ಎಜ್ಯು ಕೇರ್ ಶಾಲಾ ಮೂರನೆ ವಾರ್ಷಿಕೋತ್ಸವ

ಕೊಪ್ಪಳ 06- ಕಿನ್ನಾಳ ರಸ್ತೆಯಲ್ಲಿರುವ ಎಜ್ಯು ಕೇರ್ ಶಾಲಾ ಮೂರನೆ ವಾರ್ಷಿಕೋತ್ಸವ ಇಂದು 7ರಂದು ಸಂಜೆ 5:30ಕ್ಕೆ ಜರುಗಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ರೇಣುಕಾ ಸುಕುಮಾರ ಉದ್ಘಾಟಿಸಲಿದ್ದು ಕಾಯಕ ಎಜುಕೇಶನಲ್ ಟ್ಟಸ್ಟನ ಅಧ್ಯಕ್ಷ ಮಂಜುನಾಥ ಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸರಕಾರಿ ಅಭಿಯೋಜಕ ಬಿ.ಎಸ್. ಪಾಟೀಲ, ಜನಪದ ಕಲಾವಿದ ಜೀವನ ಸಾಬ ಕಿನ್ನಾಳ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸರಸ್ವತಿ ಪೂಜೆ: ವಾರ್ಷಿ ಕೋತ್ಸವ ನಿಮಿತ್ಯ 7ರಂದು ಬೆಳಗ್ಗೆ 10:30ಕ್ಕೆ ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶಾಲಾ ಆಡಳಿತ ಮಂಡಳಿಯ ರಮೇಶ ತುಪ್ಪದ ವಹಿಸ ಲಿದ್ದು ಮಕ್ಕಳ ಸಾಹಿತಿ ಅಕ್ಬರ್ ಖಾಲಿ ಮಿರ್ಚಿ, ಸಮಾಜ ಸೇವಕಿ ಲತಾಶ್ರೀ ಬಾಚಲಾಪೂರ, ಪ್ರತಿಭಾ ಪಟ್ಟಣಶೆಟ್ಟಿ ಆಗಮಿಸಲಿದ್ದು ಸರ್ವರು ಆಗಮಿಸುವಂತೆ ಆಡಳಿತ ಮಂಡಳಿ ಕಾ ರ್ಯದರ್ಶಿ ರಾಜೇಶ ಯಾವಗಲ್ ಕೋರಿದ್ದಾರೆ