fbpx

ಈರಣ್ಣ ಬಡಿಗೇರ ಮೊಬೈಲ್ ಕ್ಯಾಮರಾ ಕಲಾವಿದನ ಅದ್ಭುತ ಫೋಟೋಗ್ರಾಫಿ

ಯಾವುದಾದರು ನಿಸರ್ಗದ ಸುಂದರ ಅದ್ಬುತ ಫೋಟೋ ನೋಡಿದರೆ ಯಾವ  ಕ್ಯಾಮರಾದಲ್ಲಿ ತೆಗೆದಿರಬಹುದು ಎನಿಸುತ್ತೆ…  ನಿಸರ್ಗದ ಸೌಂದರ್ಯ, ಪ್ರಾಣಿ ಪಕ್ಷಿಗಳ ಚಲವನಗಳ ದೃಶ್ಯಗಳನ್ನು  ಸೆರೆಹಿಡಿಯಲು  ಕ್ಯಾಮರಾಮನ್ ಗಳು ದುಬಾರಿ ಕ್ಯಾಮರಾಗಳನ್ನು ಬಳಸುತ್ತಾರೆ. ಲಕ್ಷಾಂತರ ರೂ ಖರ್ಚು ಮಾಡಿ ಅತ್ಯುತ್ತಮ ಕ್ಯಾಮಾರ ಬಳಕೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಖಾಸಗಿ  ವಾಹಿನಿ ಕ್ಯಾಮಾರಾಮೇನ್  ಮೋಬೈಲ್ ಬಳಸಿ ದೊಡ್ಡ ಮಟ್ಟದ ಕ್ಯಾಮಾರಗಳಿಗೆ ಕಡಿಮೆ ಇಲ್ಲ ಎನ್ನುವಂತೆ ಯಾವುದೇ ತಂತ್ರಜ್ಷಾನ ಬಳಸದೇ ಅದ್ಬುತ್ ಪೋಟೋಗಳನ್ನು ಸೆರೆ ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ. 

ಹಿಗೇ ಕಣ್ಣಿಗೆ ಮುದ ನೀಡುವ  ನಿಗರ್ಸದ ವಿಶೀಷ್ಠ ಛಾಯಚಿತ್ರಗಳು.. ಇನ್ನು ಸಾಮಾಜಿಕ ಕಳಕಳಿ ಮೂಡಿಸುವ ಪೊಟೋಗಳು.. ಪದೇ ಪದೇ ನೋಡಬೇಕನ್ನವಷ್ಟು ಸೂಪರ್ ಆಗಿ ತೆಗೆದಿರೋ ಪೊಟೋಗಳು.. ಹೌದು ಇದೇಲ್ಲಾ ನೋಡ್ತಾ ಇದ್ರೆ ಯಾವುದೋ  ದೊಡ್ಡ ಕ್ಯಾಮರಾದಿಂದ ಖ್ಯಾತ ಪೊಟೋಗ್ರಾಪರ್ ತೆಗೆದಿರೋ ಪೊಟೋ ಅಂದುಕೊಳ್ತೀವಿ. ಆದ್ರೆ ಅದುಯಾವುದೋ ಅಲ್ಲ. ಬದಲಾಗಿ ಇವೇಲ್ಲಾ ಪೋಟೋಗಳನ್ನು ಯಾವುದೇ ತಂತ್ರಜ್ಷಾನ ಬಳಸದೇ ಮೋಬೈಲ್ ನಲ್ಲಿ ಸೆರೆಹಿಡಿಯಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡ್ತೀರೋ ಈರಣ್ಣ ಬಡಿಗೇರ್ ಎನ್ನುವ ಯುವಕ ಈ ಎಲ್ಲಾ ಚಿತ್ರಗಳಿಗೆ ಸೂತ್ರದಾರ. ಮೊದಮೊದಲು ತನ್ನ ಕೆಲಸದೊಂದಿಗೆ ಬಿಡುವಿನ ವೇಳೆಯಲ್ಲಿ ಈರಣ್ಣ ಬಡಿಗೇರ, ಮೋಬೈಲ್ ನಲ್ಲಿ ಪೊಟೋಗಳನ್ನು ತೆಗೆದು ಫೇಸ್ಬುಕ್ ನಲ್ಲಿ ಅಪ್ಲೌಡ್ ಮಾಡ್ತಿದ್ದ. ಇದ್ರಿಂದ ಇನ್ನು ಅದೇಷ್ಟೋ ಸಹದ್ಯೋಗಿಗಳು, ಸ್ನೇಹಿತರು ಇದೇಲ್ಲಾ ಶುದ್ದ ಸುಳ್ಳು. ಈರಣ್ಣ ನಮಗೆ ಸುಳ್ಳು ಹೇಳ್ತಿದ್ದಾನೆ ಅಂದುಕೊಂಡಿದ್ರು. ಆದ್ರೆ ಈ ರೀತಿ ಪ್ರಶ್ನೆ ಮಾಡಿದ ಸ್ನೇಹಿತರಿಗೆ ಸ್ವತಃ ತಾನೇ ಅವರ ಮುಂದೆ ನಿಂತು ಯಾವುದೇ ಆ್ಯಪ್ ಬಳಸದೇ ಪೊಟೋ ತೆಗೆದು ತೋರಿಸಿದ ಆವಾಗ ಎಲ್ಲಾರಿಗೂ ಈರಣ್ಣನ ಬಗ್ಗೆ ನಂಬಿಕೆ ಹಾಗೂ ಆಶ್ವರ್ಯ ಬಂತು. ಇದ್ರೀಂದ ಪ್ರತಿನಿತ್ಯನೂ ಈರಣ್ಣ ಬಡಿಗೇರ  ನಾನು ಏನಾದರೂ ಸಾಧಿಸಬೇಕು ಅಂತ ಕೆಲಸದ ಜೊತೆಗೆ ಮೋಬೈಲ್ ಪೊಟೋ ತೆಗೆಯೋ ಹವ್ಯಾಸ ಅಳವಡಿಸಿಕೊಂಡಿದ್ದಾರೆ.

ಈರಣ್ಣ ಬಡಿಗೇರ ತನ್ನ ಬಳಿ ಇರೋ ಕೆಲವ 15 ಸಾವಿರ ರೂಪಾಯಿನ ಮೋಬೈನಲ್ಲಿ ಇವಿಷ್ಟು ಪೊಟೊಗಳನ್ನು ಸೆರೆಹಿಡಿದ್ದಾನೆ. ಈರಣ್ಣ ಬಡಿಗೇರ ಸೆರೆಹಿಡಿದ ಪೊಟೋಗಳು ಫೇಸಬುಕ್ಗೆ ಹಾಕಿದ ತಕ್ಷಣ ನೂರಾರು ಜನರು ಷೇರ್ ಮಾಡ್ತಾರೆ. ಈ ಪೊಟೋಗಳನ್ನು ನೋಡಿದ ಅದೇಷ್ಟೋ ಪೊಟೋಗ್ರಾಪರ್ಗಳು ನಿವು ಪೊಟೋ ತೆಗೆಯುವ ಕ್ಯಾಮರಾ ಯಾವುದು ನಮಗೂ ಒಂದು ಕೊಡಿಸಿ ಅಂತ ಕೇಳಿದ್ದುಂಟು. ಅಲ್ಲದೆ ಈರಣ್ಣ ಬಡಿಗೇರ ಕೇವಲ ತನ್ನ ಹವ್ಯಾಸದ ಸಲುವಾಗಿ ಈ ಪೋಟೋಗಳನ್ನು ತೆಗೆಯುತ್ತಿಲ್ಲ. ಕೊಪ್ಪಳ ಜಿಲ್ಲೆಯ ಗ್ರಾಮಾಂತರ ಪ್ರದೇಶದಿಂದ ಹಿಡಿದು, ನಗರ ಪ್ರದೇಶದಲ್ಲಿರುವ ಸಮಸ್ಯೆಗಳು, ಪ್ರಾಣಿ ಪಕ್ಷಿಗಳು ಚಲವಲನ ಸೇರಿದಂತೆ ಪರಿಸರ ಕಾಳಜಿ ಕುರಿತು ಪೊಟೋ ತೆಗದು ಸಾರ್ವಜನಿಕರಲ್ಲಿ ಅರಿವು ಮೂಡಿಸ್ತಾ ಇದ್ದಾನೆ. ಈತನ ಕಾರ್ಯಕ್ಕೆ ಸ್ವತಃ ಛಾಯಗ್ರಾಹಕರೇ ಶಹಬ್ಬಾಸ್ ಎಂದಿದ್ದಾರೆ.

ಒಂದು ಹನಿ ನೀರಿನಲ್ಲಿ ಇಡೀ ಕಟ್ಟಡ, ಸೂರ್ಯೋದಯ. ರಾಷ್ಟ್ರಧ್ವಜ ಪ್ರತಿಬಿಂಬಿಸೋ ಹಾಗೇ ಪೊಟೋ, ನೋಣ, ಇರುವೆ, ಕ್ರಿಮಿಕಿಟಗಳ ಜೀವನಶೈಲಿ. ಗವಿಮಠದ ವಿದ್ಯುತ್ ಆಲಂಕಾರ. ಮೀನುಗಾರರ ವೃತ್ತಿ, ಸೇರಿದಂತೆ ಹತ್ತು ಹಲವಾರು ಸೌಂದರ್ಯ ತಾಣಗಳ ಪೊಟೋಗಳನ್ನು ಅದ್ಬುತ ಹಾಗೂ ಆಕರ್ಶಕವಾಗಿ ಮೂಡಿಬರುವಂತೆ ಪೊಟೊಗಳನ್ನು ಮೋಬೈಲ್ ಸೆರೆಹಿಡಿದಿದ್ದಾನೆ ಈರಣ್ಣ ಬಡಿಗೇರ. ಒಟ್ನಲ್ಲಿ ಈರಣ್ಣ ಬಡಿಗೇರ ಮೊಬೈಲ್ನನಲ್ಲಿ ಆಕರ್ಶಕ ಪೊಟೋಗಳನ್ನು ತೆಗೆದು ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಇನ್ನು ಇಷ್ಟೇಲ್ಲಾ ಅತ್ಯದ್ಬುತ ಪೊಟೋ ತೆಗೆದು ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತಿರೋ ಈರಣ್ಣನನ್ನು ಸರ್ಕಾರ ಗುರುತಿಸಿ ಇಂತಹ ಕಲಾವಿದರಿಗೆ ಪೊತ್ಸಾಹ ನೀಡಬೇಕಾಗಿದೆ.

Please follow and like us:
error
error: Content is protected !!