You are here
Home > Koppal News > ಉಜ್ವಲ ಯೋಜನೆ ಅಡಿ ಗ್ಯಾಸ್ ಕಿಟ್ ವಿತರಣೆ

ಉಜ್ವಲ ಯೋಜನೆ ಅಡಿ ಗ್ಯಾಸ್ ಕಿಟ್ ವಿತರಣೆ

ಕೊಪ್ಪಳ: ನಗರದ ೧೭ ನೇ ವಾರ್ಡಿನ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಅಡಿ ಉಚಿತ ಗ್ಯಾಸ್ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ ಇಟಗಿ ಮಾತನಾಡಿ, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಭಾರತ ದೇಶದಲ್ಲಿ ಬಡತನದಿಂದ ಬಳಲುತ್ತಿರುವ ಮಹಿಳೆಯರ ಮೇಲಿರುವ ಕಾಳಜಿಯೇ ಉಜ್ವಲ ಯೋಜನೆ ಜನ್ಮ ತಾಳಲು ಕಾರಣವಾಗಿದೆ. ಯಾವುದೇ ಧಮ್ ಜಾತಿ ಎನ್ನದೇ. ದೇಶದ ಕಟ್ಟಕಡೆಯ ಮಹಿಳೆಯರು ಸ್ವಾವಲಂಭಿಯಾಗಬೇಕೆನ್ನುವ ದೂರದೃಷ್ಠಿ ಹೊಂದಿರುವ ಅವರನ್ನು ವಿಶ್ವವೇ ವಿಶ್ವ ನಾಯಕ ಎಂದು ಕರೆಯುತ್ತಿದೆ. ಉಜ್ವಲ್ ಯೋಜನೆ ಮುಂದಿನ ಗುರಿಯನ್ನು ೮ ಕೋಟಿಗೆ ಏರಿಕೆ ಮಾಡಲಾಗಿದೆ. ಇದರಿಂದ ದೇಶದ ಇನ್ನೂ ಅನೇಕ ಮಹಿಳೆಯರು ಅನಾರೋಗ್ಯ ಮತ್ತು ಸಮಯದ ಉಳಿತಾಯದಿಂದಾಗಿ ದೇಶವು ಅಭಿವೃದ್ದಿಯನ್ನು ಕಾಣಲಿದೆ. ಹಲವಾರು ದಶಕಗಳಿಂದ ಅಡುಗೆ ಅನಿಲ ಬಳಕೆಯಿಂದ ವಂಚಿತರಾಗಿದ್ದ ಮಹಿಳೆಯರು ಇವತ್ತಿನ ದಿನ ಮೋದಿಯವರ ಉಜ್ವಲ್ ಯೋಜನೆ ಕುರಿತು ಪ್ರಶಂಸೆ ಮತ್ತು ಅಭಿಮಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಭಾರತದ ಬಡ ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿಗಳಾಗಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಿದ್ದು ಕಲ್ಲನ್ನವರ, ನಗರಸಭೆ ಸದಸ್ಯ ಮಾರುತಿ ಕಾರಟಗಿ, ಗ್ಯಾಸ್ ಏಜನ್ಸಿ ಮುಖ್ಯಸ್ಥರಾದ ರಾಘವೇಂದ್ರ ರಾವ್, ನಿಂಗಪ್ಪ ಕವಲೂರ, ವೆಂಕಪ್ಪ ಕಲ್ಲಣ್ಣವರ, ವೀರೇಶ ಗುಡಿ, ಸಿದ್ದಪ್ಪ ಕಲ್ಲಣ್ಣವರ, ವೆಂಕಟೇಶ ರಮನ್ಣ ಕಲ್ಲಣ್ಣವರ ಸೇರಿದಂತೆ ಇತರರು ಇದ್ದರು.

Top