ಇಎಸ್‌ಐ ಆಸ್ಪತ್ರೆಗೆ ನಿವೇಶನ ಪರಿಶೀಲನೆ ನಡೆಸಿದ ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಇಎಸ್‌ಐ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ನಿವೇಶನದ ದಾಖಲಾತಿ ಸಿದ್ದಪಡಿಸುವಂತೆ ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಗಿಣಿಗೇರಾ ಗ್ರಾಮದ ಸಮೀಪ ಇಎಸ್‌ಐ ಆಸ್ಪತ್ರೆ ನಿರ್ಮಾಣದ ನಿವೇಶನವನ್ನು ಸೋಮವಾರ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಆಸ್ಪತ್ರೆ ನಿರ್ಮಾಣಕ್ಕೆ ೫ ಎಕರೆ ಭೂಮಿ ಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇದ್ದು, ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಇದರಿಂದ ಇಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡುವುದರಿಂದ ಜನರಿಗೆ ಅನುಕೂಲಕರ ಎಂದರು.esi-hospital-koppal
ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಈ ನಿವೇಶನ ಸೂಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ-೬೩ ಪಕ್ಕದಲ್ಲಿ ಇರುವುದರಿಂದ ಸಂಪರ್ಕವೂ ಸುಲಭ. ಆದ್ದರಿಂದ ಕೂಡಲೇ ಈ ಭೂಮಿಯ ದಾಖಲೆ ಸಿದ್ದಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಸದರಿ ಪ್ರದೇಶ ಸರಕಾರಿ ಜಾಗೆಯಾಗಿದ್ದು, ಒಟ್ಟು ೫ ಎಕರೆ ೨೦ ಗುಂಟೆ ಇದೆ. ಬಸಾಪುರ ಸೀಮಾ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಈ ಭೂಮಿಯ ಸರ್ವೇ ಕಾರ್ಯ ಪೂರ್ಣಗೊಂಡಿದ್ದು ಆಸ್ಪತ್ರೆ ನಿರ್ಮಾಣ ಬೇಕಾಗುವ ನಿವೇಶನ ದೊರೆಯುತ್ತದೆ ಎಂದರು.
ಗ್ರಾಮಲೆಕ್ಕಿಗ ಮೈನೂದಿನ್ ಸೇರಿದಂತೆ ಇತರರು ಇದ್ದರು.

Please follow and like us:
error

Related posts

Leave a Comment