ಉಚಿತ ಯೋಗ ಮತ್ತು ಪ್ರಾಣಯಾಮ ಶಿಬಿರ

ಕೊಪ್ಪಳ : ನಗರದ ಶಾರದಮ್ಮ ವಿ ಕೊತಬಾಳ ಕಾಲೇಜನ ಆವರಣ ಗವಿಮಠದಲ್ಲಿ ಪತಾಂಜಲಿ ಯೋಗಸಮಿತಿ, ಭಾರತಸ್ವಾಭಿಮಾನಿ ಟ್ರಸ್ಟ್, ಕಿಸಾನ್‌ಸೇವಾ ಸಮಿತಿ, ಯುವಭಾರತ್ ಹಾಗೂ ಮಹಿಳಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಏಪ್ರೀಲ್ ೧೪ ರಿಂದ ಏಪ್ರೀಲ ೧೮ ರವರಗೆ ಬೆಳಿಗ್ಗೆ ೫:೩೦ ರಿಂದ ೭ ಗಂಟೆಯವರೆಗೂ ೫ ದಿನಗಳ ಕಾಲ ಉಚಿತ ಯೋಗ ಮತ್ತು ಪ್ರಾಣಯಾಮ ಶಿಬಿರವನ್ನು ಆಯೋಜಿಸಲಾಗಿದೆ
ಏಪ್ರೀಲ್ ೧೮ ರಂದು ಪತಂಜಲಿ ಚಿಕಿತ್ಸಾಲಯ ಮತ್ತು ಸೂಪರ್ ಸ್ಟೋರ್ ಪ್ರಾರಂಭೋತ್ಸವದ ಅಂಗವಾಗಿ ೫ ದಿನಗಳ ಕಾಲ ಭವರಲಾಲ್ ಆರ್ಯ, ಬಾಲಚಂದ್ರ ಶರ್ಮಾಜೀ, ಡಾ. ಎಸ್.ಬಿ. ಹಂದ್ರಾಳ, ಆಚಾರ್ಯ ನರೇಂದ್ರ ಜಿ. ಶ್ರೀಮತಿ ದಾಕ್ಷಾಯಣಿ ಎಸ್ ಯೋಗ ಸಾಧಕರು ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಆದ್ದರಿಂದ ಈ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪ.ಯೋ.ಸ ನಗರ ಪ್ರಭಾರಿ ಬಸವರಾಜ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಾಮಗೋಪಾಲ ತಪಾಡಿಯಾ ಮೋ : ೮೭೬೨೧೭೯೯೧೩, ಭಿಮಸೇನ್ ಎಂ. ಮೋ : ೯೫೩೮೮೩೫೦೧೩, ಡಾ. ಮಂಜುನಾಥ ಸಜ್ಜನ್ ಮೋ : ೯೮೮೦೯೦೦೪೫೦, ವೀರಯ್ಯ ವಂಟಿಗೊಡಿಮಠ ಮೋ : ೯೯೦೨೫೬೦೪೨೧

Please follow and like us:
error