ಎರಡನೇ ಬೆಳೆಗೆ ನೀರು ಸಿಗೋದು ಡೌಟ್

ಮೂರು ಜಿಲ್ಲೆಯ ಲಕ್ಷಾಂತರ ರೈತರ ಕಷ್ಟ- ನಷ್ಟಗಳ ಬಗ್ಗೆ ಚರ್ಚಿಸಬೇಕಿದ್ದ ಸಭೆ. …ಜಲಸಂಪನ್ಮೂಲ ಸಚಿವರೂ ಆಗಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಸಭೆಗೆ ಗೈರಾದರೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಎರಡನೇ ಬೆಳೆಗೆ ನೀರು ಬಿಡಲೇ ಬೇಕು ಅಂತಾ ಪ್ರತಿಭಟನೆ ಮಾಡ್ತಿರೋ ರೈತರು..ಎರಡನೇ ಬೆಳೆಗೆ ನೀರು ಬಿಡುವುದು ಇರಲಿ, ಮೊದಲ ಬೆಳೆ ಕೈಗೆ ಬರುವವರೆಗೆ ನೀರು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸ್ತಿರೋ ರೈತ ಮುಖಂಡರು.ಬರೋಬ್ಬರಿ 6 ಗಂಟೆ ಸಭೆ ಮಾಡಿದ್ರೂ ಸಭೆಯ ನಿರ್ಣಯದ ಬಗ್ಗೆ ಮಾಹಿತಿ ನೀಡದೇ ಪಲಾಯನ ಮಾಡಿದ ಸಚಿವ ವೆಂಕಟರಾವ್ ನಾಡಗೌಡ. ಹೌದು! ಕೊಪ್ಪಳದ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಂಡು ಬಂದ ದೃಶ್ಯಗಳಿವು. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ಆಂಧ್ರಪ್ರದೇಶದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಯಾವ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಬೇಕು ಎನ್ನುವ ಕುರಿತು ಇಂದು ಸಭೆ ನಡೆಯಿತು. ಬರೋಬ್ಬರಿ 6 ಗಂಟೆ ನಡೆದ ಸಭೆಯಲ್ಲಿ ಮೂರು ಜಿಲ್ಲೆಯ ಶಾಸಕರು, ಸಂಸದರು ಮತ್ತು ಅಧಿಕಾರಿಗಳು ಭಾಗವಹಿಸಿದ್ರು. ಅಷ್ಟು ಗಂಟೆಗಳ ಕಾಲ ನಡೆದ
ಸಭೆ ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಸಚಿವ ವೆಂಕಟರಾವ್ ನಾಡಗೌಡ ಪಲಾಯನ ಮಾಡಿದ್ರು.

: ಸದ್ಯ ಜಲಾಶಯದಲ್ಲಿ ಕೇವಲ 54.೬೫ ರಷ್ಟು ಟಿಎಂಸಿ ನೀರಿವೆ. ಈ ಪೈಕಿ ಸುಮಾರು 20 ಟಿಎಂಸಿ ನೀರು ಆಂಧ್ರದ ಪಾಲು ತೆಗೆದರೆ, ಬಾಕಿ 34 ಟಿಎಂಸಿ ನೀರಿನಲ್ಲಿ , ಜನೆವರಿ 19ರ ವರೆಗೆ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಬೆಳಗೆ ಹರಿಸಬೇಕಿದೆ. ನಂತರ ಕೇವಲ 15 ರಿಂದ 18 ಟಿಎಂಸಿ ನೀರು ಮಾತ್ರ ಬಾಕಿ ಉಳಿಯುತ್ತೆ. ಇಷ್ಟು ನೀರಿನಲ್ಲಿ ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡುವುದು ಕಷ್ಟ‌ಸಾಧ್ಯ ಎಂಬ ಮಾತೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕಾಲುವೆ ವ್ಯಾಪ್ತಿಯ ಮೇಲ್ಬಾಗದ ರೈತರು, ಕೂಡಲೇ ನೀರು ಹರಿಸೋದನ್ನು ನಿಲ್ಲಿಸಿ, ಎರಡನೇ ಬೆಳೆಗೆ ನೀರು ಬಿಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡಿದರು. ಆದ್ರೆ, ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಮಾತ್ರ, ನಮ್ಮ ಮೊದಲ ಬೆಳೆಯೇ ಇನ್ನೂ ಕೈಗೆ ಬಂದಿಲ್ಲ. ಈ ಹಿನ್ನೆಲೆ ಇನ್ನು ಎರಡು ತಿಂಗಳು ಮೊದಲ ಬೆಳೆಗಾಗಿ ನೀರು ಹರಿಸಬೇಕು ಅಂತಾ ವಾದಿಸಿದ್ರು. ಈ ಬಾರಿ ತುಂಗಭದ್ರಾ ಜಲಾಶಯ ನಿರೀಕ್ಷೆಗೂ ಮೊದಲೇ ಭರ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಎರಡು ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆ ರೈತರದ್ದಾಗಿತ್ತು. ಆದ್ರೆ, ಹಿಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಈ ಬಾರಿಯೂ ರೈತರು ಎರಡನೇ ಬೆಳೆ ಬೆಳೆಯಲು ಪರದಾಡುವಂತಾಗಿದೆ. ಒಂದೊಮ್ಮೆ ಬಿಡುವುದಾದ್ರೆ, ಭತ್ತದ ಹೊರತಾಗಿ ಬೆಳೆ ಬೆಳೆಯುವಂತೆ ಸೂಚನೆ ನೀಡಿ, ನೀರು ಬಿಡುವ ಸಾಧ್ಯತೆ ಇದೆ.

Please follow and like us:
error