ಉತ್ತರಕರ್ನಾಟಕದ ರೈತರಿಗೆ ವಿಶೇಷವಾದ ಹಬ್ಬ..

​ಎಳ್ಳಮಾವಾಸ್ಯೆ ಇಂದು ಉತ್ತರಕರ್ನಾಟಕದ ರೈತರಿಗೆ ವಿಶೇಷವಾದ ಹಬ್ಬ. ಎಲ್ಲಾ ಜೀವಿಗಳಿಗೂ ಆಸರೆಯಾಗಿರುವ ಉತ್ತಮ ಫಸಲುಗಳನ್ನು ನೀಡಿ ಸಲಹುವ ಭೂತಾಯಿಗೆ ವಿಶೇಷ ಪೂಜೆ ಚೆರಗಚೆಲ್ಲುವುದು ಎಳ್ಳು ಹಾಕಿದ ಜೋಳದರೊಟ್ಟಿಗಳು, ಸಜ್ಜೆ ನವಣೆ ರೊಟ್ಟಿಗಳು, ಕರಿಗಡುಬು, ಹೋಳಿಗೆ ಎಲ್ಲಾ ಮಾಡಿ ತುಂಬಿಡುವರು ಸಂಭ್ರಮ ಸಡಗರದಿಂದ ಎತ್ತುಗಳನ್ನು, ಗಾಡಿಗಳನ್ನು ತೊಳೆದು ಸಿಂಗರಿಸಿ ತಯಾರುಮಾಡಿ ಮನೆಯವರೆಲ್ಲ, ಸ್ನೇಹಿತರು ,ನೆಂಟರಿಷ್ಟರು ಗಳನ್ನೆಲ್ಲಾ ಕೂಡಿಸಿಕೊಂಡು  ಎತ್ತಿನ ಗಾಡಿಯಲ್ಲಿ ತಮ್ಮ ತಮ್ಮ ಹೊಲಗಳಿಗೆ ತೆರಳುವರು -ಹೊಲದಲ್ಲಿ ಬೆಳೆದುನಿಂತ ಹಿಂಗಾರು ಪೈರಿನ ತೆನೆಗಳನ್ನು ಕಟ್ಟಿ ಅದಕ್ಕೆ ಹೂವು ಬಳೆ ಸರಗಳಿಂದ ಸಿಂಗರಿಸಿ ಕುಬುಸದ ಖಣ ಹೊದಿಸುವರು, ಮತ್ತೆ ತಾವು ತಂದ ಬುತ್ತಿ, ಪಾಯಸ, ರೊಟ್ಟಿ, ಸಿಹಿಗಳನ್ನೆಲ್ಲಾ ಎಲೆಯಲ್ಲಿ ಬಡಿಸಿ ನೈವೇದ್ಯಮಾಡಿ, ಮಂಗಳಾರತಿಮಾಡಿ ಭಕ್ತಿಯಿಂದ ಭೂತಾಯಿಗೆ ನಮಿಸುವರು ನೈವೇದ್ಯಮಾಡಿದ ಪ್ರಸಾದವೇ ಚರಗು,  ಆಚೆರಗನ್ನು ಹೊಲದ ಎಲೆಡೆಯೂ ಯಜಮಾನ ಚೆಲ್ಲುವನು ಭೂತಾಯಿಗೆ ಚೆರಗನ್ನು ಚೆಲ್ಲಿ ಅವಳನ್ನು ಸಂತಸಪಡಿಸಿ ತಮ್ಮ ಭೂಮಿಯಲ್ಲಿ ಹಸನಾದ ಹೆಚ್ಚಿನ  ಫಸಲು ಕೊಡಮ್ಮಾ ಎಂದು ರೈತರು ಬೇಡಿಕೊಂಡು ಭಕ್ತಿಯಿಂದ ನಮಸ್ಕರಿಸಿ ಆಮೇಲೆ ಬಂದುಬಾಂಧವರು, ಸ್ನೇಹಿತರೊಡಗೂಡಿ ಎಲ್ಲರೂ ಭೋಜನ ಮಾಡುವರು. ಭಾರತದ ಬೆನ್ನೆಲುಬು ನಮ್ಮ ರೈತರು ಹಾಗೂ ಸೈನಿಕರು

    ದೇಶವನ್ನು ಕಾಯುತಿಹರು ಗಡಿಗಳಲ್ಲಿ ವೀರರು, ನಮಗೆ ಅನ್ನ ನೀಡಲು ದುಡಿಯುತಿಹರು ರೈತರು ” ಅವರ ತ್ಯಾಗ ಪರಿಶ್ರಮದಿಂದ ನಾವಿಂದು ಉಂಡುತಿಂದು ಹಾಯಾದ ಜೀವನ ನೆಡೆಸುತ್ತಿದ್ದೇವೆ ಅಂತಹ ರೈತರ ಸುಗ್ಗಿಯ ಹಿಗ್ಗಿನ ಹಬ್ಬಕ್ಕೆ ನಾವೂ ಶುಭ ಹಾರೈಸೋಣ ಅಲ್ಲವೇ? ???

Please follow and like us:
error