ಎನ್.ಡಿ.ಎ ಸರಕಾರದಲ್ಲಿ ದೇಶ ಅಭದ್ರ-ಕಾಟನ್ ಪಾಷಾ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರದಲ್ಲಿ ದೇಶವು ಅಭದ್ರ ಸ್ಥಿತಿಯತ್ತ ಸಾಗುತ್ತಿದೆ.  ಈ ೬ ವರ್ಷದ ಅವಧಿಯಲ್ಲಿ ಸುಮಾರು ಸಾವಿರಾರು ದೇಶದ ಯೋದರು ಹುತಾತ್ಮರಾಗಿದ್ದಾರೆ, ಕೇವಲ ತಮ್ಮ ಭಾಷಣದ ಮೂಲಕ ಜನರಿಗೆ ಸುಳ್ಳ ಆಶ್ವಾಸನೆ ನೀಡಿ ಸತ್ಯವನ್ನು ಮರೆಮಾಚಿಸುತ್ತಿರುವ ಕೇಂದ್ರದ ಬಿ.ಜೆ.ಪಿ ಸರಕಾರವು ಏಕ ವ್ಯಕ್ತಿಯ ಅಧಿಪತ್ಯವುಳ್ಳ ಸರಕಾರವಾಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಸರಕಾgವಾಗಿದೆ ಎಂದು  ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಟನ್ ಪಾಷ ಹೇಳಿದರು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಶಹೀದೋಂಕೊ ಸಲಾಂ ದಿವಸ ಆಚರಣೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ  ಚೀನಾ ದೇಶದ ಸೈನಿಕರೊಂದಿಗೆ ಹೋರಾಡಿ ಹುತಾತ್ಮರಾದ ಯೋದರ ಸ್ಮರಣಾರ್ತವಾಗಿ ಇಂದು ಕಾಂಗ್ರೆಸ್ ಪಕ್ಷದಿಂದ ಯೋದರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ನಗರಸಭಾ ಸದಸ್ಯರುಗಳಾದ ಅಮ್ಜದ ಪಟೇಲ್, ಬಸಯ್ಯ ಹಿರೇಮಠ, ರಮೇಶ ಗಿಣಿಗೇರಾ, ಅಜೀಮ್ ಅತ್ತಾರ್, ಮಂಜುನಾಥ ಗಾಳಿ, ಅಕ್ಬರಪಾಷ ಪಲ್ಟನ್, ಮುಂಖಡರುಗಳಾದ ನಾಗರಾಜ ಬಳ್ಳಾರಿ, ಕಿಶೋರಿ ಬೂದನೂರ, ಬಾಷುಸಾಬ ಖತಿಬ್, ಮೌಲಹುಸೇನ್ ಜಮಾದಾರ, ರೇಷ್ಮಾ ಖಾಜವಲಿ, ಪರಶುರಾಮ ಕೆರೆಹಳ್ಳಿ, ಮಾನ್ವಿಪಾಷ, ಹುಸೇನ್‌ಪೀರ ಮುಜಾವರ, ಸಿದ್ದರೆಡ್ಡಿ ಭೂಮ್ಮಕನ್ವರ, ಮಹಮ್ಮದ್ ಹುಸೇನ್ ಮಂಡಲಗೇರಿ, ಸಲೀಮ ಅಳವಂಡಿ ಹಾಗೂ ಸಾಮಾಜಿಕ ಜಾಲತಾಣದ ಸಂಚಾಲಕ ಮುತ್ತುರಾಜ್ ಹಾಲವರ್ತಿ ಉಪಸ್ಥಿತರಿದ್ದರು.

Please follow and like us:
error