ಈಶಾನ್ಯ ಪದವೀಧರ ಕ್ಷೇತ್ರ ಒಟ್ಟು ೭೦.೧೩% ಮತದಾನ

ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಮತದಾನ . ಹೈ ಕ ಭಾಗದ ಆರು ಜಿಲ್ಲೆಗಳು ಹಾಗೂ ಹರಪನಹಳ್ಳಿ ಸೇರಿದಂತೆ.

ಬೀದರ್ : 67.50 %
ಕಲಬುರಗಿ : 57.64 %
ರಾಯಚೂರು : 67/19 %
ಯಾದಗಿರಿ : 72.46 %
ಬಳ್ಳಾರಿ : 73.70 %
ಕೊಪ್ಪಳ : 74.77 %
ಹರಪನಹಳ್ಳಿ : 77.56 %

ಒಟ್ಟು ಮತದಾನ : 70.13 %

ಕಲಬುರಗಿ ಪ್ರಾದೇಶಿಕ ಆಯುಕ್ತ ಪಂಕಜ್‌ಕುಮಾರ ಪಾಂಡೆ ಮಾಹಿತಿ. ಜೂನ್ 12 ರಂದು ಗುಲ್ಬರ್ಗಾ ವಿವಿ ವಿವಿಧ ವಿಭಾಗಗಳಲ್ಲಿ ಮತ ಎಣಿಕೆ. ಬಿಜೆಪಿಯಿಂದ ಕೆ.ಬಿ ಶ್ರೀನಿವಾಸ್, ಕಾಂಗ್ರೆಸ್‌ನಿಂದ ಚಂದ್ರಶೇಖರ್ ಪಾಟೀಲ್ ಹುಮನಾಬಾದ್, ಜೆಡಿಎಸ್‌ನಿಂದ ಪ್ರತಾಪ್‌ರೆಡ್ಡಿ, ಡಾ.ರಜಾಕ್ ಉಸ್ತಾದ್, ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸೇರಿದಂತೆ ಹತ್ತು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ. ವಿವಿ ಆವರಣದ ಸ್ಟ್ರಾಂಗ್ ರೂಂಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.