ಈಜುಕೊಳ ,ಒಳಾಂಗಣ ಕ್ರೀಡಾಂಗಣ ವೀಕ್ಷಣೆ ಮಾಡಿದ ಸಂಸದ ಸಂಗಣ್ಣ ಕರಡಿ

koppal-mp-karadi-sanganna-visit-public-ground

ಕೊಪ್ಪಳ: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಈಜುಕೊಳ ಸೇರಿದಂತೆ ಜಿಲ್ಲಾಕ್ರೀಡಾಂಗಣಕ್ಕೆ ಅನುದಾನ ನೀಡಿದ್ದು, ಸಧ್ಯ ಈಜುಕೊಳ ಉದ್ಘಾಟನೆಗೊಂಡಿದ್ದು, ಕೊಳಾಯಿ ಸ್ವಚ್ಚತೆ ಸೇರಿದಂತೆ ಕೆಲವು ಪೂರಕ ಸಾಮಗ್ರೀಗಳ ಕೊರತೆಯಿದ್ದು ಅವುಗಳನ್ನೇಲ್ಲ ಶೀಘ್ರವೆ ಕ್ರೀಡಾಪಟ್ಟುಗಳಿಗೆ ದೊರೆಯುವಂತಾಗಬೇಕೆಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಂಸದ ಸಂಗಣ್ಣ ಕರಡಿ ಸೂಚಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಈಜುಕೊಳ ಹಾಗೂ ಒಳಾಂಗಣ ಕ್ರೀಡಾಂಗಣ ಪರಿಶೀಲನೆ ನಡೆಸಿ ಬುಧವಾರ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರಕಾರದ ಅನುದಾನದಲ್ಲಿ ಈಜುಕೊಳಕ್ಕೆ ಸುಮಾರು ೨.೩ ಕೋಟಿ ರೂ. ಅನುದಾನ ನೀಡಲಾಗಿತ್ತು. ನಾನಾ ಯೋಜನೆಗಳಡಿ ಒಟ್ಟು ಕ್ರೀಡಾಂಗಣಕ್ಕೆ ೩.೨೯ ಕೋಟಿ ರೂ. ಮಂಜೂರು ಮಾಡಲಾಗಿತ್ತು. ಜಿಂದಾಲ ಕಂಪನಿಯಿಂದ ಸಿಟ್ಟಿಂಗ್ ಗ್ಯಾಲರಿಗೆ ೧.೪೯ ಲಕ್ಷ ರೂ.ಅನುದಾನ ನೀಡಲಾಗಿದೆ. ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಪ್ಲೇ ಗ್ರೌಂಡ್‌ಗೆ ೭೫ ಲಕ್ಷ ರೂ. ನೀಡಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕೆ ಸಂಸದ ನಿಧಿಯಿಂದ ೬ ಲಕ್ಷ ರೂ. ನೀಡಲಾಗಿತ್ತು. ಶೇಟಲ್ ಬ್ಯಾಟ್‌ಮಿಟನ್ ಕ್ರೀಡಾಂಗಣ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ಈ ಭಾಗದ ಕ್ರೀಡಾಪಟ್ಟುಗಳಿಗೆ ಜಿಲ್ಲಾ ಕ್ರೀಡಾಂಗಣ ಪ್ರಾಥಮಿಕ ವೇದಿಕೆಯಾಗಿದ್ದು, ಜಿಲ್ಲಾ, ರಾಜ್ಯ ಮಟ್ಟದ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಸಿದ್ದತೆಗೊಳ್ಳಲು ಕ್ರೀಡಾಂಗಣ ಉತ್ತಮವಾಗಿದೆ. ಹಲವು ದಿನಗಳಿಂದ ಜಿಲ್ಲೆಯಲ್ಲಿ ಈಜುಕೊಳದ ಬೇಡಿಕೆ ಇತ್ತು. ನಮ್ಮ ಅವಧಿಯಲ್ಲಿಯೇ ಅನುದಾನ ನೀಡುವ ಮೂಲಕ ಈಜುಕೊಳ ನಿರ್ಮಾಣಕ್ಕೆ ಮುಂದಾಗಿದ್ದೇವು. ಸದ್ಯ ಕ್ರೀಡಾಪಟುಗಳ ಕೈ ಸೇರಿದೆ. ಇದು ಸಂತಸ ತಂದಿದೆ ಎಂದರು.

Please follow and like us:
error

Related posts

Leave a Comment