ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ AIDSO ಧರಣಿ

ಕೊಪ್ಪಳ : ಇಂದು ಕೊಪ್ಪಳದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಜೀವಶಾಸ್ತ್ರದ ಉಪನ್ಯಾಸಕರನ್ನು ನೇಮಿಸಬೇಕೆಂದು ಆಗ್ರಹಿಸಿ ಮತ್ತು ಕಾಲೇಜಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ,  ಮೂಲಭೂತ ಸೌಕರ್ಯ  ಒದಗಿಸಬೇಕೆಂದು  ಅಶೋಕ ಸರ್ಕಲ್ ನಲ್ಲಿ  AIDSO ದಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.

ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಮೇ ತಿಂಗಳಲ್ಲಿ ಜೀವಶಾಸ್ತ್ರದ ಉಪನ್ಯಾಸಕರು ವಯೋ ನಿವೃತ್ತಿ ಹೊಂದಿರುತ್ತಾರೆ . ಕಾಲೇಜಿನಲ್ಲಿ ಜೀವಶಾಸ್ತ್ರದ ಉಪನ್ಯಾಸಕರ  ಹುದ್ದೆ ಖಾಲಿ ಇರುವುದರಿಂದ  ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ . ಇನ್ನೂ ಕೆಲವೇ ತಿಂಗಳಲ್ಲಿ ಪರೀಕ್ಷೆಗಳು ಇದ್ದು , ಯಾವುದೇ ಪಾಠಗಳು & ಪ್ರಯೋಗಗಳು ಮುಗಿದಿರುವುದಿಲ್ಲ . ಈ ತತಕ್ಷಣವೆ  ಒಬ್ಬ ಪೂರ್ಣಾವಧಿ ಉಪನ್ಯಾಸಕರನ್ನು ನಿಯೋಜನೆ ಮಾಡಬೇಕೆಂದು ಮತ್ತು ಡಿಜಿಟಲ್ ತರಗತಿಗಳ ಮೂಲಕ  ಭೋದನೆ ಮಾಡಬೇಕೆಂದು AIDSO  ಸಂಘಟನೆಯ ವತಿಯಿಂದ ಆಗ್ರಹಿಸಲಾಯಿತು. 
ಸ್ಥಳಕ್ಕೆ ಆಗಮಿಸಿದ ಮಾನ್ಯ ಉಪನಿರ್ದೇಶಕರು(ಶ್ರೀ ರುದ್ರೇಶ) ಪದವಿ ಪೂರ್ವ ಶಿಕ್ಷಣ ಇಲಾಖೆ.  ಇವರು ಮಾತನಾಡಿ   ಇನ್ನೂ 3 ದಿನಗಳಲ್ಲಿ ಉಪನ್ಯಾಕರನ್ನು ನೇಮಿಸಲಾಗುತ್ತೆ ಎಂದು ಭರವಸೆ ನೀಡಿದರು. 

ಈ  ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕಾರ್ತೀಕ,    ಅಭಿಲಾಷ,  ತೇಜೆಶ ಕುಮಾರ,  ಅರುಣಕುಮಾರ, ಮೈಲಾರಪ್ಪ.  AIDSO ಸಂಘಟನೆಯ ಸಂಘಟನಾಕಾರರಾದ ದೇವರಾಜ ಹೊಸಮನಿ ಮತ್ತು ರಮೇಶ ವಂಕಲಕುಂಟಿ ನೇತೃತ್ವ ವಹಿಸಿದ್ದರು.
ಬೇಡಿಕೆಗಳು : 

1 ) ಪೂರ್ಣಾವಧಿ ಜೀವಶಾಶ್ವದ ಉಪನ್ಯಾಸಕರನ್ನು ನೇಮಕ ಮಾಡುವುದು .

 2 ) ಪ್ರಯೋಗಾಲಯದಲ್ಲಿ ಪ್ರಯೋಗ ಸಾಮಾನುಗಳನ್ನು ಪ್ರಯೋಗದ ಮುಖಾಂತರ ಭೋದನೆ ಮಾಡುವುದು . 

3 ) ಡಿಜಿಟಲ್ ಸಲಕರಣೆ ಮೂಲಕ ಉಪನ್ಯಾಸವನ್ನು ಮಾಡುವುದು . 

4 ) ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವುದು , 

5 ) ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿಸುವುದು . 

Please follow and like us:
error