ಆಹಾರ ಧಾನ್ಯಗಳ ಕಿಟ್ ವಿತರಿಸಿದ  ಉದ್ಯಮಿ ಶ್ರೀನಿವಾಸ ಗುಪ್ತಾ

ಕೊಪ್ಪಳ : ಲಾಕ್ ಡೌನ್ ನಿಂದ ಸಾರ್ವಜನಿಕರು ಮತ್ತು ಬಡವರು ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಜಿಲ್ಲೆಯಾದ್ಯಂತ ವಿವಿಧ ದಾನಿಗಳು, ಉದ್ಯಮಿಗಳು ರಾಜಕಾರಣಿಗಳು ಅವರ ನೆರವಿಗೆ ನಿಂತಿದ್ದಾರೆ. ಈಗಾಗಲೇ ಸಾವಿರಾರು ಕಾರ್ಮಿಕರಿಗೆ ಆಹಾರ ಸಾಮಾಗ್ರಿ ವಿತರಿಸಿರುವ ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ  ಆಶಾ ಕಾರ್ಯಕರ್ತೆಯರು ಹಾಗೂ 160  ಜನ ಹೋಂಗಾರ್ಡ್ ಗಳಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದರು .

Please follow and like us:
error