ಆಸ್ಪತ್ರೆಯ ನಿರ್ಲಕ್ಷ್ಯ : ಸತ್ತು -ಬದುಕಿ-ಸತ್ತ ಮಹಿಳೆ 

ಕೊಪ್ಪಳ : 6ನೇ ಮಗುವಿಗೆ ಜನ್ಮ ನೀಡಿದ ಮಹಿಳ ಇನ್ನೇನು ಮಕ್ಕಳು ಸಾಕು ಅಂತಾ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ಲು. ಆದ್ರೆ ಆಪರೇಷನ್ ಸಂಧರ್ಭದಲ್ಲಿ ತೀವ್ರ ರಕ್ತಸ್ರಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಿದೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ ಆಸ್ಪತ್ರೆಯವರು ಬೆಳಗಾಗೋದ್ರೋಳಗೆ ಮಹಿಳೆ ಬದುಕಿದ್ದಾಳೆ ಅಂದಿದ್ರಂತೆ.. ಒಂದೇ ದಿನದಲ್ಲಿ ಮಹಿಳೆ ಸಾವನ್ನಪ್ಪಿ-ಬದುಕಿ-ಸಾವನ್ನಪ್ಪಿದ್ದಾಳೆ.
  ಕವಿತಾ ಎನ್ನುವ ಮಹಿಳೆ‌ ಕೊಪ್ಪಳದ ಗೋವನಕೊಪ್ಪ ಆಸ್ಪತ್ರೆಯಲ್ಲಿ 6ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಸಂತಾನಹರಣ ಚಿಕಿತ್ಸೆಗೆ ಒಳಗಾದಾಗ ತೀವ್ರ ರಕ್ತಸ್ರಾವ ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಕೆ.ಎಸ್.ಆಸ್ಪತ್ರೆಗೆ ಶಿಫಾರಸು ಮಾಡಿ, ಶನಿವಾರ ದಾಖಲಿಸಲಾಗಿದೆ. ಸೋಮವಾರ ರಾತ್ರಿ ಕವಿತಾ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದು, ಬಾಣಂತಿ ಶವವನ್ನ ರಾತ್ರಿ ಮನೆಗೆ ಒಯ್ಯಬಾರದು ಎಂಬ ನಂಬಿಕೆಯಿಂದ ಗಂಡ ಮಂಜಪ್ಪ ಮತ್ತು  ಸಂಬಂಧಿಕರು ಬೆಳಗ್ಗೆ ಮೃತದೇಹ ಒಯ್ಯುವುದಾಗಿ ತಿಳಿಸಿ ಪರಿಚಿತರಿಗೆ, ದೂರದ ಸಂಬಂಧಿಕರಿಗೆ ಕವಿತಾ ಮೃತಪಟ್ಟಿದ್ದು ನಾಳೆ ಅಂತ್ಯಕ್ರಿಯೆ ಅಂತ ತಿಳಿಸಿ, ಅಂತ್ಯ ಸಂಸ್ಕಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಸಂಬಂಧಿಕರು ಮೃತದೇಹ ಒಯ್ಯಲು ಮುಂದಾಗುತ್ತಿದ್ದಂತೆ ಕವಿತಾ ಕಣ್ಣು ತೆರೆದಿದ್ದಾಳೆ. ನಾಡಿಗಳು ಮಿಡಿಯುತ್ತಿರುವುದು ಕಂಡು ಬಂದಿದೆ. ಈ ಘಟನೆಯಿಂದ ಕೆಲ ಕ್ಷಣ ಅವಕ್ಕಾದ ಸಂಬಂಧಿಕರು  ಬದುಕಿದವರನ್ನ ಸಾಯಿಸ್ತಿರಾ ಎಂದು ಆಸ್ಪತ್ರೆಯಲ್ಲಿ ಗದ್ದಲ ಗಲಾಟೆ ನಡೆಸಿದ್ರು.

 ಕವಿತಾ ಮೂಲತಃ ಬಾಗಲಕೋಟೆ ಜಿಲ್ಲೆಯ ಇಲಕಲ್ಲಿನವರು. ಸುಮಾರು ಎಂಟು ವರ್ಷಗಳ ಹಿಂದೆ ಕೊಪ್ಪಳದ ಮಂಜಪ್ಪ ಕುಂಬಾರ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಈಚೆಗಷ್ಟೇ ಆರನೇ ಮಗುವಿಗೆ ಜನ್ಮ ನೀಡಿ ಸಂತಾನಹರಣ ಚಿಕಿತ್ಸೆಗೆ ಒಳಗಾದಾಗ ಇಷ್ಟೆಲ್ಲ ರಾದ್ಧಾಂತ ನಡೆದಿದೆ. ಈ ಬಗ್ಗೆ ವೈದ್ಯರು ಹೇಳೋದೇ ಬೇರೆ. ನಾವು ಹೇಳಿದ್ದು ಕವಿತಾಳ ಬ್ರೇನ್ ಡೆತ್ ಆಗಿದೆ ಅಂತ ಸಂಬಂಧಿಕರ ಮುಂದೇ ಹೇಳಿದನ್ನು ತಪ್ಪಾಗಿ ಅರ್ಥೈಸಿಕೊಂಡು ಬೆಳಗ್ಗೆ ಒಯ್ಯುವುದಾಗಿ ತಿಳಿಸಿದ್ರು. ಮತ್ತೊಂದು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುತ್ತಿರಬಹುದು ಎಂದು ಆಸ್ಪತ್ರೆಯ ಸಿಬ್ಬಂದಿ ಸಹ ಸಮ್ಮತಿಸಿದ್ದಾರೆ. ಬೆಳಗ್ಗೆ ನೋಡಿದ್ರೆ ಇಷ್ಟೆಲ್ಲ ರಾದ್ಧಾಂತ ಆಗಿದೆ. ಇದು ಮಿಸ್ ಕಮ್ಯುನಿಕೇಷನ್ ಅಷ್ಟೇ. ಸದ್ಯವೂ ಕೂಡಾ ಕವಿತಾ ಉಸಿರಾಡುತ್ತಿದ್ದು ಆರೋಗ್ಯದ ಸ್ಥಿತಿ ಕ್ಷೀಣಿಸುತ್ತಿದೆ ಎಂದರು. ಆದ್ರೆ ವೈದ್ಯರು ಹೇಳಿದ ಎರಡು ಗಂಟೆಗಳ ನಂತೆ ಕವಿತಾ ಸಾವನ್ನಪ್ಪಿದ್ದಾಳೆ.

 ಕೊಪ್ಪಳದ ಕೆ.ಎಸ್.ಆಸ್ಪತ್ರೆಯಲ್ಲಿ ದೊಡ್ಡ ಹೈಡ್ರಾಮಾನೇ ನಡೆದು ಹೋಯ್ತು. ಕೆಲ ರಾಜಕಾರಣಿಗಳು ಈ ವಿಷಯವನ್ನು ಮುಂದಿಟ್ಟುಕೊಂಡು ರಾಜೀ ಹೆಸರಿನ ವ್ಯವಹಾರಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಅದೇನೇ ಇರಲಿ. ಕವಿತಾ ಒಂದೇ ದಿನಗಳಲ್ಲಿ ಸತ್ತು-ಬದುಕಿ- ಮತ್ತೆ ಸಾವನ್ನಪ್ಪಿದ ವಿಚಾರ ಸಂಬಂಧಿಕರಲ್ಲಿ ಧಿಗ್ಭ್ರಂತರನ್ನಾಗಿ ಮಾಡಿದ್ದು ಸುಳ್ಳಲ್ಲ.

Please follow and like us:
error