ಎಬಿವಿಪಿ ಜಿಲ್ಲಾ ಘಟಕದ ವತಿಯಿಂದ ಸ್ತ್ರೀ ಶಕ್ತಿ ದಿವಸ್ ಆಚರಣೆ

ಕೊಪ್ಪಳ : ಡಿ.೦೩, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಪ್ಪಳ ಘಟಕದ ವತಿಯಿಂದ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ತ್ರೀ ಶಕ್ತಿ ದಿವಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಹಿಳೆಯರ ಬಗ್ಗೆ ಮತ್ತು ಅವರ ಸಾಧನೆ ಬಗ್ಗೆ ತಿಳಿಸುವಂತಹ ವಿಶಿಷ್ಟವಾದ ಕಾರ್ಯಕ್ರಮವು ಇದಾಗಿತ್ತು. ಪ್ರಾಧ್ಯಾಪಕಿ ಶ್ರೀಮತಿ ಲಲಿತಾ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಮುಖ್ಯ ಅತಿಥಿ ಸ್ಥಾನವನ್ನು ಉಪ ಪ್ರಾಂಶುಪಾಲರು ಶ್ರೀಮತಿ ಸರಿತಾ ಮೇಡಂ ವಹಿಸಿಕೊಂಡಿದ್ದರು. ಎಬಿವಿಪಿ ಜಿಲ್ಲಾ ಸಂಚಾಲಕ ಮಲ್ಲಪ್ಪ ಕುಣಿಕೇರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ. ಭಾರತೀಯ ಸಂಸ್ಕೃತಿ, ಮಹಿಳೆಯರಸಾಧನೆ, ಭಾರತೀಯ ಕ್ಷಾತ್ರಪರಂಪರೆಯಲ್ಲಿ ಮಹಿಳೆಯರು ನಿರ್ವಹಿಸಿರುವಪಾತ್ರ ಏನು ಎಂಬುದನ್ನು ಸ್ವವಿವರವಾಗಿ ತಿಳಿಸಿದರು. ನಂತರ ಮುಖ್ಯಅತಿಥಿಯಾಗಿ ಭಾಗವಹಿಸಿದ ಸರಿತಾ ಜಿ. ರವರು ಮಾತನಾಡುತ್ತಾ ಮಹಿಳೆಯರು ಸ್ವಯಂ ಸ್ವಾಲಂಬಿಯಾಘಿ ಜೀವನ ನಡೆಸುವಂತಾಗಬೇಕು ಎಲ್ಲಾ ಕ್ಷೇಥ್ರದಲ್ಲಿ ಮಹಿಳೆಯರು ಅತ್ಯನ್ನತ ಸಾಧನೆಯನ್ನು ಮಾಡಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು ಜೊತೆಗೆ ಇನ್ನೊಬ್ಬರ ಮೇಲೆ ಅವಲಂಬನೆಯಾಗದೆ ನಮಗೆ ನೀಡಿರುವಂತಹ ಸಾಂವಿಧಾನಿಕ ಹಕ್ಕುಗಳನ್ನು ಬಳಸಿಕೊಂಡು ಸ್ವಾವಲಂಭಿಯಾಗಬೇಕು ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಪಕಿಯರಾದ ಲಲಿತಾ ಅಂಗಡಿ ರವರು ಮಾತನಾಡಿ ದೇಶಕ್ಕಾಗಿ ಅನೇಕ ಮಹಿಳೆಯರು ಹೋರಾಟವನ್ನು ಮಾಡಿ ತಮ್ಮ ಜೀವನ್ನವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ ಅವರ ಬಲಿದಾನವು ವ್ಯರ್ಥವಾಗದಂತೆ ಹಿಂದಿನ ಯುವ ಜನತೆ ರಾಷ್ಟ್ರಕಾರ್ಯದತ್ತ ಸಾಗಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಪಕರಾದ ಸಿದ್ದಣ್ಣ, ವಿರೇಶ, ಅಶ್ವಿನಿ, ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಎಬಿವಿಪಿ ನಗರ ಕಾರ್ಯದರ್ಶಿ ಪ್ರಕಾಶ ನಿರೂಪಿಸಿದರು, ಬ್ರಹ್ಮಾನಂದ ಚಿತ್ರಗಾರ ಸ್ವಾಗತಿಸಿ ವಿದ್ಯಾರ್ಥಿ ಅಶ್ವಿನಿ ವಂದಿಸಿದರು

Please follow and like us:
error