ಉತ್ತಮ ಶಿಕ್ಷಣ ಪಡೆದ ಮಕ್ಕಳೇ ದೇಶದ ಸಂಪತ್ತು – ಹನುಮಂತಪ್ಪ ಬೀಡನಾಳ


ಕೊಪ್ಪಳ : ಮಕ್ಕಳೇ ದೇಶದ ನಿಜವಾದ ಸಂಪತ್ತು. ಮಕ್ಕಳನ್ನು ಸುಕ್ಷಿತರನ್ನಾಗಿ ಮಾಡಿದರೆ ಅವರೇ ನಿಜವಾದ ಅಭಿವೃದ್ದಿಯ ಸಂಕೇತವಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳೂ ಸಹ ಪರಿಶ್ರಮ ಪಡಬೇಕು. ಅಲ್ಲದೆ ಶಿಕ್ಷಕರೂ ಸಹ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು ಎಂದು ಸಮಾಜ ಸೇವಕ, ಜಲವರ್ದಿನಿಯ ಸಂಸ್ಥೆಯ ಮಾಲಕ ಹನುಮಂತಪ್ಪ ಬೀಡನಾಳ ಹೇಳಿದರು.
ಅವರಿಂದು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೭೨ನೇ ಸ್ವಾತಂತ್ರ್ಯೋತ್ಸವ ನಿಮಿತ್ಯ ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ದೇಶದ ಭವಿಷ್ಯ ಇರುವದೇ ಮಕ್ಕಳ ಕೈಯಲ್ಲಿ. ಸೂಕ್ತ ಮಾರ್ಗದರ್ಶನ ಮತ್ತು ಉತ್ತಮ ಶಿಕ್ಷಣದಿಂದ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಹುದು ಎಂದು ಹೇಳಿದರು.
ವೇದಿಕೆಯ ಮೇಲೆ ಬಸವರಾಜ್ ಬಹಾದ್ದೂರ ಬಂಡಿ, ಶರಬಸನಗೌಡ ಪಾಟೀಲ್, ಮುಖ್ಯೋಪಾಧ್ಯಾಯನಿ ರೇಣುಕಾ ಅತ್ತನೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಆರ್.ಎಚ್.ಅತ್ತನೂರು ವಹಿಸಿಕೊಂಡಿದ್ದರು. ದ್ವಜಾರೋಹಣದ ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.

Please follow and like us:
error

Related posts