ಈಜಲು ತೆರಳಿದ್ದ ಬಾಲಕರು ನೀರು ಪಾಲು.

ಕೊಪ್ಪಳ : ಈಜಲು ತೆರಳಿದ್ದ ಬಾಲಕರು ನೀರು ಪಾಲಾದ ದರ್ಘಟನೆ ಕೊಪ್ಪದಲ್ಲಿ ನಡೆದಿದೆ

ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಲ್ಲಿ ಘಟನೆ ನಡೆದಿದ್ದು ಬಸವರಾಜ್ ಈರಪ್ಪ ಗುಡೇರ ೧೨ ವರ್ಷ, ನಾಗರಾಜ ಸಂಗಪ್ಪ ಕುಳ್ಳಳ್ಳಿ ೧೪ ವರ್ಷ ಈಜಲು ಹೋಗಿದ್ದಾಗ ಮುಳುಗಿ ಸಾವನ್ನಪ್ಪಿದ ಬಾಲಕರು.

ಹಳ್ಳದಲ್ಲಿ ಈಜಲು ತೆರಳಿದ್ದ ಬಾಲಕರು ಮರಳಿಗಾಗಿ ಅಗೆದಿದ್ದ ಸ್ಥಳದಲ್ಲಿ ಈಜಲು ಹೋಗಿದ್ದಾರೆ. ೧೫ ಅಡಿಗೂ ಹೆಚ್ಚು ಆಳದ ಕಂದಕಗಳು ಈ ಭಾಗದಲ್ಲಿರುವುದು ಮಕ್ಕಳ ಗಮನಕ್ಕೆ ಬಂದಿಲ್ಲ. ಹೀಗಾಗಿ ಮಕ್ಕಳು ಮುಳುಗಿ ಸಾವನ್ನಪ್ಪಿವೆ. ಅಕ್ರಮವಾಗಿ ಈ ಭಾಗದಲ್ಲಿ ಮರಳು ತೆಗೆಯಲಾಗುತ್ತಿದ್ದು ಹಳ್ಳದಲ್ಲಿ ನೂರಾರು ಅಪಾಯಕಾರಿ ಕಂದಕಗಳು ಸೃಷ್ಠಿಯಾಗಿವೆ. ಇಂತಹ ಕಂದಕದಿಂದಲೇ ಮಕ್ಕಳು ಸಾವನ್ನಪ್ಪಿದ್ದಾರೆ.

ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Please follow and like us:
error