ಇಂದು ‘ನಾವ್ಯಾಕೆ ಹಿಂಗಿದ್ದೀವಿ’ ನಾಟಕ ಪ್ರದರ್ಶನ


ಕೊಪ್ಪಳ,ಡಿ.೧೯: ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಭಾಗ್ಯ ನಗರ ಕೊಪ್ಪಳ ಸಂಸ್ಥೆಯು ಬುಧವಾರ ಡಿ.೨೦ರಂದು ಭಾಗ್ಯನಗರ ಪಟ್ಟಣ ಪಂಚಾಯತಿ ಬಯಲು ರಂಗ ಮಂದಿರದಲ್ಲಿ ಸಂಜೆ ೭ಕ್ಕೆ ‘ನಾವ್ಯಾಕೆ ಹಿಂಗಿದ್ದೀವಿ’ ನಾಟಕ ಪ್ರದರ್ಶನ, ಮಕ್ಕಳ ನೃತ್ಯ ರೂಪಕ ಮತ್ತು ಹಾಲ್ಕುರಿಕೆ ರಂಗ ಚೇತನ ಪುರಾಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಕಾರ್ಯದರ್ಶಿ ಹಾಲ್ಕುರಿಕೆ ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.