ಉಚಿತ ಬಸ್ ಪಾಸ್ ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಉಚಿತ ಬಸ್ ಪಾಸ್ ಯೋಜನೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಗಂಗಾವತಿ ವತಿಯಿಂದ ಬೃಹತ್ ಪ್ರತಿಭಟನೆ

ಗಂಗಾವತಿ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಇಂದು ರಾಜ್ಯಾದ್ಯಂತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಪ್ರತಿಭಟನೆಯ ಅಂಗವಾಗಿ ಗಂಗಾವತಿಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಕ್ಯಾಂಪಸ್ ಫ್ರಂಟ್ ಗಂಗಾವತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸೈಯ್ಯದ್ ಸರ್ಫರಾಜ್ ವಿದ್ಯಾರ್ಥಿಗಳ ಧ್ವನಿಯೂ ನಿಮ್ಮ ಕಣ್ಣೀರಿನಿಂದ ಹತ್ತಿಕ್ಕಲು ಸಾಧ್ಯವಿಲ್ಲ ಶೀಘ್ರವಾಗಿ ಉಚಿತ ಬಸ್ ಪಾಸ್ ಜಾರಿಯಾಗದಿದ್ದಲ್ಲಿ ಇನ್ನೂ ಉಗ್ರವಾದ ಹೋರಾಟ ಮುಂದುವರೆಯುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬಿ ಎಸ್ ಪಿ ತಾಲೂಕಾಧ್ಯಕ್ಷರಾದ ಜಿ. ಟಿ ನಾಗರಾಜ್ ಹಾಗೂ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ಸದಸ್ಯರಾದ ಅಫ್ಝಲ್, ಫೇರೋಜ್,ಇಮ್ರಾನ್,ಚಾಂದ್ ಮತ್ತು ಇನ್ನಿತರರಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಬಾಷಾ ನಿರೂಪಿಸಿದರು.

Please follow and like us:
error

Related posts