ಉಜ್ವಲ ಪರಿಷ್ಕೃತ ಹಂತಕ್ಕೆ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಚಾಲನೆ


ಬಡವರ ಪರವಾದ ನಾಯಕ ನರೇಂದ್ರ ಮೋದಿ – ಸಂಸದ ಸಂಗಣ್ಣ ಕರಡಿ,

ಕೊಪ್ಪಳ: ದೇಶದ ಬಡವರ ಅನುಕೂಲಕ್ಕಾಗಿ ಪ್ರಧಾನಿ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಮುಂದಾದರು. ಇದರಿಂದಾಗಿ ಬಡವರಿಗೆ ಹೆಚ್ಚು ಅನುಕೂಲವಾಗಿದೆ. ಈ ಯೋಜನೆಯಿಂದಾಗಿ ಬಡವರ ಸುಖ ಜೀವನ ಕಳೆಯುವಂತಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಉಜ್ವಲ ಪರಿಷ್ಕೃತ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳು, ಅರಣ್ಯ ನಿವಾಸಿಗಳು, ಅತಿ ಹಿಂದುಳಿದ ವರ್ಗಗಳು ಫಲಾನುಭವಿಗಳಾಗಿದ್ದಾರೆ. ಇಂತಹ ಪ್ರತಿಯೊಂದು ಕುಟುಂಬಕ್ಕೂ ಅಡುಗೆ ಅನಿಲ ಸೌಲಭ್ಯವನ್ನು ಉಚಿತವಾಗಿ ಒದಗಿದಸುವ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯ ೫೨,೩೩೩ ಫಲಾನುಭವಿಗಳು ಉಜ್ವಲ ಯೋಜನೆಯ ಲಾಭ ಪಡೆದಿದ್ದಾರೆ. ಸಿಲೆಂಡರ ಸಮರ್ಪಕ ನಿರ್ವಹಣೆಗಾಗಿ ಕೊಪ್ಪಳ ಭಾಗದಲ್ಲಿ ಸಿಲಿಂಡರ್ ತುಂಬಿಸುವ ಘಟಕ ಸ್ಥಾಪಿಸಬೇಕು. ಈಗಾಗಲೇ ಕೊಪ್ಪಳ ಲೋಕಸಭಾ ಕ್ಷೆತ್ರಕ್ಕೆ ಕೇಂದ್ರ ಸರ್ಕಾರದಿಂದಲೇ ಅನೇಕ ಜನಪರ ಯೋಜನೆಯಡಿ ಸಾಕಷ್ಟು ಅನುದಾನ ದೊರಕಿದೆ. ಈ ಭಾಗದ ಗಂಗಾವತಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ತಾವು ಮುಂದಾಗಬೇಕು ಎಂದು ಕೇಂದ್ರ ಸಚಿವರನ್ನು ಕೇಳಿಕೊಂಡರು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಮಾತನಾಡಿ,
ರಾಜ್ಯದಲ್ಲಿ ಒಂಭತ್ತು ಲಕ್ಷ ಕುಟುಂಬಗಳಿಗೆ ಗ್ಯಾಸ್ ವಿತರಿಸಲಾಗುತ್ತಿದೆ. ಇದರಿಂದಾಗಿ ಬಡವರ, ಮಹಿಳೆಯರ, ಮಕ್ಕಳ ಆರೋಗ್ಯ ಕಾಪಾಡುವಲ್ಲಿ ನಮ್ಮ ಕೇಂದ್ರ ಸರಕಾರ ಮಹತ್ವವಾದ ಹೆಜ್ಜೆ ಇಟ್ಟಿದೆ ಎಂದರು.
ಪ್ರ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಃ ಬಡತನ ಅನುಭವಿಸಿ ಬಡತನ ನಿರ್ಮೂಲನೆ ಮಾಡುವಲ್ಲಿ ನಿರತರಾಗಿದ್ದಾರೆ. ೨೦೧೬ರಿಂದ ಗ್ಯಾಸ್ ನೀಡಲು ಆರಂಬಿಸಲಾಯಿತೋ ಅಂದಿನಿಂದ ಇಲ್ಲಿವರೆಗೂ ಆದಿವಾಸಿಗಳು ಮೊದಲು ಮಾಡಿ, ಇಂದು ಕೇಂದ್ರ ಸರ್ಕಾರದ ಯೋಜನೆಗಳು ತಲುಪುತ್ತ್ತಿವೆ. ರೈತರಿಗೆ, ಬಡಜನತೆಗೆ ಹಲವು ಯೋಜನೆಗಳನ್ನು ನೀಡಲಾಗಿದೆ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೊದಿ ಆಡಳಿತ ಜಾರಿ ಬಂದಾಗನಿಂದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶದಲ್ಲಿ ೨೬ ಕೋಟಿ ಕುಟುಂಬಗಳಿವೆ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಕೇವಲ ಮೂರುವರೆ ಕೋಟಿ ಕುಟುಂಬಕ್ಕೆ ಸಿಲಿಂಡರ್ ನೀಡಲಾಗಿತ್ತು. ಆದರೆ, ಮಾಜಿ ಪ್ರಧಾನ ಮಂತ್ರಿ ವಾಜಪೇಯಿ ಕಾಲದಲ್ಲಿ ಸುಮಾರು ನಾಲ್ಕು ಕೋಟಿ ಕುಟುಂಬಗಳಿಗೆ ತಲುಪಿಸಿದ ಕೀರ್ತಿ ಸಲ್ಲುತ್ತದೆ. ನಂತರ ಯುಪಿಎ ಹತ್ತು ವರ್ಷದಲ್ಲಿ ನಾಲ್ಕು ಕೋಟಿ ಕುಟುಂಬಕ್ಕೆ ನೀಡಲಾಗಿದೆ. ಆದರೆ, ಪ್ರಧಾನಿ ಮೋದಿ ಅವಧಿಯಲ್ಲಿ ಆರೂವರೆ ಕೋಟಿ ಕುಟುಂಬಕ್ಕೆ ನೀಡಿದ್ದೇವೆ. ಅಲ್ಲದೆ, ಮೂರು ಕೋಟಿ ಉಚಿತ ಗ್ಯಾಸ್ ಕೊಟ್ಟಿದ್ದೇವೆ. ಸಿಲಿಂಡರ್ ಇದ್ದವರು ಶ್ರೀಮಂತರು ಎಂಬ ಕಾಲವಿತ್ತು. ಆದರೆ ಅದನ್ನು ಸರಳೀಕರಿಸಿ ಇಂದು ಗ್ರಾಮದ ಪ್ರತಿ ಕುಟುಂಬಗಳಿಗೆ ಸಿಲಿಂಡರ್ ದೊರೆಯುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಷ್ಟಿಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಹಾಲಪ್ಪ ಆಚಾರ್, ಬಸವರಾಜ ದಡೇಸೂಗೂರ್, ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ, ಈಶಾನ್ಯ ಪದವಿಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ತಿಪ್ಪೇರುದ್ರಸ್ವಾಮಿ, ಸಿ.ವಿ. ಚಂದ್ರಶೇಖರ್, ಅಮರೇಶ್ ಕರಡಿ, ಹೇಮಲತಾ ನಾಯಕ್, ರಾಜು ಬಾಕಳೆ ಸೇರಿದಂತೆ ಎಚ್ ಪಿಸಿಎಲ್, ಐಒಸಿಎಲ್, ಬಿಪಿಸಿಎಲ್ ಕಂಪನಿಗಳ ಅಧಿಕಾರಿಗಳು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು, ಉಜ್ವಲ ಪ್ಲಸ್ ನಫಲಾನುಭವಿಗಳು ಪಾಲಗೊಂಡಿದ್ದರು.
ಉಜ್ವಲ್ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಕೇಂದ್ರ ಸಚಿವ ಪ್ರಕಾಶ ಜಾವಡೆಕರ್ ಗ್ಯಾಸ್ ಕೀಟ್ ವಿತರಿಸಿದರು.

Please follow and like us:
error

Related posts