You are here
Home > Election_2018 > ಈ ಸಲ ಕಪ್ ನಮ್ದೆ – ಹೆಚ್.ಡಿ.ಕೆ

ಈ ಸಲ ಕಪ್ ನಮ್ದೆ – ಹೆಚ್.ಡಿ.ಕೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಾತಿಗೆ ಯಾರು ಮರುಳಾಗಲ್ಲ.ಅವರೇಲ್ಲಾ ಸೀಜನ್ ಪಾಲಿಟೀಷಿಯನ್ಸ್ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕುಕನೂರಿನಲ್ಲಿ ಮಾತನಾಡಿದ ಹೆಚ್.ಡಿ.ಕೆ , ಮೋದಿ ಹಾಗೂ ರಾಹುಲ್ ಗಾಂಧಿ ಪ್ರಚಾರಕ್ಕಿಂದ ಮನರಂಜನೆ ನೀಡುವುದೇ ಅವರ ಕೆಲಸವಾಗಿದೆ. ಯಾರ ಆಟ ಯಾರ ಆಡಬೇಕು ಎನ್ನುವುದು ಜನರು ತಿರ್ಮಾನ ಮಾಡ್ತಾರೆ. ಚುನಾವಣೆ ಅಖಾಡವನ್ನು ಇವರು ಸಿದ್ದ ಮಾಡೋದಿಲ್ಲ. ಬದಲಾಗಿ ಜನರೇ ಅಖಾಡವನ್ನು ಸಿದ್ದಮಾಡಿದ್ದಾರೆ ಎಂದು ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯನವರು ತಾವು ಮತ ಪಡೆಯೋಕೆ ಆಗಲ್ಲ ಎಂದು ಸ್ಟಾರ್ ಗಳನ್ನು ಪ್ರಚಾರಕ್ಕೆ ಕರೆಸುತ್ತಿದ್ದಾರೆ. ಸ್ವಾರ್ ಗಳನ್ನು ಹಣಕ್ಕಾಗಿ ಎಲ್ಲಾರ ಪರ ಪ್ರಚಾರ ಮಾಡ್ತಾರೆ. ಆದ್ರೆ ಜನರು ಮಾತ್ರ ಸ್ಟಾರ್ ಗಳು ಪ್ರಚಾರ ಮಾಡೋದನ್ನು ನೋಡಿ ಮತಹಾಕಲ್ಲ ಎಂದು ಸಿಎಂ ಗೆ ಟಾಂಗ್ ನೀಡಿದ್ರು. ಏನೇ ಆಗಲಿ ಈ ಸಲ ಕಪ್ ನಮ್ದೆ ಅಂತಾ ಹೆಚ್.ಡಿ.ಕೆ ವಿಶ್ವಾಸ ವ್ಯಕ್ತಪಡಿಸಿದ್ರು.

Top