ಎಐಡಿಎಸ್‍ಓ ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳ ಹೋರಾಟ

ಉಚಿತ ಬಸ್‍ಪಾಸ್ ನೀಡದ ವಚನಭ್ರಷ್ಟ ರಾಜ್ಯ ಸರ್ಕಾರಕ್ಕೆ ಧಿಕ್ಕಾರ..

ಇಂದು ಕೊಪ್ಪಳ ಅಶೋಕ ವೃತದಿಂದ ಬಸ್ ನಿಲ್ದಾಣ ದ ವರೆಗೂ ಎಐಡಿಎಸ್‍ಓ ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಹೋರಟವನ್ನು ಯಶಸ್ವಿಗೋಳಿಸಿದರು. ‘ಎಲ್ಲಾ ವರ್ಗದ ವಿದ್ಯಾರ್ಥಿಗಳಿ ಉಚಿತ ಬಸ್ ನಿಡಲೇಬೇಕು’. ‘ವಚನ ಭ್ರಷ್ಟ ಸರಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ನಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ವಿಭಾಗೀಯ ನಿಂತ್ರಣಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಬಾರಿಯ ಬಜೆಟ್‍ನಲ್ಲಿ ಎಲ್ಲಾ ವಿದ್ಯಾಥಿಗಳಿಗೆ ಉಚಿತ ಬಸ್‍ಪಾಸ್ ನೀಡುವ ಯೋಜನೆ ಜಾರಿಯಾಗುತ್ತz Éಎಂದು ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಹಾಗೆಯೆ ರಾಜ್ಯ ಸರ್ಕಾರದ ವಚನಭ್ರಷ್ಟತೆ ಬಗ್ಗೆ ತೀವ್ರ ಆಕ್ರೋಶ ಮೂಡಿದೆ. 20 ದಿನಗಳ ಹಿಂದೆ ಉಪಮುಖ್ಯಮಂತ್ರಿಗಳು, ಉಚಿತ ಬಸ್‍ಪಾಸ್ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಮನ್ವಯ ಸಮಿತಿಯ ಸಭೆಯ ನಂತರ ಘೋಷಿಸಿದ್ದರು. ಹಾಗೆಯೇ ಸಾರಿಗೆ ಸಚಿವರು ಸಹ ಉಚಿತ ಬಸ್‍ಪಾಸ್ ಜಾರಿಗೊಳಿಸಲಾಗುವುದು, ಶೀಘ್ರದಲ್ಲೇ ಮುಖ್ಯಮಂತ್ರಿಗಳು ಈ ಬಗ್ಗೆ ಘೋಷಿಸಲಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ರಾಜ್ಯ ಸರ್ಕಾರದ ಸಚಿವರುಗಳು ಉಚಿತ ಬಸ್‍ಪಾಸ್ ನೀಡುವ ಭರವಸೆ ನೀಡಿದ್ದರಿಂದ ನಿಗದಿಯಾಗಿದ್ದ ರಾಜ್ಯ ಮಟ್ಟದ ಪ್ರತಿಭಟನೆಯನ್ನು ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ಹಿಂಪಡೆದಿದ್ದವು. ಆದರೆ ರಾಜ್ಯ ಸರ್ಕಾರ ತನ್ನ ಮಾತು ಉಳಿಸಿಕೊಳ್ಳದೆ ವಿದ್ಯಾರ್ಥಿಗಳಿಗೆ ವಿಶ್ವಾಸದ್ರೋಹ ಎಸಗಿದೆ. ಒಂದು ತಿಂಗಳಿಂದ ರಾಜ್ಯ ಸರ್ಕಾರ ಹಾಗೂ ಕೆಎಸ್‍ಆರ್‍ಟಿಸಿ ನಾಟಕವಾಡುತ್ತಾ, ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿವೆ. ಸರ್ಕಾರ ಹೇಳುವಂತೆ ಹಣದ ಕೊರತೆಯ ಕಾರಣವೂ ಸಹ ನಿಜಾಂಶವಲ್ಲ. ಮಾತಿಗೆ ಮುಂಚೆ ರೈತರ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರ, ರೈತರ ಮಕ್ಕಳ, ಬಡವರಮಕ್ಕಳ ಹಿತವನ್ನು ತಿಪ್ಪೆಗೆಸೆದಿದೆ. ಈ ಹಿನ್ನಲೆಯಲ್ಲಿ ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ರಾಜ್ಯ ವ್ಯಾಪಿ ಹೋರಾಟಕ್ಕೆ ಕರೆ ನೀಡಿವೆ. ‘ಮಾತು ಉಳಿಸಿಕೊಳ್ಳದ ವಚನ ಭ್ರಷ್ಟರಾಜ್ಯ ಸರ್ಕಾರಕ್ಕೆ ಧಿಕ್ಕಾರ!’ ಎನ್ನುವಘೋಷಣೆಯೊಂದಿಗೆ ಎಲ್ಲಡೆ ವಿವಿಧರೀತಿಯ ಪ್ರತಿಭಟನೆಗಳನ್ನು ಸಂಘಟಿಸಲಾಗುತ್ತಿದೆ.
ಉಚಿತ ಬಸ್ ಪಾಸ್ ನೀಡಲು ಹೆಚ್ಚುವರಿ 600 ಕೋಟಿ ಅಗತ್ಯವಿದೆ ಎಂದು ನೆಪವೊಡ್ಡಿರಾಜ್ಯ ಸರ್ಕಾರ ಹಾಗೂ ಕೆಎಸ್‍ಆರ್‍ಟಿಸಿ ಈ ಯೋಜನೆಗೆ ಕೊಕ್ಕೆ ಹಾಕಿವೆ. ನಿಜಾಂಶವೆಂದರೆ ತಲಾ ವಿದ್ಯಾರ್ಥಿಯ ಬಸ್‍ಪಾಸ್‍ಗೆ ರೂ.1000 ಎಂದು ಲೆಕ್ಕ ಹಿಡಿದರೆ, 19 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರವು ಪ್ರತಿ ವರ್ಷಸಾರಿಗೆ ಇಲಾಖೆಗೆ ನೀಡುವ ರೂ.860 ಕೋಟಿ ಹಣದಲ್ಲೇ ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಬಹುದು. ಇದಲ್ಲದೆ ಸಮಾಜಕಲ್ಯಾಣ ಇಲಾಖೆಯು ಸಹ ಲಕ್ಷಾಂತರ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಬಸ್‍ಪಾಸ್ ಶುಲ್ಕವನ್ನು ಭರಿಸುತ್ತಿದೆ. ಹಾಗೆ ನೋಡಿದರೆ ಸಾರಿಗೆ ಇಲಾಖೆಗೆ ಯಾವುದೇ ರೀತಿಯಲ್ಲಿ ಹೊರೆಯಾಗುವುದಿಲ್ಲ. ಆದರೆ ಸಾರಿಗೆ ಇಲಾಖೆ ಹಾಕಿರುವ ಲೆಕ್ಕವು ವ್ಯಾಪಾರಿ ಹಾಗೂ ಲಾಭದ ಮಾನದಂಡ ಹೊಂದಿದೆ. ಈ ಮಾನದಂಡ ಅನುಸರಿಸಿದರೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್‍ಗಳನ್ನು ಓಡಿಸಬೇಕಾಗುತ್ತದೆ. ಆದರೆ ವಾಸ್ತವವೆಂದರೆ, ಸಾರ್ವಜನಿಕರಿಗೆ ಇರುವ ಬಸ್‍ಗಳಲ್ಲೇ ವಿದ್ಯಾರ್ಥಿಗಳು ತೂರಾಡುತ್ತಾ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯ ಮೋಸದ ಲೆಕ್ಕವನ್ನು ಬಯಲು ಮಾಡಬೇಕಿದೆ. ಇದರಜೊತೆ ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟಾಚಾರ, ಸೋರಿಕೆ ತಡೆಗಟ್ಟಿದರೆ ಕೋಟ್ಯಾಂತರ ರೂಪಾಯಿ ಉಳಿಸಬಹುದು.
ಸತತ 4 ವರ್ಷಗಳಿಂದ ಬರ, ಬೆಲೆ ಏರಿಕೆ, ನೋಟುರದ್ದತಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್ ನೀಡುವಂತೆ ಈ ಹಿಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. ಹಾಗೂ ರಾಜ್ಯದಾದ್ಯಂತ ನೂರಾರು ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಇದರ ಪರಿಣಾಮವಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಬಜೆಟ್‍ನಲ್ಲಿಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವುದಾಗಿ ಘೋಷಣೆಮಾಡಿತ್ತು. ಆದರೆ ಈ ಘೋಷಣೆ ಸೂಕ್ತ ಸರ್ಕಾರಿ ಆದೇಶವಾಗದಕಾರಣ, ಕೆಎಸ್‍ಆರ್‍ಟಿಸಿ ಇದನ್ನು ಜಾರಿಗೊಳಿಸಲು ತಕರಾರು ಎತ್ತಿತು. ಮತ್ತೊಮ್ಮ ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಬೇಡಿಕೆಗಾಗಿ ಪ್ರಸಕ್ತ ಸಮ್ಮಿಶ್ರ ಸರ್ಕಾರವನ್ನು ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ಮಣಿದುರಾಜ್ಯ ಸರ್ಕಾರದ ಸಚಿವರುಗಳು ಭರವಸೆ ನೀಡಿದ್ದರು. ಆದರೆ ಬಜೆಟ್‍ನಲ್ಲಿ ಉಚಿತ ಬಸ್‍ಪಾಸ್‍ಘೋಷಣೆ ಮಾಡದೆ ರಾಜ್ಯ ಸರ್ಕಾರವು ಮಾತುತಪ್ಪಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಎಐಡಿಎಸ್‍ಓ ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿವೆ. ಈ ಹೋರಾಟಕ್ಕೆ ಸ್ಪಂದಿಸಿ ಯಶಸ್ವಿಗೊಳಿಸಲು ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರಲ್ಲಿ ಮೂರು ಸಂಘಟನೆಗಳು ಮನವಿ ಮಾಡುತ್ತವೆ.
ಜಿಲ್ಲಾ ಸಂಘಟನಕಾರರಾದ ಶರಣಬಸವ ಪಾಟೀಲ್, ರಾಯಣ್ಣ ಗಡ್ಡಿ, ದೇವರಾಜ ಹೊಸಮನಿ, ಮೌಲಸಾಬ್, ವಿದ್ಯಾರ್ಥಿಗಳಾದ ಕಫಿಲ ಅಹಮ್ಮದ, ನಾಗರಾಜ, ಮಂಜು, ಲಕ್ಷಣ, ರಮೇಶ, ಈರಣ್ಣ, ಮಂಜುನಾಥ ಮಲ್ಲಪ್ಪ, ಕಲ್ಲಪ, ಚನ್ನಪ್ಪ, ಮುದುಕಪ್ಪ, ಮುಂತಾದವರ ಭಾಗವಹಿಸಿದ್ದರು.
ಧನ್ಯವಾದಗಳೊಂದಿಗೆ

ತಮ್ಮ ವಿಶ್ವಾಸಿಗಳು

ರಮೇಶ ವಂಕಲಕುಂಟಿ
ಂiಜso ಪರವಾಗಿ, ಕೊಪ್ಪಳ.

ಶರಣು ಗಡ್ಡಿ
ಂiಜಥಿo ಪರವಾಗಿ, ಕೊಪ್ಪಳ .

ಮಂಜುಳಾ ಎಮ್
ಚಿIಒSS ಪರವಾಗಿ, ಕೊಪ್ಪಳ .

ವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಹೋರಟವನ್ನು ಯಶಸ್ವಿಗೋಳಿಸಿದರು. ‘ಎಲ್ಲಾ ವರ್ಗದ ವಿದ್ಯಾರ್ಥಿಗಳಿ ಉಚಿತ ಬಸ್ ನಿಡಲೇಬೇಕು’. ‘ವಚನ ಭ್ರಷ್ಟ ಸರಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ನಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ವಿಭಾಗೀಯ ನಿಂತ್ರಣಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಬಾರಿಯ ಬಜೆಟ್‍ನಲ್ಲಿ ಎಲ್ಲಾ ವಿದ್ಯಾಥಿಗಳಿಗೆ ಉಚಿತ ಬಸ್‍ಪಾಸ್ ನೀಡುವ ಯೋಜನೆ ಜಾರಿಯಾಗುತ್ತz Éಎಂದು ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಹಾಗೆಯೆ ರಾಜ್ಯ ಸರ್ಕಾರದ ವಚನಭ್ರಷ್ಟತೆ ಬಗ್ಗೆ ತೀವ್ರ ಆಕ್ರೋಶ ಮೂಡಿದೆ. 20 ದಿನಗಳ ಹಿಂದೆ ಉಪಮುಖ್ಯಮಂತ್ರಿಗಳು, ಉಚಿತ ಬಸ್‍ಪಾಸ್ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಮನ್ವಯ ಸಮಿತಿಯ ಸಭೆಯ ನಂತರ ಘೋಷಿಸಿದ್ದರು. ಹಾಗೆಯೇ ಸಾರಿಗೆ ಸಚಿವರು ಸಹ ಉಚಿತ ಬಸ್‍ಪಾಸ್ ಜಾರಿಗೊಳಿಸಲಾಗುವುದು, ಶೀಘ್ರದಲ್ಲೇ ಮುಖ್ಯಮಂತ್ರಿಗಳು ಈ ಬಗ್ಗೆ ಘೋಷಿಸಲಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ರಾಜ್ಯ ಸರ್ಕಾರದ ಸಚಿವರುಗಳು ಉಚಿತ ಬಸ್‍ಪಾಸ್ ನೀಡುವ ಭರವಸೆ ನೀಡಿದ್ದರಿಂದ ನಿಗದಿಯಾಗಿದ್ದ ರಾಜ್ಯ ಮಟ್ಟದ ಪ್ರತಿಭಟನೆಯನ್ನು ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ಹಿಂಪಡೆದಿದ್ದವು. ಆದರೆ ರಾಜ್ಯ ಸರ್ಕಾರ ತನ್ನ ಮಾತು ಉಳಿಸಿಕೊಳ್ಳದೆ ವಿದ್ಯಾರ್ಥಿಗಳಿಗೆ ವಿಶ್ವಾಸದ್ರೋಹ ಎಸಗಿದೆ. ಒಂದು ತಿಂಗಳಿಂದ ರಾಜ್ಯ ಸರ್ಕಾರ ಹಾಗೂ ಕೆಎಸ್‍ಆರ್‍ಟಿಸಿ ನಾಟಕವಾಡುತ್ತಾ, ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿವೆ. ಸರ್ಕಾರ ಹೇಳುವಂತೆ ಹಣದ ಕೊರತೆಯ ಕಾರಣವೂ ಸಹ ನಿಜಾಂಶವಲ್ಲ. ಮಾತಿಗೆ ಮುಂಚೆ ರೈತರ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರ, ರೈತರ ಮಕ್ಕಳ, ಬಡವರಮಕ್ಕಳ ಹಿತವನ್ನು ತಿಪ್ಪೆಗೆಸೆದಿದೆ. ಈ ಹಿನ್ನಲೆಯಲ್ಲಿ ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ರಾಜ್ಯ ವ್ಯಾಪಿ ಹೋರಾಟಕ್ಕೆ ಕರೆ ನೀಡಿವೆ. ‘ಮಾತು ಉಳಿಸಿಕೊಳ್ಳದ ವಚನ ಭ್ರಷ್ಟರಾಜ್ಯ ಸರ್ಕಾರಕ್ಕೆ ಧಿಕ್ಕಾರ!’ ಎನ್ನುವಘೋಷಣೆಯೊಂದಿಗೆ ಎಲ್ಲಡೆ ವಿವಿಧರೀತಿಯ ಪ್ರತಿಭಟನೆಗಳನ್ನು ಸಂಘಟಿಸಲಾಗುತ್ತಿದೆ.
ಉಚಿತ ಬಸ್ ಪಾಸ್ ನೀಡಲು ಹೆಚ್ಚುವರಿ 600 ಕೋಟಿ ಅಗತ್ಯವಿದೆ ಎಂದು ನೆಪವೊಡ್ಡಿರಾಜ್ಯ ಸರ್ಕಾರ ಹಾಗೂ ಕೆಎಸ್‍ಆರ್‍ಟಿಸಿ ಈ ಯೋಜನೆಗೆ ಕೊಕ್ಕೆ ಹಾಕಿವೆ. ನಿಜಾಂಶವೆಂದರೆ ತಲಾ ವಿದ್ಯಾರ್ಥಿಯ ಬಸ್‍ಪಾಸ್‍ಗೆ ರೂ.1000 ಎಂದು ಲೆಕ್ಕ ಹಿಡಿದರೆ, 19 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರವು ಪ್ರತಿ ವರ್ಷಸಾರಿಗೆ ಇಲಾಖೆಗೆ ನೀಡುವ ರೂ.860 ಕೋಟಿ ಹಣದಲ್ಲೇ ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಬಹುದು. ಇದಲ್ಲದೆ ಸಮಾಜಕಲ್ಯಾಣ ಇಲಾಖೆಯು ಸಹ ಲಕ್ಷಾಂತರ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಬಸ್‍ಪಾಸ್ ಶುಲ್ಕವನ್ನು ಭರಿಸುತ್ತಿದೆ. ಹಾಗೆ ನೋಡಿದರೆ ಸಾರಿಗೆ ಇಲಾಖೆಗೆ ಯಾವುದೇ ರೀತಿಯಲ್ಲಿ ಹೊರೆಯಾಗುವುದಿಲ್ಲ. ಆದರೆ ಸಾರಿಗೆ ಇಲಾಖೆ ಹಾಕಿರುವ ಲೆಕ್ಕವು ವ್ಯಾಪಾರಿ ಹಾಗೂ ಲಾಭದ ಮಾನದಂಡ ಹೊಂದಿದೆ. ಈ ಮಾನದಂಡ ಅನುಸರಿಸಿದರೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್‍ಗಳನ್ನು ಓಡಿಸಬೇಕಾಗುತ್ತದೆ. ಆದರೆ ವಾಸ್ತವವೆಂದರೆ, ಸಾರ್ವಜನಿಕರಿಗೆ ಇರುವ ಬಸ್‍ಗಳಲ್ಲೇ ವಿದ್ಯಾರ್ಥಿಗಳು ತೂರಾಡುತ್ತಾ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯ ಮೋಸದ ಲೆಕ್ಕವನ್ನು ಬಯಲು ಮಾಡಬೇಕಿದೆ. ಇದರಜೊತೆ ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟಾಚಾರ, ಸೋರಿಕೆ ತಡೆಗಟ್ಟಿದರೆ ಕೋಟ್ಯಾಂತರ ರೂಪಾಯಿ ಉಳಿಸಬಹುದು.
ಸತತ 4 ವರ್ಷಗಳಿಂದ ಬರ, ಬೆಲೆ ಏರಿಕೆ, ನೋಟುರದ್ದತಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್ ನೀಡುವಂತೆ ಈ ಹಿಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. ಹಾಗೂ ರಾಜ್ಯದಾದ್ಯಂತ ನೂರಾರು ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಇದರ ಪರಿಣಾಮವಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಬಜೆಟ್‍ನಲ್ಲಿಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವುದಾಗಿ ಘೋಷಣೆಮಾಡಿತ್ತು. ಆದರೆ ಈ ಘೋಷಣೆ ಸೂಕ್ತ ಸರ್ಕಾರಿ ಆದೇಶವಾಗದಕಾರಣ, ಕೆಎಸ್‍ಆರ್‍ಟಿಸಿ ಇದನ್ನು ಜಾರಿಗೊಳಿಸಲು ತಕರಾರು ಎತ್ತಿತು. ಮತ್ತೊಮ್ಮ ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಬೇಡಿಕೆಗಾಗಿ ಪ್ರಸಕ್ತ ಸಮ್ಮಿಶ್ರ ಸರ್ಕಾರವನ್ನು ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ಮಣಿದುರಾಜ್ಯ ಸರ್ಕಾರದ ಸಚಿವರುಗಳು ಭರವಸೆ ನೀಡಿದ್ದರು. ಆದರೆ ಬಜೆಟ್‍ನಲ್ಲಿ ಉಚಿತ ಬಸ್‍ಪಾಸ್‍ಘೋಷಣೆ ಮಾಡದೆ ರಾಜ್ಯ ಸರ್ಕಾರವು ಮಾತುತಪ್ಪಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಎಐಡಿಎಸ್‍ಓ ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿವೆ. ಈ ಹೋರಾಟಕ್ಕೆ ಸ್ಪಂದಿಸಿ ಯಶಸ್ವಿಗೊಳಿಸಲು ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರಲ್ಲಿ ಮೂರು ಸಂಘಟನೆಗಳು ಮನವಿ ಮಾಡುತ್ತವೆ.
ಜಿಲ್ಲಾ ಸಂಘಟನಕಾರರಾದ ಶರಣಬಸವ ಪಾಟೀಲ್, ರಾಯಣ್ಣ ಗಡ್ಡಿ, ದೇವರಾಜ ಹೊಸಮನಿ, ಮೌಲಸಾಬ್, ವಿದ್ಯಾರ್ಥಿಗಳಾದ ಕಫಿಲ ಅಹಮ್ಮದ, ನಾಗರಾಜ, ಮಂಜು, ಲಕ್ಷಣ, ರಮೇಶ, ಈರಣ್ಣ, ಮಂಜುನಾಥ ಮಲ್ಲಪ್ಪ, ಕಲ್ಲಪ, ಚನ್ನಪ್ಪ, ಮುದುಕಪ್ಪ, ಮುಂತಾದವರ ಭಾಗವಹಿಸಿದ್ದರು.

Please follow and like us: