‘ಈ ನಾಡು ಕಂಡ ಅಪರೂಪದ ಸಂತರಾಗಿದ್ದಾರೆ’ ಡಾ. ಆರ್. ಮರೇಗೌಡ

Koppal ತಮ್ಮ ಶಾಂತಚಿತ್ತದಲೇ ಸರ್ವ ಭಕ್ತರ ಹೃದಯದಲ್ಲಿ ಅಚ್ಚಳಿಯದೆ ಉಳಿದವರು ಲಿಂ. ಶ್ರೀ ಶಿವಶಾಂತವೀರ ಶಿವಯೋಗಿಗಳವರು ಈ ನಾಡು ಕಂಡ ಅಪರುಪದ ಸಂತರಾಗಿದ್ದಾರೆ. ಅವರ ಆದರ್ಶ, ಪಾಂಡಿತ್ಯ ಭಕ್ತರ ಮೇಲಿನ ಪ್ರೀತಿ ಮತ್ತು ನಾಡಿನ ಮೇಲಿನ ಕಾಳಜಿ ಸದಾ ಸ್ಮರಣೀಯವಾಗಿದೆ ಎಂದು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟನ ಕಾರ್ಯದಶಿಗಳಾದ ಡಾ. ಆರ್. ಮರೇಗೌಡ ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂಸ್ಥಾನ ಶ್ರೀ ಗವಿಮಠದ ೧೭ನೇ ಪಿಠಾಧಿಪತಿಗಳಾದ ಪರಮ ಪೂಜ್ಯ ಲಿಂ. ಶಿವಶಾಂತ ಶಿವಯೋಗಿಗಳವರ ೧೭ನೇ ಪುಣ್ಯಾರಾಧನೆ ಕಾರ್ಯಕ್ಮವನ್ನು ಉದ್ಧೇಶಿಸಿ ಮಾತನಾಡಿದ ಅವರು ಸಂಸ್ಥಾನ ಶ್ರೀಗವಿಮಠದ ಪರಂಪರೆ ಬಹಳ ಹಿರಿದಾದದು ಮತ್ತು ಈ ನಾಡಿಗೆ ಶ್ರೀ ಮಠವು ನೀಡಿದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಲಿಂ. ಶಿವಶಾಂತವೀರ ಶಿವಯೋಗಿಗಳವರು ಶ್ರೀಮಠದ ಶ್ರಯೋಭಿವೃದ್ಧಿಗೆ ಈ ನಾಡಿಗೆ ತಮ್ಮ ಬದುಕನ್ನು ಅರ್ಪಿಸಿದ ಸಂತರಾಗಿದ್ದಾರೆ. ಶಿಕ್ಷಣ ಪ್ರೇಮಿಗಳಾದ ಅವರು ಅನ್ನ, ಆಧ್ಯಾತ್ಮ, ಅರಿವು ಜೊತೆಗೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾಪಿಸಿ ಆರೋಗ್ಯ ದಾಸೋಹಗೈದ ಪುಣ್ಯಜೀವಿಗಳಾಗಿದ್ದಾರೆ ಆ ಮಹಾತ್ಮರನ್ನು ಸ್ಮರಿಸುವದು ನಮ್ಮಲ್ಲರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ ಎಂ. ಎಸ್ ದಾದ್ಮಿ ಅವರು ಮಾತನಾಡಿ ಪೂಜ್ಯ ಶಿವಶಾಂತವೀರ ಶಿವಯೋಗಿಗಳವರ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸೇವೆ ಅವಿಸ್ಮರಣೀಯ. ಶೈಕ್ಷಣಿಕವಾಗಿ ಬಳಲುತ್ತಿದ್ದ ಈ ನಾಡಿಗೆ ಶಿಕ್ಷಣವೊಂದೆ ಆಸರೆ ಎಂದು ಭಾವಿಸಿ ಶ್ರೀಮಠದ ಶೈಕ್ಷಣಿಕ ಸಂಸ್ಥೆಗಳನ್ನು ಬೆಳಸುವುದಕ್ಕೆ ತುಂಬಾ ಶ್ರಮಿಸಿದವರು. ಶ್ರೀಮಠ ಮತ್ತು ಶ್ರೀಮಠದ ಶೈಕ್ಷಣಿಕ ಸಂಸ್ಥೆಗಳಿಗೆ ಅಧಾರ ಸ್ತಂಭವಾಗಿ ನಿಂತ ಮಹನಿಯರಾಗಿದ್ದಾರೆ. ಅವರ ಅವರ ಕ್ರೀಯಾಶೀಲತೆಯ ಫಲದಿಂದ ಶೈಕ್ಷಣಿಕ ಸಂಸ್ಥೆಗಳು ಇಂದು ಬೆಳೆದು ನಿಂತಿವೆ. ಅವರ ಆದರ್ಶ ಬದುಕು, ಚಿಂತನೆ, ತತ್ವಾದರ್ಶಗಳು ಇಂತಹ ಸ್ಮರಣೆ ಮೂಲಕ ನಮಗೆ ಸದಾ ಪ್ರೇರಣೆಯಾಲಿಎಂದು ಹೇಳಿದರು.

ಪದವಿ ಪೂರ್ವ ಕಾಲೇಜಿನ ಸಂಯೋಜಕ ಪರಿಕ್ಷೀತರಾಜ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಬಿ ಹೀರೇಮಠ, ಜಿ. ಎನ್.ಪಾಟೀಲ್, ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಜೆ ಎಸ್ ಪಾಟೀಲ್, ಡಾ. ಬಸವರಾಜ ಪೂಜಾರ, ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ, ಶಫಿ ಸರ್ದಾರ, ಶರಣಬಸಪ್ಪ ಬಿಳಿಯಲೆ, ಡಾ. ನಾಗರಾಜ ದಂಡೋತಿ, ಡಾ. ಚನ್ನಬಸವ, ಮಂಜುನಾಥ ಗಾಳಿ, ಮಹೇಶ ಬಿರಾದಾರ, ವಿನೋದ ಸಿ.ಎಮ್, ರಾಜು ಹೊಸಮನಿ, ಅರುಣಕುಮಾgವೆಂಕಟೇಶ ನಾಯಕ, ಕಾಲೇಜಿನ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Please follow and like us:
error