ಇಂದು ಡೊಂಬ್ರಳ್ಳಿ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ

ಕೊಪ್ಪಳ :  ತಾಲೂಕಿನ ಡೊಂಬ್ರಳ್ಳಿ ಗ್ರಾಮದಲ್ಲಿ ಶ್ರೀ ಮಾರುತೇಶ ಪಾಂಡುರಂಗ ರುಕ್ಷ್ಮೀಣಿ ಹಾಗೂ ನವಗ್ರಹ ಮತ್ತು ನಾಗಪ್ಪ ದೇವರುಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ . ೬ರಂದು ವಿಜೃಂ‘ಣೆಯಿಂದ ಜರುಗಲಿದೆ.
ಬಿಕನಹಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿ‘ ವಹಿಸಿ ಮೆರವಣಿಗೆಗೆ ಚಾಲನೆ ನೀಡುವರು. ಇದೇ ವೇಳೆ ‘ವ್ಯ ‘ಜನ ಹಾಗೂ ಮಂಗಳ ವಾದ್ಯಗಳೊಂದಿಗೆ ಗಂಗೆ ಪೂಜೆಗೆ ಹೋಗಲಾಗುತ್ತದೆ. ನಂತರ ಗ್ರಾಮದ ರಾಜಬೀದಿಯಲ್ಲಿ ಬೆಳಗ್ಗೆ ೮ ಗಂಟೆಗೆ ಗ್ರಾಮದ ಮುತೈದೆಯರಿಂದ ಕುಂ‘ಗಳೊಂದಿಗೆ ಎಲ್ಲ ಮೂರ್ತಿಗಳ ಮೆರವಣಿಗೆಯು ರಾಜಬೀದಿಯಲ್ಲಿ ಸಾಗಿ ದೇವಸ್ಥಾನ ತಲುಪುವುದು. ಮ. ೧ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ಮ. ೩ಗಂಟೆಗೆ ಹೋಮ ಕಾರ್ಯಕ್ರಮ, ಮೂರ್ತಿಗಳ ಜಲವಾಸ, ‘ನ್ಯವಾಸ, ಗಂ‘ವಾಸ, ಪುಷ್ಪವಾಸ ನಂತರ ಶಹನವಾಸ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಲಿವೆ.
ಸಂಜೆ ೬-೩೦ ಗಂಟೆಗೆ ದೇವಸ್ಥಾನದ ಎದುರು ಹಾಕಿದ ವೇದಿಕೆಯಲ್ಲಿ ಜಾನಪದ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ ಜೋಗಿತಿ ನೃತ್ಯ ರಾಜ್ಯ ಪುರಸ್ಕೃತ, ರೋಣ ತಾಲೂಕಿನ ಕೊತಬಾಳ ಗ್ರಾಮದ ಶಂಕ್ರಪ್ಪ ಸಂಕಣ್ಣನವರು ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ಅರುಣೋದಯ ಕಲಾತಂಡದಲ್ಲಿ ವಿವಿ‘ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ನಂತರ ಪ್ರಸಾದ ವ್ಯವಸ್ಥೆಯಿದೆ.
. ೭ರಂದು ಬೆಳಗ್ಗೆ ೭ ಗಂಟೆಗೆ ಕಾಕಡಾರತಿಯೊಂದಿಗೆ ಆರಂ‘ವಾಗುವ
ಪೂಜೆ ಕಾರ್ಯಗಳ ನಂತರ ಬೆ. ೯ ರಿಂದ ೧೦ ಗಂಟೆಯೊಳಗೆ ಮೂರ್ತಿ ಪ್ರತಿಷ್ಠಾಪನೆ ಜರುಗುವುದು. ನಂತರ ಹೋಮ, ಅವನಾದಿಗಳು ಜರುಗುತ್ತವೆ. ೧೨-೩೦ಕ್ಕೆ ಪ್ರಾರಂ‘ವಾಗುವ ‘ರ್ಮಿಕ ಸ‘ ಸಾನಿ‘ವನ್ನು ಗವಿಮಠದ ಗವಿಶ್ರೀಗಳು ವಹಿಸುವರು. ಶರಣ ಲಕ್ಷ್ಮಣರಾವ್ ಹಂಚಿನಾಳ ‘ಗವಹಿಸಿ ಆದ್ಯಾತ್ಮ ಪ್ರವಚನ ನೀಡುವರು. ಸಂತರಾದ ಲಕ್ಷ್ಮಣರಾವ್ ಡೋಂಗ್ರಿ, ಯಲ್ಲಪ್ಪರಾವ್ ಡೋಂಗ್ರಿ ಕಾರ್ಯಕ್ರಮದಲ್ಲಿ ‘ಗವಹಿಸುವರು. ಮ.೨-೩೦ ಗಂಟೆಗೆ ಮಹಾಪ್ರಸಾದ ನೆರವೇರುವುದು. ಈ ನಿಟ್ಟಿನಲ್ಲಿ ‘ಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಡೊಂಬ್ರಳ್ಳಿ ಗ್ರಾಮಸ್ಥರು ಕೋರಿದ್ದಾರೆ.