ಉದ್ಯೋಗಕ್ಕೆ ವೋಟು-ಸಹಿ ಸಂಗ್ರಹಣಾ ಅಭಿಯಾನ

ಚುನಾವಣೆಗೂ ಮುನ್ನ ಉದ್ಯೋಗ ಸೃಷ್ಠಿಸುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ಉದ್ಯೋಗಕ್ಕೆ ವೋಟು ಎಂಬ ಹೆಸರಿನಲ್ಲಿ ಸಹಿ ಸಂಗ್ರಹಣಾ ಅಭಿಯಾನ ನಡೆಯಿತು. ಉದ್ಯೋಗಕ್ಕಾಗಿ ಯುವಜನರು ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಈ ಸಹಿ ಸಂಗ್ರಹಣಾ ಅಭಿಯಾನ ನಡೆಸಿದೆ. ಬರುವ ಫೆಬ್ರವರಿ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಯುವ ಅಧಿವೇಶನದ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಸಿದರು. ನಿರುದ್ಯೋಗ ಒಂದು ವಯಕ್ತಿಕ ಸಮಸ್ಯೆಯಲ್ಲ. ಅದು ಸರ್ಕಾರಗಳ ಆರ್ಥಿಕ ನೀತಿಗಳ ಫಲವಾಗಿದೆ. ಕೃಷಿ ಮತ್ತು ಪೂರಕ ಉದ್ಯಮಗಳಿಂದಲೇ ಕೋಟ್ಯಂತರ ಲಾಭದಾಯಕ ಉದ್ಯೋಗ ಸೃಷ್ಠಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Please follow and like us:
error