ಇದೊಂದು ಚುನಾವಣಾ ಗಿಮಿಕ್ ಬಜೆಟ್ – ವೈದ್ಯಕೀಯ ಸಚಿವ ಈ ತುಕಾರಾಂ

Koppal : ನಮ್ಮಲ್ಲಿ ಇರುವ ಮೆಡಿಕಲ್ ಕಾಲೇಜುಗಳಿಗೆ ಕಾಯಕಲ್ಪ ನೀಡಬೇಕಾಗಿದೆ, ಅಪ್ಡೇಟ್ ಮಾಡುವುದಕ್ಕೆ ಈಗ ಬೇಟಿ ಕೊಡ್ತಾ ಇದ್ದೇವೆ ಮೆಡಿಕಲ್ ಕಾಲೇಜ್ ಹೈ.ಕ. ದಲ್ಲಿ ಆಸ್ತಿಯಾಗಿ ಬಂದಿದೆ.. ಮುಂದಿನ ದಿನಗಳಲ್ಲಿ ಎಂಸಿಐ ಭೇಟಿ ನೀಡಲಿದೆ ಬೇಕಾಗಿರುವ ಮೂಲ ಸೌಕರ್ಯ ಕಲ್ಪಿಸುತ್ತೇವೆ ಎಲ್ಲವನ್ನೂ ಒಂದೇ ಸಲಕ್ಕೆ ಮಾಡಲು ಆಗುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಹೇಳಿದರು. ಅವರು ಇಂದು ಕೊಪ್ಪಳದ ಕಿಮ್ಸ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು.

ಸುದ್ದಿಗಾರರೊಂದಿಗೆ ಬಜೆಟ್ ಕುರಿತು ಮಾತನಾಡಿದ ಅವರು ಇಂದಿನ ಬಜೆಟ್ ಮೇಲ್ನೋಟಕ್ಕೆ ಕಾಣುತ್ತಿದೆ ಇದೊಂದು ಚುನಾವಣಾ ಗಿಮಿಕ್ ಬಜೆಟ್, ಮ್ಯಾನಿಪೆಸ್ಟೋ ದಲ್ಲಿ ಭರವಸೆ ಕೊಟ್ಟಂತೆ ಯಾವುದನ್ನೂ ಈಡೇರಿಸಿಲ್ಲ..

೧೫ ಲಕ್ಷ ಕೊಡ್ತೀವಿ ಅಂದಿದ್ರು ಇದುವರೆಗೂ ಕಂಡಿಲ್ಲ. , ೨ ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರು ಎಲ್ಲಿವೆ ? ಎಲ್ಲರ ಪರವಾಗಿ ಯುಪಿಎ ಸರಕಾರವಿತ್ತು, ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದರು..

ಜಂಟಿ ನಿಯೋಗ ಸಹ ಹೋಗಿದ್ವಿ.. ಪ್ರಧಾನ ಮಂತ್ರಿಗಳು ಏನೂ ಮಾಡಲಿಲ್ಲ.ಈಗ ರೈತರ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಜಾತಿ ಜಾತಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ..

ಮುಂದಿನ ದಿನಗಳಲ್ಲಿ ನಾವು ಜನಪರ ಬಜೆಟ್ ಕೊಡುತ್ತೇವೆ ಸರಕಾರ ೧೦೦% ಉಳಿಯುತ್ತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು….

Please follow and like us:
error