ಉತ್ತರ ಕರ್ನಾಟಕ ಭಾಗಗಳಲ್ಲಿ ಕೈಕಾರಿಕೆಗಳ ಅಭಿವೃದ್ಧಿಗೆ ಒತ್ತು : ಜಗದೀಶ ಶೆಟ್ಟರ್


ಕೊಪ್ಪಳ, : ಉತ್ತರ ಕರ್ನಾಟಕ ಭಾಗಗಳಲ್ಲಿ ಉದ್ದಿಮೆಗಳು ಕಡಿಮೆ ಸಂಖ್ಯೆಯಲ್ಲಿದ್ದು, ಈ ಭಾಗದಲ್ಲಿ ಹೆಚ್ಚು-ಹೆಚ್ಚು ಉದ್ದಿಮೆಗಳನ್ನು ಸ್ಥಾಪಿಸಲು ಹೊಸ ಕೈಗಾರಿಕಾ ನೀತಿಯಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಜಗದೀಶ ಶೆಟ್ಟರ್ ಅವರು ಹೇಳಿದರು.
ಅವರು ಗುರುವಾರದಂದು (ಜೂನ್.18) ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಬೆಂಗಳೂರು ಮತ್ತು ಬಸಾಪುರ ಕೊಪ್ಪಳ ಕೈಗಾರಿಕಾ ವಸಾಹತುವಿನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕೆಗಳಿಗೆ ಸಂಬAಧಿಸಿದ ಅತೀ ಹೆಚ್ಚು ಉದ್ದಿಮೆಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿದ್ದು, ಹೆಚ್ಚಿನ ಸಮಾವೇಶಗಳು ಬೆಂಗಳೂರಿನಲ್ಲಿಯೇ ನಡೆಯುತ್ತವೆ. ಹಾಗಾಗಿ ಈ ಭಾಗದಲ್ಲಿಯ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಫೆ. 14 ರಂದು ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಉದ್ದಿಮೆಗಳ ಅಭಿವೃದ್ಧಿಗಾಗಿ ಹೊಸ ಕೈಗಾರಿಕಾ ನೀತಿಯನ್ನು ಹಾಗೂ ಟೈರ್-2 ಮತ್ತು ಟೈರ್-3 ನಿಯಮಗಳನ್ನು ಜಾರಿಗೆ ತಂದಿದ್ದು, ಉದ್ದಿಮೆಗಳು ಇಲ್ಲದ ಜಿಲ್ಲೆಗಳು ಮತ್ತು ಹಿಂದುಳಿದ ತಾಲ್ಲೂಕುಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಬಹುದಾಗಿದ್ದು, ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ.  ಕೊಪ್ಪಳದಲ್ಲಿ ಕೈಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣವಿದ್ದು, ಬೆಳಗಾವಿಯ ಎಸ್.ಇ.ಝಡ್. ನ  ಎಕಸ್ಸ ಎನ್ನುವಲ್ಲಿ ಸಾವಿರಾರು ಜನರು ಉದ್ಯೋಗ ಮಾಡುತ್ತಿದ್ದು, ಅವರು ಕೊಪ್ಪಳದಲ್ಲಿ ಟ್ವೆöÊಸ್ ಕ್ಲಷ್ಟರ್ ಈ ಭಾಗದಲ್ಲಿ ಮಾಡುತ್ತಿದ್ದಾರೆ ಇದರಿಂದ ಹಲವು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.
ಬಸಾಪುರದಲ್ಲಿ ಒಟ್ಟು 104.10 ಎಕರೆ ಭೂಮಿಯಲ್ಲಿ ಕೈಗಾರಿಕಾ ವಸಾಹತು ಇದ್ದು, ಇಲ್ಲಿ 74 ಜನರಿಂದ ಅರ್ಜಿಗಳು ಬಂದಿದ್ದು, ಇನ್ನು ಅರ್ಜಿಗಳು ಬರಬೇಕಾಗಿತ್ತು. ಆದರೆ ಕರೋನಾ ಇರುವುದರಿಂದ ಕಡಿಮೆ ಅರ್ಜಿಗಳು ಬಂದ ಕಾರಣ ಇನ್ನೂ ಎರಡು ತಿಂಗಳ ಕಾಲ ಅರ್ಜಿಯ ದಿನಾಂಕವನ್ನು ವಿಸ್ತರಿಸಲು ಸೂಚಿಸಿದ್ದೇನೆ.  ಇದೇ ಜಾಗದಲ್ಲಿ 25 ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು ಪಡೆಯಬಹುದಾಗಿದ್ದು,  ಕೈಗಾರಿಕೆ ಸ್ಥಾಪನೆ ಮಾಡಲು ಅವರಿಗೆ ಶೇ.90 ರಷ್ಟು ಮೀಸಲಾತಿ ಸೌಲಭ್ಯವಿದ್ದು, ಕೇವಲ ಶೇ.10 ರಷ್ಟು ಮಾತ್ರ ಪಾವತಿಸಿ ಇದರ ಸದುಪಯೋಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಉದ್ದಿಮೆದಾರರು ಪಡೆಯಬೇಕು ಎಂದು ಹೇಳಿದರು.
ಯಾದಗಿರಿ ಜಿಲ್ಲೆಯ ಕಡೆಚೂರು ಇಂಡಸ್ಟಿçಯಲ್ ಏರಿಯಾದಲ್ಲಿ 2000 ಎಕರೆ ಜಮೀನು ಇದ್ದು, ಇಲ್ಲಿ ಹೈದರಾಬಾದ್‌ನ ಫಾರ್ಮಾಸಿಟಿಕಲ್‌ನ 14 ಕಂಪನಿಗಳು ಒಂದು ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡಲು ಮುಂದೆ ಬಂದಿವೆ.  ಮತ್ತು ಯಾವುದೇ ಉದ್ದಿಮೆದಾರರು ನನಗೆ ಸಂಪರ್ಕಿಸಿದಾಗ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಲಹೆಗಳನ್ನು ಆಗಾಗ ಅವರಿಗೆ ನೀಡುತ್ತಿರುತ್ತೇನೆ ಎಂದರು.
ಕರೋನಾ ಈ ಜಗತ್ತಿಗೆ ಕಾಡುತ್ತಿರುವ ಒಂದು ಮಾರಕ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ.  ಹಾಗಾಗಿ ಅದರ ನಿಯಂತ್ರಣಕ್ಕಾಗಿ ನಾವು ನಮ್ಮನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ.  ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.  ಸ್ಯಾನಿಟೈಸರ್ ಮತ್ತು ಸಾಬೂನಿನಿಂದ ಆಗಾಗ ಕೈಗಳನ್ನು ತೊಳೆಯುವುದು ಮತ್ತು ವಿಶೇಷವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಚಿವರು ಸಲಹೆ ನೀಡಿದರು.
ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕೃಷಿ ಚಟುವಟಿಕೆಗಳ ಜೊತೆ-ಜೊತೆಗೆ ಉದ್ದಿಮೆಗಳು ಬೆಳಸುವುದರಿಂದ ದೇಶಿಯ ಉತ್ಪನ್ನಗಳನ್ನು ರಫ್ತು ಮಾಡಲು ಸಹಕಾರಿಯಾಗುತ್ತದೆ.  ಹಾಗಾಗಿಯೇ ನಮ್ಮ ಪ್ರಧಾನ ಮಂತ್ರಿಗಳು 20 ಲಕ್ಷ ಕೋಟಿ ಮೊತ್ತದ “ಆತ್ಮ ನಿರ್ಭರ ಯೋಜನೆ” ಜಾರಿಗೆ ತಂದಿದ್ದು, ಇದರಿಂದ ದೇಶಿಯ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುತ್ತದೆ.  ಬಸಾಪುರ ಕೈಗಾರಿಕಾ ಪ್ರದೇಶದಲ್ಲಿ 104 ಎಕರೆ ಜಾಗವಿದ್ದು, ಇದು ಈ ಭಾಗದ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ.  ಇಲ್ಲಿ ಯಾವುದೇ ಕಚೇರಿ ಇಲ್ಲದ ಕಾರಣ ಈ ಭಾಗದ ಉದ್ದಿಮೆದಾರರು ಬಳ್ಳಾರಿ ಕಡೆಗೆ ಹೋಗುವಂತಾಗಿದೆ.  ಆದ್ದರಿಂದ ಸ್ಥಳೀಯವಾಗಿ ಕೊಪ್ಪಳದಲ್ಲಿ ಒಂದು ಕಚೇರಿಯನ್ನು ಸ್ಥಾಪಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು, ಈ ಭಾಗದಲ್ಲಿ ಕಬ್ಬಿಣ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವದರಿಂದ ಇದಕ್ಕೆ “ಸ್ಟೀಲ್ ಪಾರ್ಕ್” ಎಂದು ಘೋಷಣೆ ಮಾಡಬೇಕು.  ಹಲವಾರು ಕೈಗಾರಿಕೆಗಳಿಗಾಗಿ ರೈತರು ತಮ್ಮ ಭೂಯಿಯನ್ನು ನೀಡಿದ್ದಾರೆ.  ಆದರೆ ಅವರಿಗೆ ಸರಿಯಾದ ಕೆಲಸಗಳನ್ನು ನೀಡಿರುವುದಿಲ್ಲ. ಮತ್ತು ಈ ಭಾಗಕ್ಕೆ ಯಾವುದೇ ಜಿಲ್ಲೆಯಿಂದ ಬಂದವರಾಗಿದ್ದರೂ ಮೊದಲು ನಮ್ಮ ಭಾಗದ ಯುವಕರಿಗೆ ಉದ್ಯೋಗದಲ್ಲಿ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಕೆ.ಎಸ್.ಎಸ್.ಐ.ಡಿ.ಸಿ. ಮುಖ್ಯ ಇಂಜಿನಿಯರ್ ಜಗದೀಶ ಸೇರಿದಂತೆ ಜಿಲ್ಲೆಯ ಉದ್ದಿಮೆದಾರರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error