ಉಚಿತ ಕಂಪ್ಯೂಟರ್ ತರಬೇತಿ ಶಿಬಿರ

ಕೊಪ್ಪಳ : ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಪ್ರೌಢಶಾಲಾ ವಿದ್ಯಾರ್ಥಿಗಳ ೬ ತಿಂಗಳ ಉಚಿತ (ವಿದ್ಯಾರ್ಥಿ ವೇತನ ಸಹಿತ) ಕಂಪ್ಯೂಟರ್ ತರಬೇತಿಯನ್ನು ಉದಯ ಕಂಪ್ಯೂಟರ್ ಶಿಕ್ಷಣ ಸಂಸ್ಥೆ (ರಿ) ಕೊಪ್ಪಳ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯು ೬ ತಿಂಗಳ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಬೇಸಿಕ್ ಕಂಪ್ಯೂಟರ್ ಮಾಹಿತಿಯ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಮಾಣ ಪತ್ರ ನೀಡಲಾಗುವುದು. ಕಾರಣ ಪಾಲಕರು ಹಾಗೂ ವಿದ್ಯಾರ್ಥಿಗಳು ಈ ಕಂಪ್ಯೂಟರ್ ತರಬೇತಿಯ ಸದುದ್ದೇಶದ ಅವಕಾಶ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಾಚಾರ್ಯರಾದ ಗಂಗಾಧರ ಕೇಸರಿಮಠ ಇವರನ್ನು ಸಂಸ್ಥೆಯ ಕಛೇರಿ ಸಮಯದಲ್ಲಿ ಕೊಪ್ಪಳ ನಗರದ ಬಾಲಕೀಯರ ಪದವಿ ಪೂರ್ವ ಕಾಲೇಜು ಹತ್ತಿರವಿರುವ ಉದಯ ಕಂಪ್ಯೂಟರ ಶಿಕ್ಷಣ ಸಂಸ್ಥೆ , ತಾಲೂಕ ಪಂಚಾಯತ್ ರಸ್ತೆ. ಕೊಪ್ಪಳ ಇವರಲ್ಲಿ ದಿನಾಂಕ ೩೦.೧೧.೨೦೧೮ ರೊಳಗಾಗಿ ಸಂಪರ್ಕಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೮೪೪೭೮೭೬೯೯ ಅಥವಾ ೭೭೯೫೬೩೭೨೮೩ ಗೆ ಸಂಪರ್ಕಿಸಲು  ಕೋರಲಾಗಿದೆ.

Please follow and like us:
error