ಉದುರಿಬಿದ್ದ ಮೇಲ್ಛಾವಣಿ ಸಿಮೆಂಟ್ : ಕಾರ್ಯಕರ್ತೆಗೆ ಗಾಯ

Koppala: ಮೇಲ್ಚಾವಣಿ ಸಿಮೆಂಟ್ ಉದುರಿಬಿದ್ದು, ಆಸ್ಪತ್ರೆ ಸಿಬ್ಬಂದಿ ಗಾಯಗೊಂಡಿರೋ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಹಾಯವಾಣಿಯ ಕಾರ್ಯಕರ್ತೆ ಶರಣಮ್ಮ ಮಡಿವಾಳಗೆ ತಲೆಗೆ ತೀವ್ರ ಗಾಯವಾಗಿದೆ. ಹಳೆಯ ಕಟ್ಟಡದ ಮೇಲೆ ಮತ್ತೊಂದು ಕಟ್ಟಡ ಕಟ್ಟುತ್ತಿರುವ ಹಿನ್ನೆಲೆ ದುರಂತ ನಡೆದಿದೆ.‌ ಕ್ಯೂರಿಂಗ್ ಗಾಗಿ ನೀರು ಬಿಟ್ಟಿದ್ದರಿಂದ ಮೇಲ್ಚಾವಣಿ ಸಡಿಲಗೊಂಡಿದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿಯೇ ಗಾಯಗೊಂಡ ಕಾರ್ಯಕರ್ತೆಗೆ ಚಿಕಿತ್ಸೆ ನೀಡಲಾಯಿತು.