ಎಡ ಮತ್ತು ಬಲದಂಡೆ ಕಾಲುವೆಗೆ ನೀರು ಬಿಡಲು ಆಗ್ರಹ.

ಎಡ ಮತ್ತು ಬಲದಂಡೆ ಕಾಲುವೆಗೆ ನೀರು ಬಿಡಲು ಆಗ್ರಹ. 
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಮಟ್ಟ ೧೬೧೨.೫೭(೪೦,೪.೯ಖಿಒಅ) ಇದ್ದಿತು. ಪ್ರಸ್ತುತ ೧೬೧೨.೮೩ (೪೦,೯೫೫ ಖಿಒಅ) ಇರುವುದು ತುಂಗಭದ್ರಾ ಇಲಾಖೆಯಿಂದ ಪ್ರಕಟಿತವಾಗಿದೆ. ಆದರೆ ಮಳೆ ಇಲ್ಲದೇ ಬೆಳೆ ಒಣಗುತ್ತಿವೆ. ಕುಡಿಯಲು ನೀರಿಗೆ ಜನ ಪರದಾಡುತ್ತಿದ್ದರೂ ಇಲ್ಲಿಯತನಕ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುತ್ತಿಲ್ಲ. ಕಳೆದ ವರ್ಷ ಜುಲೈ ೨೮ಕ್ಕೆ ನೀರು ಬಿಡಲು ಸಾಧ್ಯವಾದದ್ದು ಈ ವರ್ಷಾಏಕಾಗುತ್ತಿಲ್ಲ. ಅಲ್ಲದೇ ರಾಜಕೀಯದ ಒತ್ತಡದಿಂದ ರಾಯ ಮತ್ತುಇ ಬಸವಕಾಲುವೆಗಳಿಗೆ ನೀರು ಹರಿಸಲಾಗಿದೆ. ಈ ಅನ್ಯಾಯ ಸರಿಪಡಿಸದಿದ್ದರೆ ನಮ್ಮ ಸಮಿತಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಜಲಾಶಯದ ನೀರು ಹಸಿರಾಗಲು ನಾವು ನಾಲ್ಕೈದು ವರ್ಷಗಳ ಹಿಂದೆಯೆ ಅಧ್ಯಯನ ಮಾಡಿ ನದಿ ಪಾತ್ರದಲ್ಲಿರು ಕಾರ್ಖಾನೆಗಳು ಮತ್ತು ರಾಸಾಯನಿಕ ನೀರನ್ನು ನೇರವಾಗಿ ಬಿಡುವುದನ್ನು ಮತ್ತು ನಗರದ ಕಲುಷಿತ ತ್ಯಾಜ್ಯ ಹರಿಸುವುದನ್ನು ದಾಖಲೆಸಹಿತ ನೀಡಿ ಅದರ ನಿಯಂತ್ರಣಕ್ಕೆ ಆಗ್ರಹಿಸಿದ್ದರೂ ತುಂಗಭದ್ರಾ ಕಾಡಾ ಕಾರ್ಯದರ್ಶಿ ರಂಗಾರೆಡ್ಡಿ ರೈತರು ಜಮೀನಿಗೆ ರಾಸಾಯನಿಕ ಬಳಸಿದ್ದೇ ಕಾರಣವೆಂದು ಹೇಳಿ ತಪ್ಪು ಮಾಹಿತಿ ನೀಡುತ್ತಿರುವುದನ್ನು ಖಂಡಿಸುತ್ತೇವೆ.
ಬಚಾವತ್ ತೀರ್ಪಿನಂತೆ ವಿಜಯನಗರ ಕಾಲುವೆ ವ್ಯಾಪ್ತಿ ರೈತರ ವಿರಡು ಬೆಳೆಗೆ ನೀರನ್ನು ಕಾಯ್ದಿಡಬೇಕು. ಕಳೆದ ವರ್ಷ ಒಂದೇ ಬೆಳೆಗೆ ನೀರು ಕೊಡಲಾಗಿದೆ. ಕೊಡದಿದ್ದರೇ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ನದಿ ಪಾತ್ರದ ಬೋರ‍್ವೇಲ್‌ಗಳ ಮೂಲಕ ಕಾರ್ಖಾನೆಗಳಿಗೆ ನೀರನ್ನು ಮಾರಾಟಮಾಡಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದರರ ಮುತ್ತಿಗೆ ಹಾಕಿ ನಿಲ್ಲಿಸಬೇಕಾಗುತ್ತದೆ. ಡಿಸಿ ಸಭೆಯನ್ನು ಬೆಂಗಳೂರಲ್ಲಿ ಕರೆಯದೆ ಇಲ್ಲಿಯ ಕರೆಯಬೇಕೆಂದು ವಿಠ್ಠಪ್ಪ ಗೋರಂಟ್ಲಿ, ಭಾರಾತ್ವಾಜ, ಎಂ.ಆರ್.ವೆಂಕಟೇಶ, ಪಂಪಾಪತಿರಾಟಿ, ಡಿ.ಎಚ್.ಪೂಜಾರ ಮುಂತಾದವರು ಆಗ್ರಹಿಸಿದ್ದಾರೆ.

Please follow and like us:
error