You are here
Home > Koppal News > ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘದಿಂದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ

ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘದಿಂದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಪ್ರಾಚಾರ್ಯರ ಸಂಘದಿಂದ ಮನವಿ
ಕೊಪ್ಪಳ ೦೩ : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘದಿಂದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಉಪನಿರ್ದೇಶಕರ ಮೂಲಕ ಮನವಿ ಸಲ್ಲಿಸಲಾಯಿತು. ರವಿವಾರದಂದು ಇಂಗ್ಲೀಷ ಭಾಷಾ ವಿಶೇಷ ಬೋಧನಾ ತರಗತಿಗಳಿಗೆ ಉಪನ್ಯಾಸಕ ಮತ್ತು ಪ್ರಾಚಾರ್ಯಾರನ್ನು ಕಡ್ಡಾಯವಾಗಿ ಭಾಗವಹಿಸುವಂತೆ ಒತ್ತಾಯಿಸಬಾರದು, ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಉಪನ್ಯಾಸಕರನ್ನು ನಿಯೋಜನೆ ಮಾಡುವಾಗ ೨೫ ಕಿ.ಮೀ ಗಿಂತಲೂ ಹೆಚ್ಚಿನ ದೂರ ಇರಬಾರದು. ಮತ್ತು ನಿಯೋಜನೆ ಭತ್ಯೆ ೭೫೦/- ರೂ ಗಳಿಗೆ ಹೆಚ್ಚಿಸಬೇಕು. ಉಪನಿರ್ದೇಶಕರ ಕಛೇರಿಯಲ್ಲಿ ಬಾಕಿ ಉಳಿದಿರುವ ಪರೀಕ್ಷೆ ಇತ್ಯಾದಿ ಸಂಭಾವನೆ ಬಿಲ್ಲುಗಳನ್ನು ಆದಷ್ಟು ಬೇಗನೆ ಮಂಜೂರು ಮಾಡುವುದು ಹಾಗೂ ವಿಶೇಷವಾಗಿ ಉಪನ್ಯಾಸಕರ ಮತ್ತು ಪ್ರಾಚಾರ್ಯರ ವೇತನ ತಾರತಮ್ಯ ನಿವಾರಣೆಗಾಗಿ ವೇತನ ಆಯೋಗಕ್ಕೆ ಶಿಫಾರಸ್ಸು ಮಾಡುವುದು ಮುಂತಾದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಉಪನಿರ್ದೇಶಕರಾದ ಶ್ರೀ ಟಿ.ಎಮ್ ರಾಜಾಸಾಬರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸಪ್ಪ ನಾಗೋಲಿ, ಕಾರ್ಯದರ್ಶಿಗಳಾದ ಶ್ರೀ ರಾಚಪ್ಪ ಕೇಸರಬಾವಿ, ಪ್ರಾಂಶುಪಾಲರಾದ ಶ್ರೀ ಎಂ.ಶಂಶುದ್ದೀನ್, ಶ್ರೀ ಕೆ.ವೈ ದೊಡ್ಡಮನಿ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಉಪನ್ಯಾಸಕರುಗಳಾದ ಡಾ.ಡಿ.ಕೆ ಮಾಳೆ, ಶ್ರೀ ಡಿ.ಎಫ್ ದೊಡ್ಡಮನಿ, ಶ್ರೀ ವೈ.ವಿ ಪಾಟೀಲ್, ಶ್ರೀ ಎಸ್.ವ್ಹಿ ಮೇಳಿ, ಶ್ರೀ ಬಿ.ವಿ ಚಿಕ್ಕರಡ್ಡಿ, ಶ್ರೀ ಕೆ.ಎಸ್ ಹುಲಿ ಮುಂತಾದವರು ಉಪಸ್ಥಿತರಿದ್ದರು.

Top