ಉಮೇದುವಾರಿಕೆ ಹಿಂಪಡೆದ 06 ಅಭ್ಯರ್ಥಿಗಳು : ಅಂತಿಮ ಕಣದಲ್ಲಿ 52 ಅಭ್ಯರ್ಥಿಗಳು

ಕೊಪ್ಪಳ : ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದವರ ಪೈಕಿ 06 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಇದೀಗ 52 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಂತಾಗಿದೆ.
ವಿಧಾನಸಭಾ ಚುನಾವಣೆಗಾಗಿ ಐದೂ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದ 65 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡು, 58 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಉಮೇದುವಾರಿಕೆ ಹಿಂಪಡೆಯಲು ಏ. 27 ಶುಕ್ರವಾರ ಕೊನೆಯ ದಿನವಾಗಿತ್ತು. ಕುಷ್ಟಗಿ ಕ್ಷೇತ್ರದಲ್ಲಿ 09, ಕನಕಗಿರಿ- 10, ಗಂಗಾವತಿ-12, ಯಲಬುರ್ಗಾ-11 ಹಾಗೂ ಕೊಪ್ಪಳ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಶುಕ್ರವಾರದಂದು ಡಾ. ಪ್ರಭಾಕರಗೌಡ ಅಮ್ಮಣ್ಣವರ- ರಾಣಿ ಚನ್ನಮ್ಮ ಪಕ್ಷ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಇದರಿಂದಾಗಿ ಕಣದಲ್ಲಿ 09 ಅಭ್ಯರ್ಥಿಗಳು ಉಳಿದಂತಾಗಿದೆ. ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಇಂತಿದೆ. ವಜೀರಲಿ ಗೋನಾಳ-ಪಕ್ಷೇತರ, ಅಮರೇಗೌಡ ಬಯ್ಯಾಪುರ- ಕಾಂಗ್ರೆಸ್, ದೊಡ್ಡನಗೌಡ ಪಾಟೀಳ್-ಬಿಜೆಪಿ, ಹೆಚ್.ಸಿ. ನೀರಾವರಿ- ಜೆಡಿಎಸ್, ಮಂಜುಳಾ ಮಡಿವಾಳ- ಭಾರತೀಯ ಹೊಸ ಕಾಂಗ್ರೆಸ್, ಬಾಲರಾಜ ಕೊಂಡೆಪ್ಪ- ಪಕ್ಷೇತರ, ರಾಮನಗೌಡ ಮಾಲಿಪಾಟೀಲ- ಪಕ್ಷೇತರ, ಶಿವರೆಡ್ಡಿ ಸಾಹೇಬಗೌಡ- ಹಿಂದೂಸ್ತಾನ ಜನತಾ ಪಕ್ಷ, ಯಲ್ಲನಗೌಡ- ರಾಷ್ಟ್ರೀಯ ಜನಸಂಭಾವನಾ ಪಕ್ಷ.

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಹನುಮಂತ ಎಸ್. ಬೋವಿ- ಪಕ್ಷೇತರ ಅಭ್ಯರ್ಥಿ ಇವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಇದರಿಂದಾಗಿ ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು ಉಳಿದಂತಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ರಮೇಶ ಭೀಮಯ್ಯ ದಾಸರ್, ಬಿಜೆಪಿಯಿಂದ ಬಸವರಾಜ ದುರಗಪ್ಪ ದಡೆಸೂಗುರ, ಕಾಂಗ್ರೆಸ್‍ನಿಂದ ಶಿವರಾಜ ಸಂಗಪ್ಪ ತಂಗಡಗಿ, ಜನತಾದಳ (ಸೆಕ್ಯೂಲರ್) ದಿಂದ ಮಂಜುಳಾ ರವಿಕುಮಾರ, ಜನಹಿತ ಪಕ್ಷದಿಂದ ರಮೇಶ ಯಲ್ಲಪ್ಪ ಕೊಟಿ, ಪಕ್ಷೇತರರಾಗಿ ಕೆ.ಹೆಚ್ ಹುಲಗಣ್ಣ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್) ದಿಂದ ಕೆಂಚಪ್ಪ ಲಿಂಗಪ್ಪ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಮುಕ್ಕಣ್ಣ ರಾಮಚಂದ್ರಪ್ಪ ನಾಯಕ, ಪಕ್ಷೇತರರಾಗಿ ಈರಣ್ಣ ಗಲದಯ್ಯ ಮತ್ತು ಡಾ. ಎಂ.ಪಿ ದಾರಕೇಶ್ವರಯ್ಯ ಕಣದಲ್ಲಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಈ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆಯದ ಕಾರಣ 12 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ವಿವರ ಇಂತಿದೆ. ಕಾಂಗ್ರೆಸ್‍ನಿಂದ ಇಕ್ಬಾಲ್ ಅನ್ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ರಮೇಶ, ಬಿಜೆಪಿಯಿಂದ ಪರಪ್ಪ ಎಂ. ಈಶ್ವರಪ್ಪ ಮುನವಳ್ಳಿ, ಜನತಾದಳ (ಸೆಕ್ಯೂಲರ್) ದಿಂದ ಕರಿಯಣ್ಣ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್)(ಎಲ್) ದಿಂದ ಭರದ್ವಾಜ, ಪಕ್ಷೇತರರಾಗಿ ಟಿ.ಎನ್.ಎಸ್. ವರಪ್ರಸಾದ, ಆಮ್‍ಆದ್ಮಿ ಪಾರ್ಟಿಯಿಂದ ಶರಣಪ್ಪ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂ) ದಿಂದ ನಾಗರಾಜ್ ಗುರುಶಾಂತನವರ್, ಪಕ್ಷೇತರರಾಗಿ ಎಸ್. ಜರೀನಾ, ದಿಗಂಬರ ರಾವ್, ಫಾತೀಮಾ, ಮತ್ತು ಮೊಹಮ್ಮದ ನತೀಕ್ ಆಲಂ ಅವರು ಕಣದಲ್ಲಿ ಉಳಿದಿದ್ದಾರೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಈ ಪೈಕಿ ಶರಣಯ್ಯ ಬಂಡಿ- ಪಕ್ಷೇತರ, ಶಿವಪ್ಪ ರಾಂಪುರ- ಪಕ್ಷೇತರ ಹಾಗೂ ಶ್ಯಾಮೀದಸಾಬ-ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿ ಸೇರಿದಂತೆ ಮೂವರು ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದಾರೆ. ಈ ಕ್ಷೇತ್ರದ ಚುನಾವಣಾ ಅಂತಿಮ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ವಿವರ ಇಂತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸದಾಶಿವರಾವ್ ವಿ., ಜನತಾದಳ (ಸೆಕ್ಯೂಲರ್) ದಿಂದ ವೀರನಗೌಡ, ಬಿಜೆಪಿಯಿಂದ ಹಾಲಪ್ಪ ಆಚಾರ್, ಕಾಂಗ್ರೆಸ್‍ನಿಂದ ಬಸವರಾಜ ರಾಯರಡ್ಡಿ, ಶಿವಸೇನೆಯಿಂದ ಶರಣಬಸಪ್ಪ, ಪಕ್ಷೇತರರಾಗಿ ರಹಮಾನಸಾಬ, ಜಾಕೀರ್ ಹುಸೇನ್ ಹಾಗೂ ನವೀನ್, ನಿಂಗಪ್ಪ, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಅಲ್ಲಾಭಕ್ಷಿ, ಜನಹಿತ ಪಕ್ಷದಿಂದ ಅನ್ನದಾನರಾಜಾ ಅಂತಿಮ ಕಣದಲ್ಲಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಈ ಪೈಕಿ ರಾಜಶೇಖರ ಹಿಟ್ನಾಳ- ಪಕ್ಷೇತರ ಅವರು ಗುರುವಾರದಂದೇ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದರು. ಶುಕ್ರವಾರದಂದು ಯಾವುದೇ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆಯದ ಕಾರಣ ಒಟ್ಟು 10 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ. ಅಂತಿಮ ಕಣದಲ್ಲುಳಿದವರ ವಿವರ ಇಂತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನಿಜಗುಣಪ್ಪ ಹಡಪದ, ಕಾಂಗ್ರೆಸ್‍ನಿಂದ ರಾಘವೇಂದ್ರ, ಜನತಾದಳ (ಸೆಕ್ಯೂಲರ್) ದಿಂದ ಕಾಸಿಂಅಲಿ ಮೆಹಬೂಬ್ ಸಾಬ್ ಸಯ್ಯದ್ ಪಕ್ಷೇತರರಾಗಿ ಸುರೇಶಗೌಡ, ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಎಂಎಲ್) ದಿಂದ ಹನುಮಪ್ಪ, ಬಿಜೆಪಿಯಿಂದ ಅಮರೇಶ ಕರಡಿ, ಜನಹಿತ ಪಕ್ಷದಿಂದ ಮಂಜುನಾಥ ಪಲ್ಲೇದ, ಪಕ್ಷೇತರರಾಗಿ ಪಂಪಾಪತಿ, ಸಂಜಯ, ಸಿದ್ದರಾಮಪ್ಪ ಅಂತಿಮ ಕಣದಲ್ಲಿದ್ದಾರೆ

Please follow and like us:
error