ಇಂದು ಮತ್ತೆ ಕೊಪ್ಪಳ ಜಿಲ್ಲೆಗೆ ವಕ್ಕರಿಸಲಿದೆಯಾ ಕರೋನಾ ?

ಕೊಪ್ಪಳ : ಇಂತಹದೊಂದು ಅನುಮಾನ ಜನತೆಯಲ್ಲಿ ಶುರುವಾಗಿದೆ. ಕಳೆದ ಒಂದು ವಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಹಾರಾಷ್ಟ್ರ ಅಷ್ಟೇ ಅಲ್ಲದೆ ಬೇರೆ ಕಡೆಯಿಂದ ಸಂಪರ್ಕಕ್ಕೆ ಬಂದ ಜನರಲ್ಲಿ ಕರೋನಾ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ೧೨ ಪಾಜಿಟಿವ್ ಪ್ರಕರಣಗಳು ದಾಖಲಾಗಿವೆ. ಗಂಗಾವತಿ, ಕಾರಟಗಿ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕೊಪ್ಪಳ ತಾಲೂಕಿನಲ್ಲಿ ಪ್ರಕರಣಗಳು ವರದಿಯಾಗಿವೆ.

ನಿನ್ನೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ೧೫೬ ಜನರ ವರದಿ ಬರಬೇಕಿದೆ. ಇದರಲ್ಲಿ ಪಾಜಿಟಿವ್ ರಿಜಲ್ಟ್ ಬರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಗಂಗಾವತಿಯಲ್ಲಿಯೇ ಇಂದು ಪಾಜಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ? ಎನ್ನಲಾಗುತ್ತಿದೆ. ಇದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ ಜನತೆ ಲಾಕಡೌನ್ ಸಂದರ್ಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸಬೇಕಿದೆ. ಇಲ್ಲವಾದಲ್ಲಿ ಕರೋನಾ ಪಾಜಿಟವ್ ಪ್ರಕರಣ ಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Please follow and like us:
error