ಉತ್ತಮ ಸೇವೆಗೈದವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಜಿಲ್ಲೆಯ ಒಟ್ಟು 14 ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಸವೋತ್ತಮ ಸೇವಾ ಪ್ರಶಸ್ತಿ ಪಡೆದವರ ವಿವರ ಇಂತಿದೆ. ಕೃಷ್ಣಮೂರ್ತಿ ದೇಸಾಯಿ- ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೊಪ್ಪಳ. ಡಾ. ಈಶ್ವರ ಸವಡಿ- ವೈದ್ಯರು, ಗಂಗಾವತಿ ಸಾರ್ವಜನಿಕ ಆಸ್ಪತ್ರೆ. ಎಸ್.ಎನ್. ತಿಮ್ಮನಗೌಡ್ರ- ಸಹಾಯಕ ಕಾರ್ಯದರ್ಶಿ, ಎಪಿಎಂಸಿ ಕೊಪ್ಪಳ. ಮನೋಹರ್- ಬೆರಳಚ್ಚುಗಾರ, ಡಿಸಿ ಆಫೀಸ್, ಕೊಪ್ಪಳ. ತಾನಾಜಿ ನರಗುಂದ- ಮ್ಯಾನೇಜರ್, ಜಿಪಂ., ಕೊಪ್ಪಳ. ಸುಧೀರ ಅವರಾದಿ- ವೈದ್ಯಕೀಯ ರೇಡಿಯೋಲಾಜಿಕಲ್ ಟೆಕ್ನಾಲಜಿಸ್ಟ್, ಕೊಪ್ಪಳ. ಬಿ. ಬಾಬು- ಮುಖ್ಯಾಧಿಕಾರಿ, ಪಪಂ, ಭಾಗ್ಯನಗರ. ವಿಜಯಕುಮಾರ- ಉಪತಹಸಿಲ್ದಾರ, ನಾಢಕಚೇರಿ ಹಿರೇವಂಕಲಕುಂಟಾ. ಶಿವರಾಜ- ಪ್ರಮುಖ ಅಗ್ನಿಶಾಮಕರು, ಕೊಪ್ಪಳ. ದುರುಗಪ್ಪ- ಪೌರಕಾರ್ಮಿಕ, ಕೊಪ್ಪಳ ನಗರಸಭೆ. ರೇವಣಸಿದ್ದಪ್ಪ- ಬಸ್ ಚಾಲಕ, ಕೊಪ್ಪಳ. ಶಿವಕುಮಾರ- ಬಸ್ ಚಾಲಕ, ಕೊಪ್ಪಳ. ವೀರೇಶ ಎಂ.- ಎಇಇ, ಜೆಸ್ಕಾಂ, ಮುನಿರಾಬಾದ್. ವೆಂಕಟೇಶ್- ಪಿಡಿಒ, ದೋಟಿಹಾಳ.
ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error