ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕನಿಂದ ಶಾಲಾ ಮಕ್ಕಳ ದುರ್ಬಳಕೆ

Koppal ಮಕ್ಕಳು ಶಾಲೆಗೆ ಹೋಗೋದು ಅಕ್ಷರ ಕಲೀಲಿ ಅಂತ. ಶಿಕ್ಷಕರು ಸಹ ಮಕ್ಕಳಿಗೆ ಪಾಠ ಮಾಡಬೇಕು. ಆದ್ರೆ ಇಲ್ಲೊಂದು ಶಾಲೇಲಿ ಮಕ್ಕಳು ಅಕ್ಷರ ಕಲಿಯೋದಕ್ಕಿಂತ ದೂರದಿಂದ ಗಾಲಿಬಂಡಿಯಲ್ಲಿ ಶಾಲೆಗೆ ನೀರು ತರೋದೇ ಹೆಚ್ಚು. ವಿಶೇಷ ಏನಂದ್ರೆ ಈ ಶಾಲೆಯ ಮುಖ್ಯ ಶಿಕ್ಷಕರೇ ಮಕ್ಕಳಿಂದ ನೀರಿನ ಕ್ಯಾನ್‌ಗಳನ್ನ ತರಸ್ತಾರಂತೆ. ಮುಖ್ಯ ಶಿಕ್ಷಕ ನಾರಾಯಣಪ್ಪ ಚಿತ್ರಗಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ಪಡೆದಿರೋದು ಮತ್ತೊಂದು ದುರಂತವೇ ಸರಿ. ಇದೆಲ್ಲ ನಡೆದಿದ್ದು ಕೊಪ್ಪಳ ಜಿಲ್ಲೆಯ ಮಾದಿನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಜವಾನರು ಮಾಡುವ ಕೆಲಸವನ್ನ ಶಾಲಾ ಮಕ್ಕಳ ಕೈಯಿಂದ ಮಾಡಸ್ತಿದಾರೆ ಮುಖ್ಯ ಶಿಕ್ಷಕ ನಾರಾಯಣಪ್ಪ. ಒಂದು ವೇಳೆ ನೀರು ತರಲು ಶಾಲಾ ಮಕ್ಕಳು ನಿರಾಕರಿಸಿದ್ರೆ ಅವರಿಗೆ ಹೊಡೆಯೋದು ಪಕ್ಕೆಲುಬನ್ನ ಚಿವುಟೋದು ಕಟ್ಟಿಟ್ಟ ಬುತ್ತಿಯಂತೆ. ಈ ಶಾಲೇಲಿ ಓದೋಕೆ ಅಂತ ಬರೋ ಮಕ್ಕಳು ಸರದಿ ಪ್ರಕಾರ ನಿತ್ಯ ೬ ಕ್ಯಾನ್ ನೀರು ತರಬೇಕಂತೆ. ಶಾಲೆಗೆ ಬರೋ ವಿದ್ಯಾರ್ಥಿಗಳು ನೀರು ತರೋದನ್ನ ದೃಶ್ಯವನ್ನ ಗಮನಿಸಿದ್ರೆ ಗೊತ್ತಾಗುತ್ತೆ. ಹೀಗೆ ಶಾಲಾ ಮಕ್ಕಳನ್ನ ಮುಖ್ಯ ಶಿಕ್ಷಕ ನಾರಾಯಣಪ್ಪ ದುರ್ಬಳಕೆ ಮಾಡಿಕೊಳ್ತಿದಾರೆ ಎಂದು ಸ್ಥಳಿಯರಯ ಆರೋಪ ಮಾಡುತ್ತಿದ್ದಾರೆ

Please follow and like us:
error