ಎತ್ತಿನ ಬಂಡಿ ಓಡಿಸಿ ಪ್ರತಿಭಟಿಸಿದ ಹಿಟ್ನಾಳ, ತಂಗಡಗಿ

ಕೊಪ್ಪಳ : ತೈಲ ಬೆಲೆ ಏರಿಕೆ ಹಿನ್ನೆಲೆ ಇಂದು ಭಾರತ ಬಂದ್ ಗೆ ಕೊಪ್ಪಳ ಜಿಲ್ಲೆಯಾಧ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 10:30 ಕ್ಕೆ ಪ್ರಾರಂಭ ಆಗಬೇಕಿದ್ದ ಪ್ರತಿಭಟನೆ ೧೧ ಗಂಟೆಗೆ ಆರಂಭವಾಯಿತು. ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನುಎತ್ತಿನ ಬಂಡಿಯನ್ನು ಓಡಿಸುವ ಮೂಲಕ ಮೆರವಣಿಗೆ ಆರಂಭಿಸಿತು.

ನಗರದ ಗಡಿಯಾರ ಕಂಬದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಜವಾಹರ ರಸ್ತೆಯ ಮೂಲಕ ಅಶೋಕ ಸರ್ಕಲ್ ತಲುಪಿತು.

ಪ್ರತಿಭಟನೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಶಾಸಕ ಅಮರೇಗೌಡ ಬಯ್ಯಾಪೂರ, ಡಿಸಿಸಿ ಅದ್ಯಕ್ಷ ಮಾಜಿ ಶಾಸಕ ಶಿವರಾಜ ತಂಗಡಗಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗಿಯಾಗಿದ್ದರು.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿರುವ ದೇಶಧ್ಯಂತ ಹೋರಾಟಕ್ಕೆ ಕೊಪ್ಪಳದಲ್ಲಿಯೂ ಸಹ ತಡವಾಗಿಯಾದರೂ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮೋದಿ ಹಟಾವೊ ಭಾರತ್ ಬಚಾವೋ ಘೋಷಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.