ಉದಯೋನ್ಮುಕ ಆಟಗಾರರಿಗೆ ಕೆಪಿಎಲ್ ಅತ್ಯುತ್ತಮ ವೇದಿಕೆ- ಆದಿಲ್ ಪಟೇಲ್

ಕೊಪ್ಪಳ : ಐಪಿಎಲ್ ಮಾದರಿಯಲ್ಲಿ ಜಿಲ್ಲೆಯಲ್ಲಿ ಪ್ರಪಥಮ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸುವ ಮೂಲಕ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಯುವಕರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನ ಈ ವೇದಿಕೆಯ ಮೂಲಕ ಮಾಡಲಾಗುವುದು ಎಂದು ತಾಲೂಕ ಕ್ರೀಡಾಂಗಣ ರಕ್ಷಣೆ ಹೋರಾಟ ಸಮಿತಿಯ ಅಧ್ಯಕ್ಷ ಆದಿಲ್ ಪಟೇಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐಪಿಎಲ್ ಮಾದರಿಯಲ್ಲಿ ನಗರದಲ್ಲಿ ಪ್ರಪಥÀಮ ಬಾರಿಗೆ ಕ್ರಿಕೇಟ್ ಪಂದ್ಯಾವಳಿಯನ್ನು ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ಇರುವ ಯುವ ಪ್ರತಿಭಾವಂತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿ ಕೊಡುವ ಪ್ರಯತ್ನವನ್ನು ಅಮೀನಪುರ ಸ್ಪೋಟ್ರ್ಸ ಕ್ಲಬ್ ಮಾಡುತ್ತಿದೆ ಎಂದು ಹೇಳಿದರು. ನಗರದ ಸಾರ್ವಜನಿಕ ಮೈದಾನದಲ್ಲಿ ಡಿ. 2 ರಂದು ಪಂದ್ಯಾವಳಿ ಆರಂಭ ಗೊಳ್ಳಲಿದೆ, ಒಟ್ಟು 8 ಪ್ರಾಂಚೈಸಿಗಳು ಇದರಲ್ಲಿ ಭಾಗವಹಿಸಿದ್ದು ಹೀಗಾಗಲೆ ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದೆ ಪ್ರತಿ ತಂಡದಲ್ಲಿ 15 ರಿಂದ 18 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯ ಸುಮಾರು 150 ಕ್ಕೂ ಅಧಿಕ ಕ್ರೀಡಾಪಟುಗಳು ತಮ್ಮ ಪ್ರತಿಭೆ ಅನಾವರಣ ಮಾಡಲು ಪ್ರೋತ್ಸಾಹ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು ಮುಖ್ಯ ಅತಿಥಿಯಾಗಿ ಸಂಸದ ಸಂಗಣ್ಣ ಕರಡಿ ಭಾಗವಹಿಸುವರು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 40,000 ಮತ್ತು ಶೀಲ್ಡ್ ನೀಡಲಾಗುವುದು, ದ್ವೀತಿಯ ಬಹುಮಾನ ಪಡೆದ ತಂಡಕ್ಕೆ 20,000 ಮತ್ತು ಶೀಲ್ಡ್, ತೃತಿಯ ಬಹುಮಾನ ಪಡೆದ ತಂಡಕ್ಕೆ 10,000 ಹಾಗೂ ಶೀಲ್ಡ್ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು. ವಿರುಪಾಕ್ಷಿ ಗೊಂಬಿನ್ ಸೇರಿದಂತೆ ಇತರರು ಉಪಸ್ಥಿತರಿದರು.

Please follow and like us:
error