ಕೊಪ್ಪಳ : ಸರ್ಕಾರ ಸೋಮವಾರದಿಂದ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿಸಿದೆ. ಈ ಹಿನ್ನೆಲೆಯಲ್ಲಿ ಕನಕಗಿರಿ ಹಾಗೂ ಅಂಜನಾದ್ರಿ ಬೆಟ್ಟ ದಲ್ಲಿ ಸ್ವಚ್ಛತೆಯ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ ಆದರೆ ಹುಲಿಗೆಮ್ಮದೇವಿ ದೇವಸ್ಥಾನದವರು ಈಗಿರುವ ಬಂದ್ ಸ್ಥಿತಿ ಮುಂದುವ ರಿಯಲಿ ಎಂದು ಹೇಳಿದ್ದಾರೆ ಹುಲಿಗೆಮ್ಮದೇವಿ ದೇವಿ ದರ್ಶನಕ್ಕೆ ಅಕ್ಕಪಕ್ಕದ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅದರಲ್ಲೂ
ಮಹಾರಾಷ್ಟ್ರದಿಂದ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚು.

ಕರೊನಾ ಹಬ್ಬದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇಡೀ ಗ್ರಾಮದವರೆಲ್ಲರೂ ಸೇರಿ ಹುಲಿಗೆಮ್ಮದೇವಿ ದೇವಸ್ಥಾನವನ್ನು ಇನ್ನೂ ಕನಿಷ್ಠ ಒಂದು ತಿಂಗಳ ಮಟ್ಟಿಗಾದರೂ ಬಂದ್ ಮಾಡಬೇಕು ಯಥಾ ಸ್ಥಿತಿ ಮುಂದುವರಿಸಬೇಕು ಎಂದು ನಿರ್ಧರಿಸಿದ್ದಾರೆ
ಕೊಪ್ಪಳ ಜಿಲ್ಲೆ , ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವು ಅಧಿಸೂಚಿತ ” ಎ ” ವರ್ಗದ ದೇವಸ್ಥಾನವಾಗಿದ್ದು , ಈ ದೇವಸ್ಥಾನಕ್ಕೆ ಕರ್ನಾಟಕದ್ಯಾದಂತ ಹಾಗೂ ಹೊರ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು , ಅದರಲ್ಲಿಯೂ ವಾರ್ಷಿಕ 2020 ರ ಜಾತ್ರೆಯ ತರುವಾಯ ಜೂನ್ ತಿಂಗಳಿನ ಅಂತ್ಯದವರೆಗೆ ಹರಕೆ ತೀರಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಾಲಯಕ್ಕೆ ಬಂದು ವಾಸ್ತವ್ಯ ಹೂಡಲಿದ್ದು , ಬರುವ ಭಕ್ತರನ್ನು ನಿಯಂತ್ರಿಸಲು ಸಾಧ್ಯವಾಗದ ಪ್ರಯುಕ್ತ ದೇವಸ್ಥಾನದ ಆಡಳಿತ ಸಮಿತಿ ಅಭಿಪ್ರಾಯ ಹಾಗೂ ಗ್ರಾಮ ಪಂಚಾಯಿತಿ ಹುಲಿಗಿಯ ಠರಾವಿನ ಪ್ರಕಾರ ಕೋವಿಡ್ -19 ಸಾಂಕ್ರಮಿಕ ರೋಗ ತಡೆಗಟ್ಟುವ ಹಿನ್ನಲೆಯಲ್ಲಿ , ದೇವಾಲಯಕ್ಕೆ ಬರುವ ಭಕ್ತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವನ್ನು ದಿನಾಂಕ : 30-06-2020ರ ವರೆಗೆ ಭಕ್ತಾಧಿಗಳಿಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ