You are here
Home > Election_2018 > ಉಪಲಾಪೂರ, ಚಿಕ್ಕಬೊಮ್ಮನಾಳ, ಚಳ್ಳಾರಿಗಳಲ್ಲಿ ಅನ್ಸಾರಿ ಭರ್ಜರಿ ಪ್ರಚಾರ

ಉಪಲಾಪೂರ, ಚಿಕ್ಕಬೊಮ್ಮನಾಳ, ಚಳ್ಳಾರಿಗಳಲ್ಲಿ ಅನ್ಸಾರಿ ಭರ್ಜರಿ ಪ್ರಚಾರ

ಕೊಪ್ಪಳ, ಎ. 16: ಗಂಗಾವತಿ ಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರು ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಉಪಲಾಪೂರ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಸೂಳಿಕೇರಿ, ಚಳ್ಳಾರಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇದೇ ವೇಳೆ ಮಾತನಾಡಿದ ಅವರು, ಸರ್ವರಿಗೂ ಅವಕಾಶ, ಅನುಕೂಲ ಮತ್ತು ವಿಶ್ವಾಸದ ಜೀವನ ನಡೆಸಲು ಕಾಂಗ್ರೆಸ್ ಮಾತ್ರ ಶಕ್ತಿ ನೀಡುತ್ತದೆ. ಈ ಸಲದ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು ಕೋರಿದ ಅವರು, ಕಾಂಗ್ರೆಸ್ ಸರಕಾರ ದೇಶದಲ್ಲಿಯೇ ಜನಪರ ಆಡಳಿತ ನೀಡಿದ ಸರಕಾರ ಎಂದರು.
ಸಮಾಜ ಒಡೆಯುವ ಬಿಜೆಪಿ ಬಿಟ್ಟು ದೇಶ ಕಟ್ಟುವ ಕಾಂಗ್ರೆಸ್ ಬೆಂಬಲಿಸಿರಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕ ಬಸವರಾಜ ಮಳಿಮಠ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರುದ್ರೇಶ ಡ್ಯಾಗಿ, ತಾ.ಪಂ ಮಾಜಿ ಸದಸ್ಯ ಹನಮಂತಪ್ಪ ವನಬಳ್ಳಾರಿ, ಮುಖಂಡರಾದ ರಮೇಶ ಪಾಟೀಲ್, ಮಲ್ಲೇಶಪ್ಪ ಗುಮಗೇರಿ, ಬಸವಕುಮಾರ, ಎಮ್ಮಿ ಫಕೀರಪ್ಪ, ಅಮರೇಶ ಉಪಲಾಪುರ ಇತರರು ಉಪಸ್ಥಿತರಿದ್ದರು.

Top