You are here
Home > Koppal News > ಎಚ್.ಆರ್‌. ಶ್ರೀನಾಥ್ ಕಾಂಗ್ರೆಸ್ ಗೆ ಗುಡ್ ಬೈ

ಎಚ್.ಆರ್‌. ಶ್ರೀನಾಥ್ ಕಾಂಗ್ರೆಸ್ ಗೆ ಗುಡ್ ಬೈ

ಕೊಪ್ಪಳ:- ಗಂಗಾವತಿಯಲ್ಲಿ ಮಾಜಿ ಎಂಎಲ್ಸಿ ಎಚ್.ಆರ್‌. ಶ್ರೀನಾಥ್ ನೇತೃತ್ವದಲ್ಲಿ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ. ಗಂಗಾವತಿಯ ೧೨ ಜನ ನಗರಸಭೆ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ.ಕೆಪಿಸಿಸಿ ಅಧ್ಯಕ್ಷ ಜಿ.‌ಪರಮೇಶ್ವರ್ ಗೆ ರಾಜಿನಾಮೆ ಪತ್ರ ರವಾನೆ.

ಕೊಪ್ಪಳ ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ಇಲ್ಲದಂತಾಗಿದೆ.ಇಂದಿರಾ ಗಾಂಧಿಯವರ ಕಾಲದಿಂದಲೂ ಹೈ.ಕ. ಭಾಗದ ನಮ್ಮ ನಿವಾಸದಿಂದಲೇ ಕಾಂಗ್ರೆಸ್ ಕೆಲಸ ಆರಂಭವಾಗುತ್ತಿತ್ತು. ಗಂಗಾವತಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಸೌಜನ್ಯಕ್ಕೂ ಆಹ್ವಾನಿಸಿಲ್ಲ.

ಇಕ್ಬಾಲ್ ಅನ್ಸಾರಿ ಇನ್ನೂ ಪಕ್ಷವನ್ನೇ ಸೇರಿಲ್ಲ. ಆದರೂ ಸಿದ್ದರಾಮಯ್ಯ ಅನ್ಸಾರಿ ಪರ ಪ್ರಚಾರ ಮಾಡುತ್ತಾರೆ. ರಾಜ್ಯದಲ್ಲಿ ಈಗ ಇರುವುದು ಸಿದ್ದರಾಮಯ್ಯ ಕಾಂಗ್ರೆಸ್.ಸಿದ್ದರಾಮಯ್ಯ ನಿಲುವಿನಿಂದ ಬೇಸತ್ತು ಪಕ್ಷ ತೊರೆಯುತ್ತಿದ್ದೇವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೈಜಾಕ್ ಆಗಿದೆ. ಕಾಂಗ್ರೆಸ್ ಪಕ್ಷದ ಅಧಿಕಾರ ಸಿದ್ದರಾಮಯ್ಯ ಕೈಯ್ಯಲ್ಲಿದೆ.ರಾಜ್ಯದಲ್ಲಿನ ಎಲ್ಲ ಮೂಲ ಕಾಂಗ್ರೆಸ್ಸಿಗರು ರಾಜಿನಾಮೆ ನೀಡಿ ಸಿದ್ದರಾಮಯ್ಯರ ಹಿಟ್ಲರ್ ಆಡಳಿತವನ್ನು ವಿರೋಧಿಸಬೇಕು.ನಾನು ಯಾವ ಪಕ್ಷವನ್ನು ಸೇರುವ ವಿಚಾರ ಮಾಡಿಲ್ಲ.ಮೂಲ ಕಾಂಗ್ರೆಸ್ಸಿಗರನ್ನು ಭೇಟಿ ಮಾಡಿ ಮುಂದಿನ ನಿಲುವು ಪ್ರಕಟಿಸುತ್ತೇನೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವೀಕ್ ಇದೆ.ಹೈ ಕಮಾಂಡ್ ಸ್ಟ್ರಾಂಗ್ ಆಗದಿದ್ದರೆ ಕಾಂಗ್ರೆಸ್ ನೆಲಸಮವಾಗುತ್ತದೆ.

Top