಿಕೊಳ್ಳಲು ಸೂಚಿಸಬೇಕು. ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಕ್ಕೆ ಅಗತ್ಯವಿರುವ ನೆಟ್‌ವರ್ಕ್ (ಏSWಂಓ) ಪಡೆದುಕೊಂಡು ದೈನಂದಿನ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಯಾವುದೇ ಸಿಬ್ಬಂದಿ ವರ್ಗಾವಣೆ, ನಿವೃತ್ತಿ, ಸೇವಾ ವಿಮುಕ್ತಿ ಹೊಂದಿದಾಗ ಅವರ ಖಾತೆಯನ್ನು ವರ್ಗಾಯಿಸಲು ಅಥವಾ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು. ವರದಿ ಮಾಡಿಕೊಳ್ಳುವ ನೂತನ ಸಿಬ್ಬಂದಿಗೆ ಯುಸರ್ ಐಡಿ ಸೃಜಿಸಲು ಸಿಇಜಿಯನ್ನು ಸಂಪರ್ಕಿಸಬೇಕು. ಕಚೇರಿಯ ಎಲ್ಲಾ ಸಿಬ್ಬಂದಿಯೂ ಕಡತ ನಿರ್ವಹಣೆಗೆ ಇ–ಆಫೀಸ್ ತಂತ್ರಾAಶವನ್ನು ಶೇ. 100 ರಷ್ಟು ಉಪಯೋಗಿಸುತ್ತಿರುವ ಕುರಿತು ದೃಢಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇ-ಆಫೀಸ್ ತಂತ್ರಾAಶ ಕಾರ್ಯ ನಿರ್ವಹಣೆಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಅದನ್ನು ಇ-ಮೇಲ್ ಅಥವಾ ಹೆಲ್ಪ್ಡೆಸ್ಕ್ ಮೂಲಕ ಸಿಇಜಿ ಆಫೀಸ್ ತಂಡದ ಗಮನಕ್ಕೆ ತಂದು ಶೀಘ್ರವಾಗಿ ಸರಿಪಡಿಸಿಕೊಳ್ಳಬೇಕು. ಕಾಲಕಾಲಕ್ಕೆ ಇ-ಆಫೀಸ್ ವರದಿಗಳನ್ನು ಮತ್ತು ಎಂಐಎಸ್ ವಿವರಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ನೂತನ ಸಿಬ್ಬಂದಿ ವರದಿ ಮಾಡಿಕೊಂಡಾಗ ಜಿಲ್ಲಾ ತರಬೇತಿ ಸಂಸ್ಥೆಯ ವತಿಯಿಂದ ತರಬೇತಿ ಕೊಡಿಸಬೇಕು. ಡಿಜಿಟಲ್ ಸಹಿಗಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರಿಗಳಿಗಾಗಿ ನೀಡಲಾಗುವ ಡಿಎಸ್‌ಸಿ-ಡೋಂಗಲ್‌ನ್ನು ಸಿಇಜಿ ಮೂಲಕ ಪಡೆದು ಅಧಿಕಾರಿಗಳು ಉಪಯೋಗಿಸಿ ಸಹಿ ಮಾಡುತ್ತಿರುವುದನ್ನು ದೃಢಪಡಿಸಿಕೊಳ್ಳಬೇಕು. ವಿಪಿಎನ್‌ಗಾಗಿ ಬೇಡಿಕೆ ಸಲ್ಲಿಸುವ ಅಧಿಕಾರಿಗಳಿಂದ ಅರ್ಜಿ ಪಡೆದು ಸಿಇಜಿ ಜೊತೆಗೆ ವ್ಯವಹರಿಸಿ ವಿಪಿಎನ್ ದೊರಕುವಂತೆ ಮಾಡಬೇಕು ಹಾಗೂ ಅದರ ವಿವರಗಳನ್ನು ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿ ಅಗತ್ಯಕ್ಕೆ ತಕ್ಕಂತೆ ಕಂಪ್ಯೂಟರ್ ಸೇರಿದಂತೆ ಇ-ಆಫೀಸ್ ತಂತ್ರಾAಶದ ಅನುಷ್ಠಾನಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುವಂತೆ ಸಂಬAಧಿಸಿದ ಕೇಂದ್ರ ಕಚೇರಿಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿ. ಇ-ಆಫೀಸ್ ತಂತ್ರಾAಶದ ಅನುಷ್ಠಾನದಲ್ಲಿ ವಿಳಂಬವಾದರೆ ಆಯಾ ಕಚೇರಿ ಮುಖ್ಯಾಧಿಕಾರಿಯನ್ನೇ ಹೊಣೆ ಮಾಡಲಾಗುವುದು. ಹಾಗೂ ಸಂಬAಧಿಸಿದ ಅಧಿಕಾರಿಯ ಕುರಿತು ಕೇಂದ್ರ ಕಚೇರಿಗೆ ಪತ್ರ ಬರೆಯಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ಶೇ. 90 ರಷ್ಟು ಇ-ಆಫೀಸ್ ತಂತ್ರಾAಶವನ್ನು ಬಳಕೆ ಮಾಡಲಾಗುತ್ತಿದೆ. ಜಿಲ್ಲಾಡಳಿತದ ತಾಂತ್ರಿಕ ತಂಡದಿAದ ಇ-ಆಫೀಸ್ ಅನುಷ್ಠಾನಕ್ಕೆ ಸಂಬAಧಿಸಿದ ಎಲ್ಲ ರೀತಿಯ ತಾಂತ್ರಿಕ ನೆರವನ್ನು ನೀಡಲಾಗುತ್ತದೆ. ನೆಟ್‌ವರ್ಕ್ ಹಾಗೂ ಅಂತರ್ಜಾಲ ಸಂಪರ್ಕಕ್ಕೆ ಸಂಬAಧಿಸಿದAತೆ ಏSWಂಓ ನೆರವನ್ನು ಪಡೆಯಬಹುದು. ಜಿಲ್ಲಾ ಮಟ್ಟದಲ್ಲಿ ಮೊದಲು ಇ-ಆಫೀಸ್ ಅನುಷ್ಠಾನಗೊಳಿಸಿ ನಂತರ ತಾಲ್ಲೂಕು ಕಚೇರಿಗಳಲ್ಲೂ ಜಾರಿಗೆ ತರಬೇಕು ಎಂದು ಸೂಚಿಸಿದರು.
ಇ-ಆಫೀಸ್ ತಂತ್ರಾAಶದ ಪರಿಣಾಮಕಾರಿ ಅನುಷ್ಠಾನಕ್ಕೆ ಕಚೇರಿಯ ಎಲ್ಲಾ ಸಿಬ್ಬಂದಿಗಳಿಗೂ ಕಂಪ್ಯೂಟರ್ ಬಳಕೆ ಕುರಿತು ಜ್ಞಾನವಿರಬೇಕು. ಆದ್ದರಿಂದ ಇದುವರೆಗೂ ಕಂಪ್ಯೂಟರ್ ಬಳಸದೇ ಇರುವವರು ಕಂಪ್ಯೂಟರ್ ಬಳಕೆಯನ್ನು ಕಲಿಯಿರಿ. ಅಲ್ಲದೇ ಕಂಪ್ಯೂಟರ್ ಸಾಕ್ಷರತೆಯು ಉದ್ಯೋಗದಲ್ಲಿ ಬಡ್ತಿ ಪಡೆಯಲು ಹಾಗೂ ಖಾಯಂ ಪೂರ್ವ ಅವಧಿ ಘೋಷಿಸಲು ಕಡ್ಡಾಯವಾಗಿದ್ದು, ಎಲ್ಲರೂ ಕಂಪ್ಯೂಟರ್ ಬಳಕೆಯನ್ನು ಕಲಿಯಿರಿ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಎನ್‌ಐಸಿಯ ಬಸವರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error