You are here
Home > Koppal News >  ಇಂದು ನಾಳೆ ಭೈರನಾಯಕನಹಳ್ಳಿ ಜಾತ್ರೆ

 ಇಂದು ನಾಳೆ ಭೈರನಾಯಕನಹಳ್ಳಿ ಜಾತ್ರೆ

ಕೊಪ್ಪಳ : ಯಲಬುಗಾ೯ ತಾಲೂಕಿನ ಭೈರನಾಯಕನಹಳ್ಳಿಯ ಶ್ರೀ ಮಾರುತೇಶ್ವರ ಜಾತ್ರಾಮಹೋತ್ಸವ.
       ಇಂದು ಸಾಯಂಕಾಲ 4-00 ಗಂಟೆಗೆ ಶ್ರೀ ಮಾರುತೇಶ್ವರನಿಗೆ ಬ್ರಾಹ್ಮಣೋತ್ತಮರಿಂದ ಅಭಿಷೇಕ ಪೂಜೆ , ರಾತ್ರಿ 8-00 ಗಂಟೆಗೆ ಶ್ರೀ ಮಾರುತೇಶ್ವರನ ದೇವಾಲಯಕ್ಕೆ ಕಳಸಾರೋಹಣ, ರಾತ್ರಿ 10 ಗಂಟೆಗೆ ಅಗ್ನಿಕುಂಡದಲ್ಲಿ ಅಗ್ನಿ ಸ್ಪರ್ಷ ಮತ್ತು ಮದ್ದು ಸುಡುವದು ನಂತರ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ತದ ನಂತರ ಭಕ್ತಾದಿಗಳಿಂದ ಹರಕೆ ತೀರಿಸುವ ಕಾರ್ಯಕ್ರಮ ಜರುಗುವವು. ನಾಳೆ 05-02-2017ರಂದು ಬೆಳಗ್ಗೆ 5-00  ಗಂಟೆಗೆ ಗಂಗಾ ಪೂಜೆ 5-30 ಗಂಟೆಗೆ ಪಾಯಸ ಪವಾಡ, ಶ್ರೀ ಮಾರುತೇಶ್ವರ ಮತ್ತು ನೂರಾರು ಭಕ್ತಾದಿಗಳಿಂದ ಅಗ್ನಿ (ಪವಾಡ) ಹಾಯುವದು’ 10 -00 ಗಂಟೆಗೆ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಇವರ ಸಾನಿಧ್ಯದಲ್ಲಿ ಉಚ್ಚಯ್ಯ ಎಳೆಯುವದು ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ, 1-00 ಗಂಟೆಯಿಂದ 4-ಗಂಟೆಯವರಿಗೆ ಮುಂಗೈ ಆಟಗಳು ಜರುಗುವವು, ರಾತ್ರಿ 9-00ಗಂಟೆಗೆ ಶ್ರೀ ಮಾರುತೇಶ್ವರ ಮೂರ್ತಿಯು ಡೊಳ್ಳು ಭಜನೆ ಭಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಜರುಗುವದು ಆದ್ದರಿಂದ ಸರ್ವ ಭಕ್ತಾದಿಗಳು ಗಣ್ಯರು ಹಾಗೂ ಸ್ನೇಹಿತರಾದ ತಾವೆಲ್ಲರೂ ಪಾಲ್ಗೊಂಡು ತನು-ಮನ-ಧನದಿಂದ ಸೇವೆಸಲ್ಲಿಸಿ ಶ್ರೀ ಮಾರುತೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲಿ ಕೋರಿಕೆ.

Leave a Reply

Top