You are here
Home > Koppal News > ಉತ್ತಮ ಸಂದೇಶ ನೀಡುವಂತಹ ಚಲನಚಿತ್ರಗಳು ಹೆಚ್ಚಾಗಲಿ: ಸಚಿವ ಬಸವರಾಜ ರಾಯರಡ್ಡಿ

ಉತ್ತಮ ಸಂದೇಶ ನೀಡುವಂತಹ ಚಲನಚಿತ್ರಗಳು ಹೆಚ್ಚಾಗಲಿ: ಸಚಿವ ಬಸವರಾಜ ರಾಯರಡ್ಡಿ

ಕೊಪ್ಪಳ: ಉತ್ತಮ ಸಂದೇಶ ನೀಡುವಂತಹ ಸದಭಿರುಚಿಯ ಚಲನಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ರಾಯರಡ್ಡಿ ಅವರು ಅಭಿಪ್ರಾಯಪಟ್ಟರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳ ಉಚಿತ ಪ್ರದರ್ಶನ ನೀಡುವ ಸಲುವಾಗಿ ನಗರದ ಶಾರದ ಚಿತ್ರಮಂದಿರದಲ್ಲಿ ಫೆ. 03 ರಿಂದ 09 ರವರೆಗೆ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ಚಿತ್ರೋತ್ಸವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

 ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಹಸಿಲ್ದಾರ್ ಗುರುಬಸವರಾಜ್, ಗಣ್ಯರಾದ ಕೃಷ್ಣ ಇಟ್ಟಂಗಿ, ನವಲಿ ಹಿರೇಮಠ, ಎಸ್. ಹೆಬ್ಬಾಳ, ಶಿವಾನಂದ ಹೊದ್ಲೂರ ಮುಂತಾದವರು ಪಾಲ್ಗೊಂಡಿದ್ದರು.   ಎಲ್ಲ ಗಣ್ಯರು ಉದ್ಘಾಟನಾ ಸಮಾರಂಭದ ನಂತರ ಪ್ರದರ್ಶನಗೊಂಡ  ಕನ್ನಡ ಚಲನಚಿತ್ರ ನಟ ಪುನೀತ್‍ರಾಜ್‍ ಕುಮಾರ ಅಭಿನಯದ ಮೈತ್ರಿ ಚಲನ ಚಿತ್ರವನ್ನು ಮಕ್ಕಳೊಂದಿಗೆ ಕುಳಿತು ಕೆಲಹೊತ್ತು ಆಸಕ್ತಿಯಿಂದ ವೀಕ್ಷಿಸಿದರು.  ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಿರುವುದರಿಂದ, ಮೈತ್ರಿ ಚಲನಚಿತ್ರ ಶಾರದ ಚಿತ್ರಮಂದಿರದಲ್ಲಿ ಹೌಸ್‍ಫುಲ್ ಪ್ರದರ್ಶನಗೊಂಡಿತು.

    

Leave a Reply

Top