ಇಸ್ಪೇಟ ಜೂಜಾಟ ದಾಳಿ : 30 ಜನರ ಬಂಧನ

ಕೊಪ್ಪಳ ನ್ಯೂಸ್ : ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬಳೊಟಗಿ ಗ್ರಾಮದ ಚಲುವಾದಿ ಓಣಿಯಲ್ಲಿರುವ ಸಮುದಾಯ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ 30 ಜನ ಆರೋಪಿತರು ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ. ಯಲಬುರ್ಗಾ ಠಾಣೆಯ ಪಿಎಸ್ಐ ವಿನಾಯಕ ನೇತೃತ್ವದವತಂಡ ದಾಳಿ ಮಾಡಿ, ಆರೋಪಿತರಿಂದ ರೂ 35,300/- ಗಳನ್ನು ವಶಪಡಿಸಿಕೊಂಡಿದ್ದಾರೆ. ಜೂಜಾಟದಲ್ಲಿ ತೊಡಗಿದ್ದ 30 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮದ್ಯ ಮಾರಾಟ ದಾಳಿ
ಕಾರಟಗಿ ಪೊಲೀಸ್ ಠಾಣೆ ಸಿದ್ದಾಪುರ ಗ್ರಾಮದ ಹಳ್ಳದ ಪೂಲ್ ಹತ್ತಿರ ಆರೋಪಿತನಾದ ಶ್ರೀನಿವಾಸ ತಂದೆ ಹನುಮಂತಪ್ಪ ಈಡಿಗೇರ ಸಾ: ಗಂಗಾವತಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾಗ ಎಂ. ಶಿವಕುಮಾರ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ರೂ. 6,798/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

Please follow and like us:
error