ಇಂದು ಶಿಕ್ಷಣ ಅತೀ ಮುಖ್ಯವಾಗಿದೆ -ಪರಣ್ಣ ಮುನವಳ್ಳಿ

ಶಾಲೆಗಳಿಗೆ ಗ್ರಂಥಾಲಯ ಮತ್ತು ಕಲಿಕೋಪಕರಣಗಳು ಕಾರ್ಯಕ್ರಮ: ಹಾಗೂ ಗ್ರಾಮ ಪಂಚಾಯತ ವೆಂಕಟಗಿರಿ ಸಹಯೋಗದೊಂದಿಗೆ ಕುಡಿಯುವ ನೀರಿನ ಕೋಳವೆ ಭಾವಿ ಸಮರ್ಪಣ ಕಾರ್ಯಕ್ರಮ:

ಗಂಗಾವತಿ :  ಕಾರ್ಯಕ್ರಮಕ್ಕೆ  ಶಾಸಕರಾದ   ಪರಣ್ಣ ಮುನವಳ್ಳಿವರು ತಮ್ಮ ಅತಿಥಿ ಭಾಷಣದಲ್ಲಿ, ಇಂದು ಶಿಕ್ಷಣ ಅತೀ ಮುಖ್ಯವಾಗಿದೆ ಎಂದು ಹೇಳುತ್ತಾ. ದಿಲ್ಲಿಗಿಂತ ನಮ್ಮ ಹಳ್ಳಿ ಮೇಲು ಎಂದರು. ನಮ್ಮ ಹಳ್ಳಿಗಳಲ್ಲಿ ಸುಂದರವಾದ ವಾತಾವರಣದ ಜೊತೆ ಒಳ್ಳೆಯ ಶಿಕ್ಷಣವನ್ನು ಪಡೆದು, ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಕೆಲಸಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಕಪುಚಿನ್ ಕೃಷಿಕ್ ಸೇವಾ ಕೇಂದ್ರ ಸಹಯೋಗ ಚೈಲ್ಡ್ ಪಂಡ್ ಇಂಡಿಯಾ, ಗಂಗಾವತಿ ವೆಂಕಟಗಿರಿ ಹೋಬಳಿ ಮಟ್ಟದಲ್ಲಿ ಅಪಾರವಾದ ಶಿಕ್ಷಣಕ್ಕೆ ಕೊಡುಗೆ ಇದೆ ಎಂದು ಹೇಳಿದರು. ಈ ಕಾರ್ಯಕಮದ ಮುಖಾಂತರ ವೆಂಕಟಗಿರಿ ಶಾಲೆ ಹೊಸ ಬೊರವೆಲ್‌ಗೆ ಆರ್.ಓ.ಪ್ಲಾಂಟ್ ಮತ್ತು ಶಾಲೆಯ ಕಪೌಂಡ್‌ವನ್ನು ಶಾಸಕರ ಅನುಧಾನದಡಿ ಮಂಜೂರಮಾಡುವುದಾಗಿ ಹೇಳಿದರು.

ಕಾರ್ಯಕ್ರಮಕ್ಕೆ  ಬ.ಪಿ. ಚಂದ್ರಶೇಖರ, ಡಿ.ವ್ಯಾ. ಎಸ್.ಪಿ, ಗಂಗಾವತಿ ಅವರು ಮಾತಾಡುತ್ತ ಶಿಕ್ಷಣವು ಪ್ರತಿಯೋಬ್ಬರಿಗು ಅವಶ್ಯಕವಾಗಿದೆ. ಕನ್ನಡ ಶಾಲೆಯ ಬಡಶಾಲೆಯಲ್ಲ ಇಲ್ಲಿ ಬರುವು ಶಿಕ್ಷಕರು ಸಮಾನ್ಯರಲ್ಲ ಇವರು ಇಲಾಖೆಮಟ್ಟದಲ್ಲಿ ನಡೆಸುವ ಎಲ್ಲ ಸ್ಪರ್ಧಾ ಪರಿಕ್ಷೆಗಳನ್ನು ಉರ್ತಿಣವಾಗಿ ಮತ್ತು ತಮ್ಮ ಶಿಕ್ಷಣದಲ್ಲಿ ಅತೀ ಹೆಚ್ಚು ಅಂಕಗಳಿಸಿ ಎಲ್ಲ ಜ್ಞಾನ ಹೊಂದಿರುವ ಶಿಕ್ಷಕರು ನೇಮಕವಾಗಿರುತ್ತಾರೆ. ಇತಂಹ ಶಿಕ್ಷಕರನ್ನು ಪಡೆದು ಕನ್ನಡ ಶಾಲೆಯ ಮಕ್ಕಳು ಉನ್ನತ ಅಧಿಕಾರಕ್ಕೆ ಇರುವುದು ತಮ್ಮ ಉದಾಹರಣೆ ಮೂಲಕ ಹೇಳಿದರು. ತಾವು ಸಹಿತ ಕನ್ನಡ ಮಾದ್ಯಮದಲ್ಲಿ ಶಿಕ್ಷಣವನ್ನು ಪಡೆದಿರುವುದನ್ನು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ಭಗತ ಸಿಂಗ ಅವರ ಹಾಗೆ ಇರಬೇಕು. ಭಗತ ಸಿಂಗ್ ಅವರು ತಮ್ಮ ಗಲ್ಲು ಶಿಕ್ಷೆಗೆ ಹೋಗುವುದುಕಿಂತ ಮುಂಚೆ ಕ್ರಾತಿಕಾರಿ ಲೆನಿನ್ ಅವರು ಪುಸ್ತಕವನ್ನು ಓದಿದ್ದರು. ಗ್ರಂಥಾಲಯವನ್ನು ೧೦ ಶಾಲೆಗಳಲ್ಲಿ ಮಾಡುತ್ತಿರುವು ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಕಾರ್ಯವನ್ನು ಮೆಚ್ಚಿದರು.

ನಂತರ  . ಸಿದ್ದಪ್ಪ ನಿರಲೂಟಿ ಮಾತನಾಡಿ ಅವರು ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಪೂರೈಸಿದ ಶ್ರೀ. ರವಿ. ಚನ್ನಣವರ ಉದಾಹರಣೆ ನೀಡುತ್ತ ಕನ್ನಡ ಮಾದ್ಯಮಕ್ಕೆ ಇರುವ ಮೌಲ್ಯಗಳ ಬಗ್ಗೆ ಹೇಳಿದರು.

ನಂತರ ವಂದನೆ ಗುರುಗಳಾದ ಪಾ. ಸತೀಶ ಪರ್ನಾಡೀಸ್ ಅವರು ಮಕ್ಕಳ ಹಕ್ಕಗಳು ಮತ್ತು ಮಕ್ಕಳಿಗಾಗಿ ಇರುವ ಸಂವಿಧಾನ ಬದ್ದ ಹಕ್ಕುಗಳ ಬಗ್ಗೆ ತಿಳಿಸಿ ಹೇಳಿದರು. ಇಂದಿನ ಸರರ್ಕಾರ ಕನ್ನಡ ಮಾದ್ಯಮ ಶಾಲೆಗಳನ್ನು ಮುಂಚುವ ವಿಷಯಗಳ ಸಂವಿಧಾನ ಬದ್ದವಲ್ಲವೆಂದು ಹೇಳಿದರು. ಶಾಲೆಗಳನ್ನು ಮುಚ್ಚವುದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಶಿಕ್ಷಣದಿಂದ ವಂಚಿತಾಗುವ ಸಾದ್ಯತೆ ಇದೆ. ಇದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆತರುವ ವಿಷಯವಾಗಿದೆ ಎಂದು ತಿಳಿಸಿದರು.

ಅದ್ಯಕ್ಷತೆ ಬಾಷಣದಲ್ಲಿ ವಂದನೆ ಗುರುಗಳಾದ ಪಾ. ವಿನೋದ ಮಸ್ಕರನಿಸ್ ಅವರು ಕಪುಚಿನ್ ಕೃಷಿಕ್ ಸೇವಾ ಕೇಂದ್ರ ನಡೆದು ಬಂದು ದಾರಿಯನ್ನು ತಿಳಿಸಿ ಹೇಳಿದರು. ತಮ್ಮ ಸಂಸ್ಥೆಯು ಶಿಕ್ಷಣ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹಗಲಿರಳು ದುಡಿತ್ತಾಇದೆ.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ವೆಂಕಟಗಿರಿ ಯವರು  ಪರಣ್ಣ ಮುನವಳ್ಳಿ ಮತ್ತು   ಪ್ರಕಾಶ ಕಡಗದವರಿಗೆ ಸನ್ಮಾನಿಸಿದರು.

ಕಾರ್ಯಕಮದಲ್ಲಿ   ದೇವಾನಂದ, . ಕೆ. ಮಂಜುನಾಥ, ಅದ್ಯಕ್ಷರು, ಗ್ರಾಮ ಪಂಚಾಯತ ವೆಂಕಟಗಿರಿ,   ಅದ್ಯಕ್ಷರು, ಎ.ಪಿ.ಎಂ.ಸಿ. ಗಂಗಾವತಿ, ೧೦ ಶಾಲೆಯ ಮುಖ್ಯಪಾದೋಯರು, ಎಸ್.ಡಿ.ಎಂ.ಸಿ., ಅದ್ಯಕ್ಷರು, ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

Please follow and like us:
error