ಈದ್ ಮಿಲಾದ್ ಸಂಭ್ರಮ

ಕೊಪ್ಪಳ ಜಿಲ್ಲೆಯಾದ್ಯಂತ ಜಷ್ನೆ ಎ ಮಿಲಾದುನ್ನಬಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು‌. ಪ್ರವಾದಿ ಮುಹಮ್ಮದ್ ರ ಜನ್ಮದಿನಾಚರ ಣೆಯನ್ನು ಮುಸ್ಲಂ ಬಾಂಧವರು ಸಂಭ್ರಮದಿಂದ ಆಚರಿಸಿದರು. ಗಂಗಾವತಿ,ಕೊಪ್ಪಳ ಸೇರಿದಂತೆ ವಿವಿದೆಡೆ ಸಂಭ್ರಮದ ಮೆರವಣಿಗೆ ನಡೆಯಿತು.. ಮೆರವಣ ಿಗೆಯಲ್ಲಿ ಮುಸ್ಲಿಂ ಬಾಂಧವರು, ವಿವಿಧ ಗಣ್ಯರು ಭಾಗವಹಿಸಿದ್ದರು. ಗಂಗಾವತಿಯಲ್ಲಿ ಎರಡು ವರ್ಷಗಳ ನಂತರ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಈದ್ ಮೀಲಾದ್ ಮೆರವಣಿಗೆಯಲ್ಲಿ ಬಂದಂತಹ ಮುಸ್ಲಿಂ ರಿಗೆ ಹಿಂದೂ ಸಂಘಟನೆಗಳವರು ನೀರು, ಜ್ಯೂಸ್, ಫಲಹಾರದ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು. ಅಲ್ಲದೇ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

Please follow and like us:
error