You are here
Home > Koppal News > ಎನ್ ಪಿ ಎಸ್ ಯೋಜನೆಯನ್ನು ರದ್ದು ಪಡಿಸುವಂತೆ ಸರ್ಕಾರಿ ನೌಕರರ ಒತ್ತಾಯ 

ಎನ್ ಪಿ ಎಸ್ ಯೋಜನೆಯನ್ನು ರದ್ದು ಪಡಿಸುವಂತೆ ಸರ್ಕಾರಿ ನೌಕರರ ಒತ್ತಾಯ 

ಬೈಕ್ ರ್ಯಾಲಿ ಹಾಗು ರಕ್ತದಾನ ಮೂಲಕ ಪ್ರತಿಭಟನೆ
ಕೊಪ್ಪಳ : ಎನ್​ಪಿಎಸ್ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರಿಂದ  ಪ್ರತಿಭಟನೆ ನಡೆಯಿತು.
ಕೊಪ್ಪಳ ನಗರದ ಗವಿಮಠದ ಆವರಣದಿಂದ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದ ನೌಕರರು ಎನ್​ಪಿಎಸ್ ವ್ಯಾಪ್ತಿಯ ನೌಕರರು ಯೋಜನೆಯನ್ನು ರದ್ದು ಪಡಿಸಲು ಆಗ್ರಹಿಸಿದರು.
ಭಾರತೀಯ ರೆಡ್​ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಮೂಲಕ ಒತ್ತಾಯ ಮಾಡಿದ ನೌಕರರು ರಾಜ್ಯ ಸರ್ಕಾರ 2006ರಲ್ಲಿ ಜಾರಿಗೆ ತಂದ ಎನ್​ಪಿಎಸ್ ಯೋಜನೆಯಿಂದ  ಅನಾನುಕೂಲವಾಗುತ್ತದೆ. ನಿವೃತ್ತಿ ಬಳಿಕ ನೌಕರರಿಗೆ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಇಲ್ಲ. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಘೋಷಣೆ ಕೂಗಿದರು.ರಕ್ತ ಕೊಟ್ಟೆವು ಪಿಂಚಣಿ ಬಿಡೆವು ಎಂಬ ಘೋಷಣೆಯೊಂದಿಗೆ  ಹೋರಾಟ ಮಾಡಿದರುವ ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.
Top