ಇನ್ನೆಷ್ಟು ಅಮಾಯಕ ಜೀವಗಳು ಮರಳು ಮಾಫಿಯಾಕ್ಕೆ ಬಲಿಯಾಗಬೇಕು ? 

ಕೊಪ್ಪಳ :  ಇನ್ನೆಷ್ಟು ಅಮಾಯಕ ಜೀವಗಳು ಈ ಮರಳು ಮಾಫಿಯಾಕ್ಕೆ ಬಲಿಯಾಗಬೇಕೋ ?  ತಿಂದು ತೇಗುತ್ತಿರುವ ಭ್ರಷ್ಟ ಅಧಿಕಾರಿಗಳಿಂದಾಗಿ ಅಕ್ರಮ ಮರಳು ದಂದೆ ಎಗ್ಗಿಲ್ಲದೇ ಸಾಗಿದೆ.  ಬಡ ಕುಟುಂಬದ ಮೂವರು ಪುಟ್ಟ ಮಕ್ಕಳ ಸಾವಿಗೆ ಇವರ ಅದಕ್ಷತೆ ನಿಷ್ಕಾಳಜಿಯೇ ಕಾರಣ.

 ಅಕ್ರಮ‌ ಮರಳು ಮಾಫಿಯಾ ಅಡ್ಡೆಯೊಂದು ಅಮಾಯಕ ಮೂವರ ಮಕ್ಕಳನ್ನ ಬಲಿ ಪಡೆದ ಧಾರುಣ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕನಕಗಿರಿ ತಾಲೂಕಿನ ನವಲಿ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ ಮಹಾರಾಷ್ಬಾ ರಾಜ್ಯದ ರಾಯಗಡ ಜಿಲ್ಲೆಯ ಅಲೆಮಾರಿ ಜನಾಂಗದ  ಕುಟುಂಬದ ಮೂವರು  ಮಕ್ಕಳು  ಮರಳು ದಿಬ್ಬ ಕುಸಿದು ಧಾರುಣ ಅಂತ್ಯ ಕಂಡಿದ್ದಾರೆ. ಈಕ್ಕಲೆ-ಮಾಯಾ ದಂಪತಿಯ 7 ವರ್ಷದ ಸೋನು, ಅರ್ಜುನ್- ಲತಾ ದಂಪತಿಯ 4 ವರ್ಷದ ಕವಿತಾ, 2 ವರ್ಷದ ಸವಿತ ಮೃತಪಟ್ಟಿದ್ದಾರೆ. ಕಳೆದ ಒಂದು ತಿಂಗಳಿಂದ ಗ್ರಾಮದ  ಹೊರವಲಯದಲ್ಲಿ ಶೆಡ್ ಹಾಕಿಕೊಂಡಿದ್ದ ಈ ಫ್ಯಾಮಿಲಿ ಕಟ್ಟಿಗೆ ಸುಟ್ಟು ಇದ್ದಲಿ ಮಾರಿ ಉಪಜೀವನ ನಡೆಸುತ್ತಿದ್ರು. ಇಂದು ಮಕ್ಕಳು ಆಟವಾಡುತ್ತ ಮರಳಿನ ದಿಬ್ಬದ ಹತ್ತಿರ ಆಡುತ್ತಿದ್ದಾರೆ.  ದೊಡ್ಡ ತಗ್ಗು‌ ತೆಗೆದು ಸಾವಿಗೆ ರಹದಾರಿ ಮಾಡಿದ್ದ ಸ್ಥಳಕ್ಕೆ ತೆರಳಿದ ಮಕ್ಕಳು. ಮಣ್ಣಿನ ದಿಬ್ಬ ಕುಸಿದು ಬಿದ್ದ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೆ ಸಾವನ್ನಪ್ಪಿವೇ. ಅದೃಷ್ಟವಶಾತ್ ಇನ್ನು ಮೂವರು ಮಕ್ಕಳ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಕನಕಗಿರಿ ತಹಶಿಲ್ದಾರರು ಮರಳು ಮಾಫಿಯಾ  ಸ್ಥಳಕ್ಕೆ ದಾಳಿ ಮಾಡಿದ್ರಂತೆ. ಅಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ರೆ ಈವತ್ತು ಈ ಮೂವರು ಮಕ್ಕಳ ಸಾವು ಸಂಭವಿಸುತ್ತಿದ್ದಿಲ್ಲವೆರನೋ. ರಾಜ್ಯ ಬಿಟ್ಟು ರಾಜ್ಯಕ್ಕೆ ಕೂಲಿ ಕೆಲಸಕ್ಕೆ ಬಂದು ಮುದ್ದಾದ ಮಕ್ಕಳ ಕಳೆದುಕೊಂಡ ಕುಟುಂಬದ ಕಣ್ಣೀರಿನ ಕೋಡಿ ಹರಿದಿದೆ. ಸ್ಥಳಕ್ಕೆ ಕನಕಗಿರಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Please follow and like us:
error