ಇಸ್ರೇಲ್ ಮಾದರಿ ಬೆಳೆ ಬೆಳೆಯಲು ಮುಂದಾದ ಕೊಪ್ಪಳ ತೋಟಗಾರಿಕೆ ಇಲಾಖೆ

ಕೊಪ್ಪಳ ಜ. ): ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ಭಾಗದ ಕೊಪ್ಪಳ ಜಿಲ್ಲೆಯು ಈಗ ಇಸ್ರೇಲ್ ಮಾದರಿ ಬೆಳೆ ಬೆಳೆಯುವಲ್ಲಿ ಮುಂದಾಗಿದೆ. ಕೊಪ್ಪಳ ತೋಟಗಾರಿಕೆ ಇಲಾಖೆಯು ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಸರ್ವೆ ನಂಬರ್ 31/1 ರಲ್ಲಿ 58 ಎಕರೆ ವಿಸ್ತೀರ್ಣದ ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ತಂತ್ರಜಾÐನ ಅಳವಡಿಸಿಕೊಂಡು ಇಸ್ರೇಲ್ ಮಾದರಿ ಬೆಳೆ ಬೆಳೆಯಲು ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಪದೇ ಪದೇ ಬೀಕರ ಬರಗಾಲ ಆವರಿಸುವುದರಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದ ಪರಿಣಾಮ ಕೃಷಿ ಮತ್ತು ತೋಟಗಾರಿಕೆ ಕಷ್ಟಕರವಾಗುತ್ತಿರುವುದರಿಂದ ಸ್ವತಃ ತೋಟಗಾರಿಕೆ ಇಲಾಖೆಯೇ ಕೃಷಿ ಮಾಡಲು ಪಣ ತೊಟ್ಟು ನಿಂತಿದೆ. ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆದು, ಇಳುವರಿ ಮತ್ತು ಆದಾಯವನ್ನು ದ್ವೀಗುಣಗೊಳಿಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಇಸ್ರೇಲ್ ಮಾದರಿ ತಂತ್ರಜಾÐನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಇಸ್ರೇಲ್ ಮಾದರಿ ತಂತ್ರಜಾÐನವನ್ನು ಅಳವಡಿಸಿಕೊಂಡು ಬೆಳೆ ಬೆಳೆಯುವಲ್ಲಿ ತೋಟಗಾರಿಕೆ ಇಲಾಖೆ ಮುಂದಾಗಿದ್ದು, ಈಗ ಕರ್ನಾಟಕ ರಾಜ್ಯದಲ್ಲಿ ಇಸ್ರೋ ಮಾದರಿಯ ಬೆಳೆ ಬೆಳೆಯುವಲ್ಲಿ ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ಮೊದಲನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಏನೂ ಬೆಳೆಯದ ಸವಳು, ಭಂಜರು ಭೂಮಿಯಲ್ಲಿ ಬೇರೆ ಕಡೆಯಿಂದ ಫಲವತ್ತಾದ ಮಣ್ಣು ತರಿಸಿ ಬೆಡ್ ಮಾಡಿ ಅದರಲ್ಲಿ ತರಾವರಿ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಪಂಪ್ ಹೌಸ್, ಪಾಲಿಹೌಸ್, ಪಾಲಿಟನಲ್, ನೆರಳು ಪರದೆ ಮೆನೆ, ಸ್ವಯಂಚಾಲಿತ ಹನಿ ನೀರಾವರಿ ಮತ್ತು ರಸಾವರಿ ವ್ಯವಸ್ಥೆ, ದಾಸ್ತಾನು ಕೋಠಡಿ, ಕೊಳವೆಭಾವಿ, ಸೋಲಾರ ಪಂಪ್ ಸೆಟ್, ಟ್ರ್ಯಾಕ್ಟರ್ ಹಾಗೂ ಉಳುಮೆ ಸಲಕರಣೆಯಂತಹ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಳವಡಿಸಿಕೊಂಡು ಅಂಜೂರ(ಬಳ್ಳಾರಿ ರೆಡ್, ಕೃಷÐ ಬ್ರೌನ್,) ಪೇರಲ(ಲಕ್ನೋ-49), ದ್ರಾಕ್ಷಿ(ವಿವಿಧ ತಳಿ), ದಾಳಿಂಬೆ, ಗೊಡಂಬಿ, ಸೀತಾಫಲ(ಬಾಲನಗರ),ನೆರಳೆ(ದೂಪದಾಳ್), ಕರೂಂಡ, ಆಪಲ್ ಬಾರೆ, ತೆಂಗು, ಹುಣಸೆ, ಡ್ರ್ಯಾಗನ್ ಪುಟ್ಸ್, ಹಲಸು, ಪಪ್ಪಾಯಿ, ಬಾಳೆ, ತರಕಾರಿ, ಹೂವು ಮತ್ತು ಅಂತರ ಬೆಳೆಗಳನ್ನು ಕೇವಲ 3 ಇಂಚು ನೀರಿನಲ್ಲಿ 60 ಎಕರೆ ಭೂಮಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 60 ಎಕರೆಗೆ ನೀರು ಹರಿಸಲು ಸ್ವಯಂ ಚಾಲಿತ ಹನಿ ನೀರಾವರಿ ಮತ್ತು ರಸಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಹಾಗೂ ರಸಾವರಿ ಹನಿ ನೀರಾವರಿ ಮೂಲಕ ಸಸಿಗಳಿಗೆ ಲಘು ಪೋಷಕಾಂಶಗಳನ್ನು ನೀಡಲು ಮುಂದಾಗಿದ್ದಾರೆ.
ಕೇವಲ 10 ಗುಂಟೆಯಲ್ಲಿ 500 ಕಲರ್ ದೊಣ್ಣೆ ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಅದರ ಮೇಲೆ ಪಾಲಿ ಹೌಸ್ ಅಳವಡಿಸಲಾಗಿದ್ದು ಅದರ ಒಟು ಖರ್ಚು 8 ಲಕ್ಷ ರೂ. ಖರ್ಚಾಗಿದೆಯಂತೆ. ಈ ಕಲರ್ ದೊಣ್ಣೆ ಮೆಣಸಿನ ಕಾಯಿಗಳಿಗೆ ಹೊರ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಂಗಳೂರು, ಹುಬ್ಬಳ್ಳಿಗಳಿಂದ ವ್ಯಾಪರಸ್ಥರು ಬಂದು ಖರೀದಿಸಿ ಛತ್ತೀಸ್ ಘಡ, ಹರಿಯಾಣದಂತ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಈ ಮಾದರಿಯಲ್ಲಿ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾದರೆ, ವ್ಯಾಪರಸ್ಥರು ನಾವು ಇದ್ದಲ್ಲಿಗೇ ಬಂದು ಕರೀದಿಸುತ್ತಾರೆ, ಹಾಗೂ ಸಾಮಾನ್ಯ ವರ್ಗದ ರೈತರು ಈ ಮಾದರಿಯಲ್ಲಿ ಪಾಲಿಹೌಸ್ ಅಳವಡಿಸಿ ಬೆಳೆ ಬೆಳೆಯಲು ಪ್ರಾರಂಭಿಸಿದರೆ ಸರಕಾರದಿಂದ ಶೇ.50% ರಷ್ಟು ಸಬ್ಸಿಡಿ ನೀಡಲಾಗುವುದು, ಹಾಗೂ ಪ.ಜಾತಿ, ಪ.ಪಂಗಡದ ರೈತರಿಗೆ ಶೇ.90% ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರು ತೋಟಗಾರಿಕೆ ಇಲಾಕೆ ಇಸ್ರೋ ಮಾದರಿಯಲ್ಲಿ ಬೆಳೆ ಬೆಳೆಗಳನ್ನು ವಿಕ್ಷಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಯಶೋಗಾಥೆಗೆ ತೆರಳಿದಾಗ ಅವರು ಮಾಹಿತಿ ನೀಡಿದರು.
ಪಾಲಿಹೌಸ್ ಮಹತ್ವ: 10 ಎಕರೆ ಜಮೀನಿನಲ್ಲಿ ಬೆಳೆಯುವ ಬೇಳೆಯನ್ನು ಇಸ್ರೇಲ್ ಮಾದರಿ ಅಳವಡಿಸಿಕೊಂಡರೆ ಕೇವಲ 10 ಗುಂಟೆಯಲ್ಲಿ ಬೆಳೆಯಬಹುದು, ಪಾಲಿ ಹೌಸ್ ಅಳವಡಿಸುವುದರಿಂದ ಸಸಿಗಳಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ, ಕಸ, ಕಡ್ಡಿ, ಹಾಗೂ ಕೀಟಗಳ ತೊಂದರೆಯೂ ಇರುವುದಿಲ್ಲ, ಮತ್ತು ನೆಲವನ್ನು ತಂಪಾಗಿಡುತ್ತದೆ, ಇದರಿಂದ ಬೆಳೆ ಫಲವತ್ತಾಗಿ ಬರುತ್ತದೆ. ಇಳುವರಿ ಉತ್ತಮ ರೀತಿಯದ್ದಾಗಿರುತ್ತದೆ. ಪಾಲಿ ಹೌಸ್ ಇಲ್ಲದೆ ಬೆಳೆದ ಬೆಳೆಗಳಿಗೆ ಖಾಯಿಲೆಗಳು ಜಾಸ್ತಿ ಮತ್ತು ಬಿಸಿಲಿನ ತಾಪಕ್ಕೆ ಬೆಳೆ ಬಾಡಿ ಹೋಗುತ್ತವೆ, ನೀರು ಸಾಲುವುದಿಲ್ಲ, ಕೀಟಗಳ ತೊಂದರೆ ಅಧಿಕವಾಗಿರುತ್ತದೆ, ಕಸಕಡ್ಡಿ ಬೆಳೆಯುತ್ತದೆ ಇದರಿಂದ ಇಳುವರಿ ಕುಂಠಿತಗೊಳ್ಳುತ್ತದೆ ಆದ್ದರಿಂದ ರೈತರು ಇಸ್ರೇಲ್ ತಂತ್ರಜಾÐನ ಅಳವಡಿಸಿಕೊಂಡು ಬೆಳೆ ಬೆಳೆಯಲು ಮುಂದಾಗಬೇಕು ಎಂದು ಅವರು ಹೇಳಿದರು.
ಈ ವೇಳೆ ತೋಟಗಾರಿಕೆ ಸಹಾಯಕ ನಿರ್ದೇಶಕ ರುದ್ರಪ್ಪ ಬೀಡನಾಳ, ಸಹಾಯಕ ತೋಟಗಾರಿಕೆ ಅಧಿಕಾರಿ ಆಂಜನೇಯ ಹೆಚ್, ತೋಟಗಾರಿಕೆ ಸಹಾಯಕ ಶಿವರಾಜ್, ತೋಟಗಾರಿಕೆ ವಿಷಯ ತಜÐ ವಾಮನಮೂರ್ತಿ, ವಾರ್ತಾ ಇಲಾಖೆಯ ಎಂ. ಅವಿನಾಶ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.