fbpx

ಎರಡು ಗಂಟೆ ಹೆದ್ದಾರಿ ತಡೆ ಚಳುವಳಿ: ೧೦೦೦ ಕಾರ್ಮಿಕರ ಬಂಧನ

tuci_koppal tuci_koppal_protest tuci_koppal_protest_highway

ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಮುನಿರಾಬಾದ್ ಮುಖ್ಯ ಅಭಿಯಂತರರ ಕಛೇರಿ ಮುಂದೆ ದಿ: ೧೭ ರಿಂದ ನಡೆದಿರುವ ತುಂಗಭದ್ರಾ ನೀರಾವರಿ ಕಾರ್ಮಿಕರ ಮುಷ್ಕರ ಇಂದು ೨ ಗಂಟೆಗಳ ಕಾಲ ಹೆದ್ದಾರಿ(ಎನ್‌ಹೆಚ್-೫೦) ತಡೆ ಚಳುವಳಿ ನಡೆಯಿಸಿ ಯಶಸ್ವಿಗೊಂಡಿತು. ಕಾರ್ಮಿಕ ವಿರೋಧಿ ಕಾಂಗ್ರೆಸ್ ಸರಕಾರ ಹಾಗೂ ನೀರಾವರಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು ಮುನಿರಾಬಾದ್‌ನಲ್ಲಿ ೧ ಗಂಟೆ ಮೆರವಣಿಗೆ ನಡೆಯಿಸಿ ತದನಂತರ ಸರಾಸರಿ ೨ ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿ ಸರಕಾರದ ವಿರುದ್ದ ಕಿಡಿಕಾರಿದರು. ಟಿಯುಸಿಐನ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ನೇತೃತ್ವದಲ್ಲಿ ನಡೆದ ಈ ಚಳುವಳಿಯಲ್ಲಿ ೧೦೦೦ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ಬಂಧಿಸಿದರು. ಹುಲಿಗಿ ಕ್ರಾಸ್‌ನಿಂದ ಪೊಲೀಸ್ ಠಾಣೆಗೆ ಬಂಧಿತ ಕಾರ್ಮಿಕರನ್ನು ಪೊಲೀಸ್ ಅಧಿಕಾರಿಗಳು, ಕೊಪ್ಪಳ ಜಿಲ್ಲಾಧಿಕಾರಿಗಳ ನೆರವಿನೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಕಳುಹಿಸಿ ೪೦೦ ಅಡಿ ಅಗಲದ ರಸ್ತೆಯನ್ನು ಬಂದ್ ಮಾಡಿ ಮುಷ್ಕರ ನಡೆಸಿದರು. ಕೂಲಿ ಕೇಳಿದರೆ ಬಂಧಿಸಿ ಎಳೆದೊಯ್ಯುವ ರಾಜ್ಯ ಸರಕಾರದ ವಿರುದ್ದ ಮುಷ್ಕರ ಮುಂದುವರೆಸುವ ತೀರ್ಮಾನವನ್ನು ಘೋಷಿಸಿದರು. ಆರ್. ಮಾನಸಯ್ಯ, ಜಿ.ಅಡವಿರಾವ್, ರಮೇಶ್, ರಾಮಣ್ಣ, ಸಿದ್ದಪ್ಪಗೌಡ, ಕುಮಾರ್ ಪಡಶೆಟ್ಟಿ, ಬಸವರಾಜ, ಹುಲಿಗೆಣ್ಣ, ಆದೇಶ ನಗನೂರು, ಬಸವರಾಜ ಬಾಗಲವಾಡ ಶರಣುಬಸವ ಸೇರಿದಂತೆ ಬಂಧಿತರನ್ನು ಪುನಾ: ಬಿಡಾರಕ್ಕೆ ತೆರಳಿ ಮುಷ್ಕರ ಮುಂದುವರೆಸಿದ್ದಾರೆ.

Please follow and like us:
error

Leave a Reply

error: Content is protected !!