ಎತ್ತಂಗಡಿಯ ಹುನ್ನಾರದ ವಿರುದ್ದ ಧ್ವನಿ ಎತ್ತೋಣ…. ಪ್ರಾಮಾಣಿಕ ಅಧಿಕಾರಿಯ ಬೆನ್ನಿಗೆ ನಿಲ್ಲೋಣ…

ಇದು ನಮ್ಮ ದುರಂತವೇ ಹೌದು ನಮ್ಮ ಜಿಲ್ಲೆಯಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ನೆಲೆಯೇ ಇಲ್ಲ ಎನ್ನುವಂತಾಗಿದೆ. ಪಿ.ಸುನೀಲ್ ಕುಮಾರ್ ಅಗಸ್ಟ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಾಗಿನಿಂದ ದಕ್ಷ, ಪ್ರಾಮಾಣಿಕ ಹಾಗೂ ಖಡಕ್ಕಾಗಿ ಕೆಲಸ ಮಾಡುತ್ತಿದ್ಧಾರೆ. ಯಾವುದೇ ಒತ್ತಡಗಳಿಗೆ ಮಣಿಯದೇ ಜನಪರವಾಗಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿಗಳನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆಯುತ್ತಿದೆ. ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಲು ಒಪ್ಪದೇ ಕಾನೂನಿನಂತೆ ಜನಾನುರಾಗಿಯಾಗಿ ಜನರಿಗೆ ಸ್ಪಂದಿಸುತ್ತ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಕೆಲಸ ಮಾಡುತ್ತಿರುವ ಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬೇಕು. ಕನಿಷ್ಠ ೨ ರಿಂದ ೩ ವರ್ಷಗಳಾದರೂಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡಿದರೆ ಜಿಲ್ಲೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯ. ಜಿಡ್ಡುಗಟ್ಟಿರುವ ಅಧಿಕಾರಿ ವರ್ಗವನ್ನು ಯಾವುದೆ ಮುಲಾಜಿಲ್ಲದೇ ಕೆಲಸ ಮಾಡಿಸುತ್ತಿರುವ ಈ ದಕ್ಷ ಅಧಿಕಾರಿಯನ್ನು ಉಳಿಸಿಕೊಳ್ಳೊಣ….

ಪ್ರಾಮಾಣಿಕ ಅಧಿಕಾರಿಯ ಬೆನ್ನಿಗೆ ನಿಲ್ಲೋಣ….. ಬನ್ನಿ…

ಇವರ ಎತ್ತಂಗಡಿಯ ಹುನ್ನಾರದ ವಿರುದ್ದ ಧ್ವನಿ ಎತ್ತೋಣ ! ಕನ್ನಡನೆಟ್.ಕಾಂ ಬಳಗ

Please follow and like us:
error